ಶ್ರೀ ಲಕ್ಷ್ಮೀ ವಿಷ್ಣು ಮಹಾಯಜ್ಞ, ಕೊರಗಜ್ಜ ದೈವದ ನೇಮ, ಶೋಭಯಾತ್ರೆ
Team Udayavani, Jun 6, 2022, 12:08 PM IST
ಮುಂಬಯಿ: ಮಲಾಡ್ ಪೂರ್ವದ ಧಾರ್ಮಿಕ ಸಂಸ್ಥೆಗಳಲೊಂದಾದ ತಥಾಸ್ತು ಮಿತ್ರ ಮಂಡಳಿ (ರಿ.) ಇದರ ವತಿಯಿಂದ ಜೂನ್ 4ರಂದು ಶ್ರೀ ಲಕ್ಷ್ಮೀ ವಿಷ್ಣು ಮಹಾಯಜ್ಞ ಮತ್ತು ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಸಕಲ ಧಾರ್ಮಿಕ ಕಾರ್ಯಗಳು ವೇ|ಮೂ| ಸತೀಶ್ ಭಟ್, ಚಂದ್ರಶೇಖರ ಗುರೂಜಿ ಇವರ ಪೌರೋಹಿತ್ಯದಲ್ಲಿ ಮತ್ತು ನರೇಶ್ ಪೂಜಾರಿ ಇವರ ನೇತೃತ್ವದಲ್ಲಿ ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಲಾಡ್ ಪೂರ್ವದ ಗೋವಿಂದ್ ನಗರದಲ್ಲಿರುವ ಶ್ರೀ ರುದ್ರ ಭದ್ರಕಾಳಿ ದೇವಸ್ಥಾನದಿಂದ ಭವ್ಯ ಶೋಭಯಾತ್ರೆ ಮೂಲಕ ಮಲಾಡ್ ಪೂರ್ವದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ಬಂದು ಉತ್ಕರ್ಷ ಶಾಲಾ ಮೈದಾನಕ್ಕೆ ತಲುಪಿತು. ಮಲಾಡ್ ಪೂರ್ವದ ಕುರಾರ್ ವಿಲೇಜ್‌ನಲ್ಲಿರುವ ಕೊರಗಜ್ಜ ಸಾನಿಧ್ಯದ ಪ್ರಧಾನ ಅರ್ಚಕ ನರೇಶ್ ಪೂಜಾರಿ ಇವರ ಮುಂದಾಳತ್ವದಲ್ಲಿ ಕೊರಗಜ್ಜನ ನೇಮೋತ್ಸವಕ್ಕೆ ಸಕಲ ಸಿದ್ಧತೆಯೊಂದಿಗೆ ನೇಮಕ ಪೂರ್ವಭಾವಿ ಪನಿಯಾರ ಸೇವೆ, ಅಗೇಲ್ ಸೇವೆ, ಕಾರ್ಯಗಳು ಜರಗಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಬಳಿಕ ಸತೀಶ್ ಭಟ್ ಮತ್ತು ವಿಪ್ರಾ ವೃಂದದವರಿಂದ ಶ್ರೀ ಲಕ್ಷ್ಮೀ ವಿಷ್ಣು ಮಹಾಯಜ್ಞ, ಶೋಭಯಾತ್ರೆ ಯಶಸ್ವಿಯಾಗಿ ನಡೆಯುವಲ್ಲಿ ತಥಾಸ್ತು ಫೌಂಡೇಶನ್‌ನ ಪದಾಧಿಕಾರಿಗಳು, ಧನರಾಜ್ ಶೆಟ್ಟಿ, ನವೀನ್ ಅಂಚನ್, ಜಗನ್ನಾಥ ಕೋಟ್ಯಾನ್, ಸೋನಮ್ ನಾಯರ್, ವಿಜಯಾ ಶೆಟ್ಟಿ, ದಿನೇಶ್ ಅಮೀನ್. ದಿನೇಶ್ ಸಾಲ್ಯಾನ್, ದಿನೇಶ್ ಪೂಜಾರಿ ಸಹಕರಿಸಿದರು. ಸಂಜೆ ಕೊರಗಜ್ಜನ ನೇಮೋತ್ಸವ ನಡೆಯಿತು. ಈ ಎಲ್ಲ ಧಾರ್ಮಿಕ ಕಾರ್ಯಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಧಾರ್ಮಿಕ ಮುಂದಾಳು, ಪುರೋಹಿತ ವೇ|ಮೂ|ಸತೀಶ್ ಭಟ್ ಅವರು ಸ್ಥಾಪಿಸಿರುವ ತಥಾಸ್ತು ಮಿತ್ರ ಮಂಡಳಿ ಮಲಾಡ್ ಕಳೆದ ಹಲವಾರು ವರ್ಷಗಳಿಂದ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕೆಲಸಗಳನ್ನು ಮಾಡುತ್ತಿದ್ದು, ಅಯ್ಯಪ್ಪನ ಮಹಾಪೂಜೆ ಪ್ರತಿವರ್ಷ ಸಂಭ್ರಮದಿಂದ ಮಾಡುತ್ತಿದ್ದು ಅದರೊಂದಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಕಡುಬಡತನದ ಕುಟುಂಬಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.