ಬೆಂಗಳೂರಿನಲ್ಲಿ ರಣಜಿ ಸುಗ್ಗಿ: ಏಕಕಾಲಕ್ಕೆ 4 ಕ್ವಾರ್ಟರ್‌ ಫೈನಲ್ಸ್‌

ಸೆಮಿಫೈನಲ್ಸ್‌, ಫೈನಲ್‌ ಕೂಡ ಇಲ್ಲಿಯೇ; ಕರ್ನಾಟಕಕ್ಕೆ ಉತ್ತರ ಪ್ರದೇಶ ಎದುರಾಳಿ

Team Udayavani, Jun 6, 2022, 6:45 AM IST

ಬೆಂಗಳೂರಿನಲ್ಲಿ ರಣಜಿ ಸುಗ್ಗಿ: ಏಕಕಾಲಕ್ಕೆ 4 ಕ್ವಾರ್ಟರ್‌ ಫೈನಲ್ಸ್‌

ಬೆಂಗಳೂರು: ಭಾರತದ ದೇಶಿ ಕ್ರಿಕೆಟಿನ ರಾಜ ಎನಿಸಿರುವ “ರಣಜಿ ಟ್ರೋಫಿ’ ಪಂದ್ಯಾವಳಿ ಐಪಿಎಲ್‌ ಬ್ರೇಕ್‌ ಬಳಿಕ ಸೋಮವಾರದಿಂದ ಬೆಂಗಳೂರಿನಲ್ಲಿ ಮುಂದು ವರಿಯಲಿದೆ. ಐಪಿಎಲ್‌ಗ‌ೂ ಮೊದಲು ಗ್ರೂಪ್‌ ಹಂತದ ಲೀಗ್‌ ಸ್ಪರ್ಧೆಗಳು ಮುಗಿದಿದ್ದವು. ಇನ್ನು ನಾಕೌಟ್‌ ಪಂದ್ಯ ಗಳ ಸರದಿ. 4 ಕ್ವಾರ್ಟರ್‌ ಫೈನಲ್ಸ್‌, 2 ಸೆಮಿಫೈನಲ್ಸ್‌ ಹಾಗೂ ಫೈನಲ್‌ ಒಳ ಗೊಂಡ ಏಳೂ ಪಂದ್ಯಗಳು ಬೆಂಗಳೂರಿ ನಲ್ಲಿ ನಡೆಯಲಿರುವುದು ವಿಶೇಷ.

ಮಾರ್ಚ್‌ 6ಕ್ಕೆ ರಣಜಿ ಟ್ರೋಫಿ ಲೀಗ್‌ ಹಂತದ ಪಂದ್ಯಗಳೆಲ್ಲ ಮುಗಿದಿದ್ದವು. ಬಳಿಕ ಜಾರ್ಖಂಡ್‌-ನಾಗಾಲ್ಯಾಂಡ್‌ ನಡುವೆ 8ನೇ ಸ್ಥಾನಕ್ಕಾಗಿ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯವೊಂದು ನಡೆದಿತ್ತು. ಇದೀಗ ಭರ್ತಿ 3 ತಿಂಗಳ ಬ್ರೇಕ್‌ ಬಳಿಕ ರಣಜಿ ಟ್ರೋಫಿ ಪಂದ್ಯಾವಳಿ ಮುಂದುವರಿಯುತ್ತಿದೆ. ಆಲೂರಿನ 3 ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಜಸ್ಟ್‌ ಕ್ರಿಕೆಟ್‌ ಅಕಾಡೆಮಿ ಗ್ರೌಂಡ್‌ ಈ ಪಂದ್ಯಗಳ ಆತಿಥ್ಯ ವಹಿಸಲಿದೆ.

ಕರ್ನಾಟಕ-ಯುಪಿ ಮುಖಾಮುಖಿ
ಸೋಮವಾರ ಆರಂಭವಾಗಲಿರುವ 5 ದಿನಗಳ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದ ಎದುರಾಳಿ ಉತ್ತರಪ್ರದೇಶ. ಅಧಿಕೃತವಾಗಿ ಇದು 3ನೇ ಕ್ವಾರ್ಟರ್‌ ಫೈನಲ್‌ ಮುಖಾಮುಖಿ. ಉಳಿದ 3 ಪಂದ್ಯಗಳಲ್ಲಿ ಬಂಗಾಲ-ಜಾರ್ಖಂಡ್‌, ಮುಂಬಯಿ-ಉತ್ತರಾಖಂಡ . ಮತ್ತು ಪಂಜಾಬ್‌-ಮಧ್ಯಪ್ರದೇಶ ಎದುರಾಗಲಿವೆ.
ಕರ್ನಾಟಕ “ಸಿ’ ವಿಭಾಗದಲ್ಲಿ ಅಗ್ರ ಸ್ಥಾನ ಅಲಂಕರಿಸಿದ ತಂಡ (16 ಅಂಕ). ಉತ್ತರಪ್ರದೇಶ “ಜಿ’ ವಿಭಾಗದ ಅಗ್ರಸ್ಥಾನಿ. ಆದರೆ ಗಳಿಸಿದ್ದು 13 ಅಂಕ ಮಾತ್ರ. ಎರಡೂ ತಂಡಗಳು ಮೂರರಲ್ಲಿ ಎರಡನ್ನು ಗೆದ್ದು, ಒಂದನ್ನು ಡ್ರಾ ಮಾಡಿಕೊಂಡಿದ್ದವು.

ಕರ್ನಾಟಕ ತಂಡವನ್ನು ಮನೀಷ್‌ ಪಾಂಡೆ ಮುನ್ನಡೆಸಲಿದ್ದಾರೆ. ಮಾಯಾಂಕ್‌ ಅಗರ್ವಾಲ್‌, ಆರ್‌. ಸಮರ್ಥ್, ಕರುಣ್‌ ನಾಯರ್‌, ದೇವದತ್ತ ಪಡಿಕ್ಕಲ್‌, ಕೆ. ಸಿದ್ಧಾರ್ಥ್ ಬ್ಯಾಟಿಂಗ್‌ ವಿಭಾಗದ ಪ್ರಮುಖರು. ಕೆ.ಎಲ್‌. ರಾಹುಲ್‌ ಟಿ20 ಸರಣಿ ಯಲ್ಲಿ ಟೀಮ್‌ ಇಂಡಿಯಾವನ್ನು ಮುನ್ನಡೆ ಸಲಿರುವುದರಿಂದ ರಣಜಿಯಿಂದ ಬೇರ್ಪಟ್ಟಿದ್ದಾರೆ.
ವೇಗಿ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ಗೆ ತೆರಳುವ ಟೆಸ್ಟ್‌ ತಂಡದಲ್ಲಿರುವುದರಿಂದ ರೆಸ್ಟ್‌ ಪಡೆದಿದ್ದಾರೆ. ಅನೀಶ್ವರ್‌ ಗೌತಮ್‌, ಶ್ರೇಯಸ್‌ ಗೋಪಾಲ್‌, ಕೃಷ್ಣಪ್ಪ ಗೌತಮ್‌, ಜಗಿªàಶ್‌ ಸುಚಿತ್‌ ಪ್ರಮುಖ ಆಲ್‌ರೌಂಡರ್. ಬೌಲಿಂಗ್‌ ವಿಭಾಗ ರೋನಿತ್‌ ಮೋರೆ, ವಿದ್ಯಾಧರ ಪಾಟೀಲ್‌, ವಿಜಯ್‌ ಕುಮಾರ್‌ ವೈಶಾಖ್‌, ವಿ. ಕೌಶಿಕ್‌ ಅವರನ್ನು ಒಳಗೊಂಡಿದೆ. ಉಡುಪಿ ಮೂಲದ ಬೌಲರ್‌ ಶುಭಾಂಗ್‌ ಹೆಗ್ಡೆ, ಮಂಗಳೂರು ವಲಯದ ವಿದ್ವತ್‌ ಕಾವೇರಪ್ಪ ಕೂಡ ತಂಡದಲ್ಲಿದ್ದಾರೆ. ಆತಿ ಥೇಯ ತಂಡವಾªರಿಂದ ಕರ್ನಾಟಕದ ಮೇಲುಗೈಯನ್ನು ನಿರೀಕ್ಷಿಸಲಾಗಿದೆ.

ಕರಣ್‌ ಶರ್ಮ ನೇತೃತ್ವದ ಉತ್ತರಪ್ರದೇಶ ಕೂಡ ಸಾಕಷ್ಟು ಬಲಿಷ್ಠ ತಂಡ. ಐಪಿಎಲ್‌ನಲ್ಲಿ ಮಿಂಚಿದ ರಿಂಕು ಸಿಂಗ್‌, ಅಂಡರ್‌-19 ವಿಶ್ವಕಪ್‌ ತಂಡದ ನಾಯಕ ಪ್ರಿಯಂ ಗರ್ಗ್‌, ಶಿವಂ ಮಾವಿ, ಅಂಕಿತ್‌ ರಜಪೂತ್‌, ಮೊಹ್ಸಿನ್‌ ಖಾನ್‌, ಯಶ್‌ ದಯಾಳ್‌ ಅವರಂಥ ಸ್ಟಾರ್‌ ಆಟಗಾರರನ್ನು ಹೊಂದಿದೆ.

ಕರ್ನಾಟಕ ತಂಡ: ಮನೀಷ್‌ ಪಾಂಡೆ (ನಾಯಕ), ಆರ್‌. ಸಮರ್ಥ್ (ಉಪನಾಯಕ), ಮಾಯಾಂಕ್‌ ಅಗರ್ವಾಲ್‌, ದೇವದತ್ತ ಪಡಿಕ್ಕಲ್‌, ಕರುಣ್‌ ನಾಯರ್‌, ಕೆ.ವಿ. ಸಿದ್ಧಾರ್ಥ, ಡಿ. ನಿಶ್ಚಲ್‌, ಎಸ್‌. ಶರತ್‌ (ವಿ.ಕೀಪರ್‌), ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಶುಭಾಂಗ್‌ ಹೆಗ್ಡೆ, ಜೆ. ಸುಚಿತ್‌, ಕೆ.ಸಿ. ಕಾರಿಯಪ್ಪ, ರೋನಿತ್‌ ಮೋರೆ, ವಿ. ಕೌಶಿಕ್‌, ವಿ. ವೈಶಾಖ್‌, ಎಂ. ವೆಂಕಟೇಶ್‌, ವಿದ್ವತ್‌ ಕಾವೇರಪ್ಪ, ಕಿಶನ್‌ ಎಸ್‌. ಬೆದರೆ. ಮುಖ್ಯ ತರಬೇತುದಾರ: ಯೆರ್ರೆ ಗೌಡ.

ಟಾಪ್ ನ್ಯೂಸ್

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.