ತಿಂಗಳಿಗೆ 24 ರೈಲ್ವೇ ಟಿಕೆಟ್ ಬುಕಿಂಗ್ ಮಾಡಲು ಅವಕಾಶ; ರೈಲಿನಲ್ಲಿ ಸಾತ್ವಿಕ ಊಟ
Team Udayavani, Jun 7, 2022, 7:30 AM IST
ಹೊಸದಿಲ್ಲಿ: ಐಆರ್‌ಸಿಟಿಸಿ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಮಾಡುವವರಿಗೆ ಐಆರ್‌ಸಿಟಿಸಿ ಶುಭಸುದ್ದಿ ಕೊಟ್ಟಿದೆ.
ತಿಂಗಳಿಗೆ ಬುಕಿಂಗ್ ಮಾಡಬಹುದಾದ ಟಿಕೆಟ್‌ಗಳ ಮಿತಿಯನ್ನು 12ರಿಂದ 24ಕ್ಕೆ ಏರಿಸಲಾಗಿದೆ.
ನಿಮ್ಮ ಐಆರ್‌ಸಿಟಿಸಿ ಖಾತೆಯು ಆಧಾರ್ ಸಂಖ್ಯೆ ಯೊಂದಿಗೆ ಲಿಂಕ್ ಆಗಿದ್ದರೆ, ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕಿಂಗ್ ಮಾಡ ಬಹುದು. ಹಾಗೆ ಮಾಡು ವಾಗ ಪ್ರಯಾಣಿಕರಲ್ಲಿ ಒಬ್ಬರು ಆಧಾರ್ ಲಿಂಕ್ ಆಗಿರುವ ವ್ಯಕ್ತಿಯಾಗಿರಬೇಕು. ಹಾಗೆಯೇ ಆಧಾರ್ ಲಿಂಕ್ ಆಗಿರದ ಖಾತೆ ಬಳಸಿಕೊಂಡು ತಿಂಗಳಿಗೆ 12 ಟಿಕೆಟ್‌ಗಳವರೆಗೆ ಬುಕಿಂಗ್ ಮಾಡಬಹುದು. ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಐಆರ್‌ಸಿಟಿಸಿ ಸೋಮವಾರ ತಿಳಿಸಿದೆ.
ಈ ಹಿಂದೆ ಆಧಾರ್ ಲಿಂಕ್ ಆಗಿರುವ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 12 ಮತ್ತು ಆಧಾರ್ ಲಿಂಕ್ ಆಗದ ಖಾತೆಗಳ ಮೂಲಕ ತಿಂಗಳಿಗೆ ಗರಿಷ್ಠ 6 ಟಿಕೆಟ್ ಬುಕಿಂಗ್‌ಗೆ ಮಾತ್ರ ಅವಕಾಶವಿತ್ತು.
ರೈಲಿನಲ್ಲಿ ಸಾತ್ವಿಕ ಊಟ
ರೈಲಿನಲ್ಲಿ ತೆರಳುವ ಪ್ರಯಾಣಿಕರಿಗೆ ಊಟದ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಐಆರ್‌ಸಿಟಿಸಿ “ಫುಡ್ ಆನ್ ಟ್ರ್ಯಾಕ್’ ಹೆಸರಿನ ಹೊಸ ಆ್ಯಪ್ ಒಂದನ್ನು ಪರಿಚಯಿಸಿದೆ. ಈ ಆ್ಯಪ್‌ನಲ್ಲಿ ಪ್ರಯಾಣಿಕರು ತಮ್ಮ ಪಿಎನ್‌ಆರ್ ನಮೂದಿಸಿದರೆ, ನಿಮ್ಮ ರೈಲು ತೆರಳಲಿರುವ ಮುಂದಿನ ನಿಲ್ದಾಣಗಳಲ್ಲಿ ಸಿಗುವ ರೆಸ್ಟೋರೆಂಟ್‌ಗಳು ಕಾಣಸಿಗುತ್ತವೆ. ನೀವು ಆ ರೆಸ್ಟೋರೆಂಟ್‌ಗಳಿಂದ ನಿಮಗೆ ಇಷ್ಟವಾದ ಊಟ, ತಿಂಡಿಯನ್ನು ಆರ್ಡರ್ ಮಾಡಿಕೊಳ್ಳಬಹುದು. ಆ ನಿಲ್ದಾಣಕ್ಕೆ ರೈಲು ಹೋಗಿ ನಿಂತ ತತ್‌ಕ್ಷಣ ನಿಮ್ಮ ಸೀಟಿಗೇ ನೀವು ಆರ್ಡರ್ ಮಾಡಿದ ಆಹಾರ ಬಂದು ತಲುಪುತ್ತದೆ.
www.ecatering.irctc.co.in ಈ ವೆಬ್‌ಸೈಟ್ ಮೂಲಕವೂ ನೀವು ನಿಮ್ಮಿಷ್ಟದ ಆಹಾರವನ್ನು ಆರ್ಡರ್ ಮಾಡಬಹುದು ಎಂದು ಐಆರ್‌ಸಿಟಿಸಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.