ಚರಣ್‌ರಾಜ್‌ ಹತ್ಯೆ: ಬಂಧಿತರ ಸಂಖ್ಯೆ ಆರಕ್ಕೇರಿಕೆ : ಕಾರ್ಯಾಚರಣೆ ಪೂರ್ಣ

ಮತ್ತೆ ಮೂವರು ಪೊಲೀಸ್‌ ವಶಕ್ಕೆ

Team Udayavani, Jun 7, 2022, 1:38 AM IST

ಚರಣ್‌ರಾಜ್‌ ಹತ್ಯೆ: ಬಂಧಿತರ ಸಂಖ್ಯೆ ಆರಕ್ಕೇರಿಕೆ : ಕಾರ್ಯಾಚರಣೆ ಪೂರ್ಣ

ಪುತ್ತೂರು: ಪೆರ್ಲಂಪಾಡಿ ಯಲ್ಲಿ ಜೂ. 4ರಂದು ಸಂಜೆ ಹತ್ಯೆಗೀಡಾದ ಚರಣ್‌ರಾಜ್‌ ರೈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯದಲ್ಲಿ ಭಾಗಿಯಾದ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದು ಈ ಮೂಲಕ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.

ಹಿಂಜಾವೇ ಕಾರ್ಯದರ್ಶಿ ಕಾರ್ತಿಕ್‌ ಸುವರ್ಣ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ದು, ಪ್ರಕರಣದ ಪ್ರಮುಖ ಸೂತ್ರಧಾರಿ ರೌಡಿಶೀಟರ್‌ ಕಿಶೋರ್‌ ಪೂಜಾರಿ ಕಲ್ಲಡ್ಕ (34) , ಸಹಚರರಾದ ರಾಕೇಶ್‌ ಮಡಿವಾಳ (27), ರೇಮಂತ್‌ ಗೌಡ (26) ನನ್ನು ಜೂ. 6 ರಂದು ಸೋಮವಾರಪೇಟೆಯಲ್ಲಿ ಬಂಧಿಸಲಾಗಿದೆ

ಎಂದು ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್‌ ಭಗವಾನ್‌ ಸೋನಾವಣೆ ಅವರು ತಿಳಿಸಿದ್ದಾರೆ.ಹಂತಕರ ಬಂಧನಕ್ಕೆ ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿರುವ ಪುತ್ತೂರು ಗ್ರಾಮಾಂತರ, ಸುಳ್ಯ ಮತ್ತು ಬೆಳ್ಳಾರೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣದ ಎಲ್ಲ ಆರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದೆ.

ಕಾರಿನಲ್ಲಿ ಕೊಡಗಿಗೆ ಪರಾರಿ
ಕೊಲೆ ಮಾಡಿದ ಬಳಿಕ ಆರೋಪಿ ರೇಮಂತ್‌ನ ಬೈಕ್‌ನಲ್ಲಿ ಬೆಳ್ಳಾರೆಯ ನಿಂತಿಕಲ್‌ಗೆ ಬಂದು ಬೈಕ್‌ ಅಲ್ಲಿರಿಸಿ ಆಟೋ ವೊಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಸುಬ್ರಹ್ಮಣ್ಯಕ್ಕೆ ತೆರಳಿದ್ದರು. ಸುಬ್ರಹ್ಮಣ್ಯದಿಂದ ಬಾಡಿಗೆ ಕಾರಿನಲ್ಲಿ ಬಿಸಿಲೆ ಮಾರ್ಗವಾಗಿ ಸಕಲೇಶಪುರದ ಹತ್ತೂರು ಎನ್ನುವಲ್ಲಿಗೆ ತಲುಪಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಸುತ್ತಾಡಿಕೊಂಡು ಬಾಡಿಗೆ ಕಾರಿನಲ್ಲಿ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸುಳ್ಯ ಎಸ್ಸೆ„ ದಿಲೀಪ್‌ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಹಾಸನ, ಕೊಡಗು ಪೊಲೀಸರು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

ಜೈಲಿನಲ್ಲೇ ಸಂಚು
ಕಾರ್ತಿಕ್‌ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರೀತೇಶ್‌ ಶೆಟ್ಟಿ ಪರ ಕಾರ್ತಿಕ್‌ ಕುಟುಂಬಸ್ಥರು ಸಾಕ್ಷಿ ಹೇಳಬೇಕು ಎಂದು ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿ ಡೀಲ್‌ ಕುದುರಿಸಲು ಮುಂದಾಗಿದ್ದ ವಿಚಾರ ದಲ್ಲಿ ದರ್ಬೆ ಪೆಟ್ರೋಲ್‌ ಬಂಕ್‌ ಬಳಿ ರಾಧಾಕೃಷ್ಣ ಪೂಜಾರಿಯ ಕೊಲೆಗೆ ಯತ್ನಿಸಿದ ಕೇಸಿನಲ್ಲಿ ಕಿಶೋರ್‌ ಪೂಜಾರಿ ಕಲ್ಲಡ್ಕ, ರಾಕೇಶ್‌ ಪಂಚೋಡಿ, ರೇಮಂತ್‌ ಮತ್ತಿತರರು ಜೈಲು ಸೇರಿದ್ದರು. ಅಲ್ಲೇ ಕಾರ್ತಿಕ್‌ ಕೊಲೆಗೆ ಪ್ರತೀಕಾರ ತೀರಿಸಲು ಸಂಚು ಮಾಡಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಈ ಕೃತ್ಯ ನಡೆಸಿದ್ದಾರೆ.

ಆರೋಪಿಗಳಿಂದಲೇ ಮಾಹಿತಿ ಸಂಗ್ರಹ!
ಚರಣ್‌ರಾಜ್‌ ರೈ ಕೊಲೆ ಪ್ರಕರಣದಲ್ಲಿ ರವಿವಾರ ಬಂಧಿತರಾಗಿದ್ದ ಕೆಯ್ಯೂರು ನೂಜಿ ನಿವಾಸಿ ನರ್ಮೆàಶ್‌ ರೈ (29), ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ನಿತಿಲ್‌ ಶೆಟ್ಟಿ (23) ಕಡಬ ತಾಲೂಕಿನ ಬೆಳಂದೂರು ಮರಕಲ ನಿವಾಸಿ ವಿಜೇಶ್‌ (22) ನನ್ನು ತನಿಖೆಗೆ ಒಳಪಡಿಸಿ ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಕಿಶೋರ್‌ ಪೂಜಾರಿ ಕಲ್ಲಡ್ಕ, ರಾಕೇಶ್‌ ಪಂಚೋಡಿ ಮತ್ತು ರೇಮಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 

 

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.