![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 6, 2022, 7:22 PM IST
ರಬಕವಿ-ಬನಹಟ್ಟಿ: ಶಿಕ್ಷಕರು ಮತ್ತು ಪದವೀಧರ ನೋವುಗಳು, ಸಂಕಟಗಳು ಬಹಳಷ್ಟು ಇವೆ. ಶಿಕ್ಷರ ಸಮಸ್ಯೆಗಳು ಹಿಂದೆಯೇ ಇದ್ದವು. ಈಗಲೂ ಇವೆ. ಆದ್ದರಿಂದ ಶಿಕ್ಷಕರ ಮತ್ತು ಪದವಿಧರರ ಒಳಿತಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.
ಸೋಮವಾರ ಅವರು ಸ್ಥಳೀಯ ಜನತಾ ಶಿಕ್ಷಣ ಸಂಘದ ಸಭಾ ಭವನದಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.
ಪ್ರಕಾಶ್ ಹುಕ್ಕೇರಿ ರಾಜಕಾರಣದಲ್ಲಿ ಬಹಳಷ್ಟು ಅನುಭವ, ಬದ್ಧತೆ, ಸಂಸ್ಕಾರವನ್ನು ಹೊಂದಿದ ವ್ಯಕ್ತಿಯಾಗಿದ್ದಾರೆ. ಈಗಾಗಲೇ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಶಿಕ್ಷಕರ ಮತ್ತುಪದವೀಧರ ಸಂಕಷ್ಟಗಳ ನಿವಾರಣೆಗಾಗಿ ಸ್ಪಂದಿಸಲಿದ್ದಾರೆ. ಅದೇ ರೀತಿಯಾಗಿ ಪದವೀಧರ ಮತಕ್ಷೇತ್ರದಿಂದ ಸಂಕ ಅಭ್ಯರ್ಥಿಯಾಗಿದ್ದು, ಹೊಸಬರಿಗೆ ಅವಕಾಶ ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಉಮಾಶ್ರೀ ಕೂಡಾ ಯಾವಾಗಲೂ ತಮ್ಮ ಜೊತೆಗೆ ಇರುತ್ತಾರೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ರಬಕವಿ ಬನಹಟ್ಟಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಭದ್ರನವರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ರಾಮಣ್ಣ ಭದ್ರನವರ, ಶಂಕರ ಜಾಲಿಗಿಡದ, ಮಲ್ಲಪ್ಪ ಸಿಂಗಾಡಿ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ, ಪ್ರಕಾಶ ರಾಚನ್ನವರ, ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್, ಚಿದಾನಂದ ಗಾಳಿ, ಶೇಖರ ಹಕ್ಕಲದಡ್ಡಿ, ಮಾರುತಿ ಸೋರಗಾವಿ, ಬಸವರಾಜ ಗುಡೋಡಗಿ, ಕಿರಣ ಕರಲಟ್ಟಿ ಸೇರಿದಂತೆ ಅನೇಕರು ಇದ್ದರು.
ಈ ಸಂದರ್ಭದಲ್ಲಿ ಜನತಾ ಶಿಕ್ಷಣ ಸಂಘದ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.