ಕಾಮನ್‌ವೆಲ್ತ್‌ ಗೇಮ್ಸ್‌ : ವನಿತಾ ತಂಡಕ್ಕೆ ದಿಯಾ ಚಿತಾಲೆ ಸೇರ್ಪಡೆ


Team Udayavani, Jun 7, 2022, 11:15 PM IST

ಕಾಮನ್‌ವೆಲ್ತ್‌ ಗೇಮ್ಸ್‌ : ವನಿತಾ ತಂಡಕ್ಕೆ ದಿಯಾ ಚಿತಾಲೆ ಸೇರ್ಪಡೆ

ಹೊಸದಿಲ್ಲಿ: ವನಿತೆಯರ ಕಾಮನ್‌ವೆಲ್ತ್‌ ಗೇಮ್ಸ್‌ ತಂಡದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಭಾರತದ ಯುವ ಟೇಬಲ್‌ ಟೆನಿಸ್‌ ಆಟಗಾರ್ತಿ ದಿಯಾ ಚಿತಾಲೆ ಅವರನ್ನು ಮಂಗಳವಾರ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಅವರಿಗಾಗಿ ಅರ್ಚನಾ ಕಾಮತ್‌ ಅವರನ್ನು ಕೈಬಿಡಲಾಗಿದೆ.

ಆದರೆ ಪುರುಷರ ತಂಡದಲ್ಲಿ ಯಾವುದೇ ಬದಲಾವಣೆ ಮಾಡ ಲಿಲ್ಲ. ಮನುಷ್‌ ಶಾ ಅವರು ಮೀಸಲು ಆಟಗಾರರಾಗಿ ಮುಂದುವರಿಯ ಲಿದ್ದಾರೆ. ಅವರು ಕೂಡ ತಂಡದಿಂದ ಕೈಬಿಟ್ಟ ಕಾರಣ ದಿಲ್ಲಿ ಹೈಕೋರ್ಟ್‌ ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಪುರುಷರ ತಂಡವನ್ನು ಶರತ್‌ ಕಮಲ್‌ ಮುನ್ನಡೆಸಲಿದ್ದಾರೆ.

ಅಮಾನತುಗೊಂಡಿರುವ ಭಾರತೀಯ ಟೇಬಲ್‌ ಟೆನಿಸ್‌ ಫೆಡರೇ ಶನ್‌ನ ಆಡಳಿತ ವ್ಯವಹಾರ ನೋಡಿ ಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಕಳೆದ ವಾರ ವನಿತೆಯರ ಸಂಭಾವ್ಯ ತಂಡವನ್ನು ಪ್ರಕಟಿಸಿತ್ತು. ಮನಿಕಾ ಬಾತ್ರಾ, ಕಾಮತ್‌, ಶ್ರೀಜಾ ಅಕುಲಾ ಮತ್ತು ರೀತ್‌ ರಿಶ್ಯ ತಂಡದಲ್ಲಿದ್ದರೆ 19ರ ಹರೆಯದ ದಿಯಾ ಚಿತಾಲೆ ಮೀಸಲು ಆಟಗಾರ್ತಿಯಾಗಿದ್ದರು.

ಈ ತಂಡವು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಅನುಮತಿ ಪಡೆಯ ಬೇಕಿತ್ತು. ಆದರೆ ಸೋಮವಾರ ಕ್ರೀಡಾ ಸಚಿವಾಲಯವು ಚೆಂಡನ್ನು ಮತ್ತೆ ಸಿಒಎ ಅಂಗಳಕ್ಕೆ ಎಸೆದಿದ್ದು ತಂಡದ ಆಯ್ಕೆಯು ರಾಷ್ಟ್ರೀಯ ಕ್ರೀಡಾ ಫೆಡರೇ ಶನ್‌ನ ಜವಾಬ್ದಾರಿಯೆಂದು ಹೇಳಿದೆ.

ಸಿಒಎ ಸದಸ್ಯ ಎಸ್‌.ಡಿ. ಮೌದ್ಗಿಲ್‌ ಅಧ್ಯಕ್ಷತೆಯ ಆಯ್ಕೆ ಸಮಿತಿ ಸೋಮವಾರ ಮತ್ತೆ ಸಭೆ ಸೇರಿ ತಂಡ ವನ್ನು ಅಂತಿಮಗೊಳಿಸಿದೆ. ಮನಿಕಾ ಜತೆ ಡಬಲ್ಸ್‌ನಲ್ಲಿ ಆಡಬೇಕಿದ್ದ ಕಾಮತ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು ಸ್ವಸ್ತಿಕಾ ಘೋಷ್‌ ಅವರನ್ನು ಮೀಸಲು ಆಟಗಾರ್ತಿಯನ್ನಾಗಿ ಹೆಸರಿಸಲಾಗಿದೆ.

ತಂಡದಲ್ಲಿ ಕೇವಲ ಒಂದು ಮಾತ್ರ ಬದಲಾವಣೆ ಮಾಡಲಾಗಿದೆ. ಅರ್ಚನಾ ಅವರ ಬದಲಿಗೆ ದಿಯಾ ನಾಲ್ಕನೇ ಆಟಗಾರ್ತಿಯಾಗಿ ತಂಡಕ್ಕೆ ಬಂದಿದ್ದಾರೆ. ಪದಕ ಗೆಲ್ಲುವ ಭರವಸೆ ಇದ್ದರೂ ಅರ್ಚನಾ ತಂಡಕ್ಕೆ ಆಯ್ಕೆಯಾಗಬೇಕಾದ ಮಾನದಂಡ ವನ್ನು ಪೂರೈಸಿಲ್ಲ.. ಹೀಗಾಗಿ ಅವರ ಆಯ್ಕೆ ಬಗ್ಗೆ ನಮ್ಮಲ್ಲಿ ಗೊಂದಲ ವಿತ್ತು. ಹೀಗಾಗಿ ಸಾಯ್‌ ಅವರ ಮಾರ್ಗ ದರ್ಶನ ಪಡೆಯಲು ತೀರ್ಮಾನಿಸಿದ್ದೆವು ಎಂದು ಮೌದ್ಗಿಲ್‌ ಹೇಳಿದರು.

ತಂಡಗಳು 
ಪುರುಷರು: ಶರತ್‌ ಕಮಲ್‌, ಜಿ. ಸಥಿಯನ್‌, ಹರ್ಮೀತ್‌ ದೇಸಾಯಿ, ಸನಿಲ್‌ ಶೆಟ್ಟಿ, ಮನುಷ್‌ ಶಾ (ಮೀಸಲು ಆಟಗಾರ).
ವನಿತೆಯರು: ಮನಿಕಾ ಬಾತ್ರಾ, ದಿಯಾ ಚಿತಾಲೆ, ರೀತ್‌ ರಿಶ್ಯ, ಶ್ರೀಜಾ ಅಕುಲಾ, ಸ್ವಸ್ತಿಕಾ ಘೋಷ್‌ (ಮೀಸಲು ಆಟಗಾರ್ತಿ).

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.