ಪತ್ನಿಯಿಂದಲೇ ಗಂಡನ ಕೊಲೆಗೆ ಸುಪಾರಿ
Team Udayavani, Jun 7, 2022, 1:39 PM IST
ದೊಡ್ಡಬಳ್ಳಾಪುರ: ನಗರದ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿನ ಬಾಂಬೆರೇಯಾನ್ ಬಳಿ ಶಿಕ್ಷಣ ಇಲಾಖೆ ನೌಕರರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ, ಪ್ರಕರಣವನ್ನು ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತಂತೆ ಸೋಮವಾರ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ವಂಶಿಕೃಷ್ಣ ಮಾಹಿತಿ ನೀಡಿದರು. ಮೇ 25ರಂದು ಬೀರಸಂದ್ರದಲ್ಲಿನ ಡಿಡಿಪಿಐ ಕಚೇರಿಯಲ್ಲಿ ಕರ್ತವ್ಯ ಮುಗಿಸಿ, ಮನೆಗೆ ತೆರಳುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ಕಾರನ್ನು ಅಡ್ಡಗಟ್ಟಿದ್ದ ಇಬ್ಬರು ಆರೋಪಿಗಳು, ಕಾರನ್ನು ಜಖಂಗೊಳಿಸಿ, ಕಾರನ್ನು ಚಲಾಯಿಸುತ್ತಿದ್ದ ಸಿಬ್ಬಂದಿ ಮುಕುಂದ ಅವರ ಮೇಲೆ ಹಲ್ಲೆ ನಡೆಸಿದ್ದ ಕುರಿತಾಗಿ ಕಾರಿನಲ್ಲಿದ್ದ ಹನುಮಂತರಾಜು ಎನ್ನುವವರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳನ್ನು ಬಂಧಿಸಿ ತನಿಖೆ: ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ., ಅಪರ ಪೊಲೀಸ್ ಅಧಿಕ್ಷಕ ಲಕ್ಷ್ಮೀಗಣೇಶ್, ಡಿವೈಎಸ್‌ಪಿ ನಾಗರಾಜ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ಕೆ.ಜಿ.ಪಂಕಜ, ಪಿಎಸ್‌ಐ ಪ್ರಶಾಂತ್, ಸಿಬ್ಬಂದಿ ರಾಧಾಕೃಷ್ಣ, ದತ್ತಾತ್ರೇಯ, ರಂಗನಾಥ್, ಗಂಗಯ್ಯ, ಮುತ್ತುರಾಜ್ ಅವರ ತಂಡ ಪ್ರಕರಣವನ್ನು ಭೇದಿಸಿ, ಶಿಡ್ಲಘಟ್ಟದ ಮೌಲಾ (36), ಕೆ.ಜಿ.ಹಳ್ಳಿ ನಿವಾಸಿ ಸೈಯದ್ ನಹೀಮ್ (32), ಟಿ.ದಾಸರಹಳ್ಳಿಯ ತಸ್ಲೀಮ್ (45),ದೂರದಾರ ಮುಕುಂದ ಪತ್ನಿ ಮಮತಾ(44) ಎಂಬ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಗಾಯಾಳು ಮುಕುಂದ ಅವರ ಪತ್ನಿ ಮಮತಾ ಎಂಬುವವರೇ ಗಂಡನ ಕೊಲೆ ಮಾಡುವಂತೆ ನಮಗೆ ಸೈಯದ್ ನಹೀಂ, ಸಮೀರ್ ಮತ್ತಿ ತಸ್ಲೀಮ್ ಅವರ ಕಡೆಯಿಂದ 40 ಲಕ್ಷಕ್ಕೆ ಸುಪಾರಿ ಕೊಟ್ಟು ಮುಂಗಡವಾಗಿ 10 ಲಕ್ಷ ರೂ., ಪಡೆದು ಅಲ್ಮಲ್, ರೋಷನ್, ಗೌಸ್ ಪಿರ್ ಅವರ ಜೊತೆ ಒಳ ಸಂಚು ರೂಪಿಸಿ, ಮುಕುಂದನನ್ನು ಕೊಲೆ ಮಾಡಲು ಮೇ 25ರಂದು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹಣ, ಮೊಬೈಲ್ ಕಳ್ಳರ ಬಂಧನ: ಇನ್ನೊಂದು ಪ್ರಕರಣದಲ್ಲಿ ಏಪ್ರಿಲ್ 29ರಂದು ತಾಲೂಕಿನ ಮೆಳೇಕೋಟೆ ಗ್ರಾಮದ ನಿವಾಸಿ ರಾಜಣ್ಣ ಅವರು ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದ್ದ 25ಸಾವಿರ ರೂ., ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಮೆಳೇಕೋಟೆ ಕ್ರಾಸ್ ಬಳಿ ಹೋಗುತ್ತಿರುವಾಗ ಮೂರು ಜನ ದಾರಿ ಕೇಳುವ ನೆಪದಲ್ಲಿ ವಾಹನ ಅಡ್ಡಕಟ್ಟಿ, ಚಾಕು ತೋರಿಸಿ ರಾಜಣ್ಣ ಅವರ ಬಳಿಯಿಂದ ಹಣ, ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಆರೋಪಿಗಳನ್ನು 30 ದಿನಗಳಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಾಗವಾರದ ಸೈಯದ್ ಸಲೀಂ(25), ಸೈಯದ್ ಅಬೀಬ್ ಉಲ್ಲಾ(25) ಎಂಬ ಆರೋಪಿಗಳನ್ನು ಬಂಧಿಸಿ, 10 ಸಾವಿರ ರೂ. ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ನಾಗರಾಜಾ, ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್, ಇನ್ಸ್ ಪೆಕ್ಟರ್ ಸತೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.