ಕಾರಟಗಿ ರೈಲ್ವೆ ನಿಲ್ದಾಣ ಹಸೀರಿಕರಣಗೊಳಿಸಿದ ಪತ್ತಾರ

Team Udayavani, Jun 5, 2022, 1:06 PM IST

5

ಕಾರಟಗಿ: ವೃತ್ತಿಯಲ್ಲಿ ಅಕ್ಕಸಾಲಿಗನಾಗಿದ್ದರೂ ಬಿಡುವಿನ ವೇಳೆ ಸದಾ ಹಸಿರು ಸೇವೆಯಲ್ಲಿ ನಿರತನಾಗಿರುವ ಪರಿಸರ ಪ್ರೇಮಿ. ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿ ವೀರಭದ್ರಪ್ಪ ಪತ್ತಾರ ಹಲವು ದಶಕಗಳಿಂದ ಅಕ್ಕಸಾಲಿಗ ವೃತ್ತಿ ಮಾಡುತ್ತ ಬಂದಿದ್ದು, ಇದರೊಂದಿಗೆ ಗ್ರಾಮದ ಸರಕಾರಿ ಶಾಲಾ-ಕಾಲೇಜ್‌, ಸೇರಿದಂತೆ ರೈಲ್ವೆ ನಿಲ್ದಾಣವನ್ನು ನಿಸ್ವಾರ್ಥವಾಗಿ ಹಸೀರಿಕರಣಗೊಳಿಸುವಲ್ಲಿ ಸತತವಾಗಿ ಶ್ರಮಿಸುತ್ತಿದ್ದಾರೆ.

ವೀರಭದ್ರಪ್ಪ ಪತ್ತಾರ ಬರಿ ಪರಿಸರ ಪ್ರೇಮಿ ಅಷ್ಟೇ ಅಲ್ಲ. ಶಿಕ್ಷಣ ಪ್ರೇಮಿಯೂ ಹೌದು. ಗ್ರಾಮದ ಹೊರವಲಯದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು ಕೆಲ ತಿಂಗಳ ಹಿಂದೆ ರೈಲ್ವೆ ಸಂಚಾರವೂ ಆರಂಭವಾಗಿದೆ. ರೈಲ್ವೆ ನಿಲ್ದಾಣದಲ್ಲಿ ಗಿಡ-ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಲಾಖೆ ವಿವಿಧ ಬಗೆಯ ಸಸಿಗಳನ್ನು ತಂದು ಇಟ್ಟಿದ್ದರು. ಆದರೆ ಎರಡ್ಮೂರು ದಿನಗಳಾದರೂ ಸಸಿ ನೆಟ್ಟಿರಲಿಲ್ಲ. ರೈಲ್ವೆ ನಿಲ್ದಾಣದ ಕಡೆ ನಿತ್ಯ ಹೊಗುತ್ತಿದ್ದ ವೀರಭದ್ರಪ್ಪ ಪತ್ತಾರ ಅವರು ಗಿಡಗಳು ಬಾಡುತ್ತಿರುವುದು ಕಂಡು ಸಂಬಂಧಿ ಸಿದವರನ್ನು ಭೇಟಿಯಾಗಿ ಅವುಗಳನ್ನು ನಾಟಿ ಮಾಡಿ ಪೋಷಿಸುತ್ತೇನೆ ಎಂದು ಕೇಳಿಕೊಂಡರು. ಅವರು ಒಪ್ಪಿಗೆ ಪಡೆದು ರೈಲ್ವೆ ನಿಲ್ದಾಣ ಇಕ್ಕೆಲಗಳಲ್ಲಿ ಸಸಿ ನಾಟಿ ಮಾಡಿ ಅವುಗಳನ್ನು ಪೋಷಿಸಿದರು.

ಅವುಗಳು ಈಗ ಬೆಳೆದು ಒಂದು ಹಂತಕ್ಕೆ ಬಂದಿದ್ದು, ರೈಲ್ವೆ ನಿಲ್ದಾಣಕ್ಕೆ ಬರುವ ಬರುವ ಪ್ರಯಾಣಿಕರಿಗೆ ಹಸಿರು, ಗಿಡ-ಮರಗಳು ಮನಸ್ಸಿಗೆ ಮದ ನೀಡುತ್ತಿವೆ. ಅಲ್ಲದೇ ವೀರಭದ್ರಪ್ಪ ಪತ್ತಾರ ಮೊದಲಿನಿಂದಲೂ ಮನೆಯ ಅಕ್ಕಪಕ್ಕ, ಶಾಲೆಗಳ ಆವರಣದಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಪಕ್ಷಿ ಸಂಕುಲವೂ ಹೆಚ್ಚಲಿ ಅವುಗಳು ಎಂಬ ದೃಷ್ಟಿಯಿಂದ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್ನಲ್ಲಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಿಕೊಳ್ಳಲು ಸಣ್ಣಸಣ್ಣ ಬಟ್ಟಲುಗಳಲ್ಲಿ ನೀರು ಇಡುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಜನತೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದು, ನಿಲ್ದಾಣದ ಹೊರಗೆ ಮತ್ತು ಒಳಗೆ ಕೂಡಲು ಪ್ರಶಾಂತವಾದ ಸ್ಥಳ, ಸೋಂಪಾದ ಗಾಳಿ ಬೀಸುತ್ತಿದ್ದರಿಂದ ಬೆಳಗ್ಗೆ ನಿಲ್ದಾಣದಲ್ಲಿ ಧ್ಯಾನ, ಯೋಗ ಮಾಡುತ್ತಾರೆ. ವಾಯುವಿಹಾರ ನಡೆಸುತ್ತಾರೆ.

ಮೊದಲಿನಿಂದಲೂ ಉತ್ತಮ ಪರಿಸರ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಹಾಗೆಯೇ ರೈಲ್ವೆ ನಿಲ್ದಾಣದಲ್ಲಿ ಗಿಡಮರಗಳನ್ನು ಬೆಳೆಸಿ ಪ್ರಯಾಣಿಕರಿಗೆ ನೆರಳು, ಶುದ್ಧ ಗಾಳಿ ಸಿಗಲಿ, ಪಕ್ಷಿ ಸಂಕುಲ ಬೆಳೆಯಲಿ ಎಂಬ ಉದ್ದೇಶದಿಂದ ಸ್ವಯಂ ಪ್ರೇರಿತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥ ಇಲ್ಲ. ಯಾರಿದಂಲೂ ನಾನು ಯಾವುದೇ ಸಹಾಯ ಪಡೆದಿಲ್ಲ. ಯಾರು ಸಹಾಯ ಮಾಡಲು ಬಂದಿಲ್ಲ. ಸಿದ್ದಾಪುರ ರೈಲ್ವೆ ನಿಲ್ದಾಣ ಮಾದರಿ ನಿಲ್ದಾಣವನ್ನಾಗಿ ಮಾಡಬೇಕೆಂಬುದು ನನ್ನ ಆಶಯ ವೀರಭದ್ರಪ್ಪ ಪತ್ತಾರ, ಪರಿಸರ ಪ್ರೇಮಿ            

„ದಿಗಂಬರ ಎನ್‌. ಕುರ್ಡೆಕರ

ಟಾಪ್ ನ್ಯೂಸ್

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Karnataka: ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramesh-BYV

BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್‌ ಜಾರಕಿಹೊಳಿ; ಬಿವೈವಿ ಆಕ್ರೋಶ

8-1

Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.