ವಿಶ್ವ ಸಾಗರ ದಿನದ ಪ್ರಯುಕ್ತ ಕಾಪು ಬೀಚ್ ಸ್ವಚ್ಛತಾ ಕಾರ್ಯಕ್ರಮ
Team Udayavani, Jun 8, 2022, 3:25 PM IST
ಕಾಪು : ವಿಶ್ವ ಸಾಗರಗಳ ದಿನದ ಅಂಗವಾಗಿ ಕಾಪು ಪುರಸಭೆ, ಟಿಪ್ಸ್ ಸೆಷನ್ಸ್, ಕಾಪು ಬೀಚ್ ನಿರ್ವಹಣಾ ಸಮಿತಿ, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಇವರ ಸಹಯೋಗದಲ್ಲಿ ಬುಧವಾರ ಕಾಪು ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮಾತನಾಡಿ, ಕರಾವಳಿಯ ಬೀಚ್‌ಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬೀಚ್ ಸ್ವಚ್ಚವಾಗಿದ್ದರೆ ಮಾತ್ರಾ ಸುಂದರತೆಯು ಶೋಭಿಸಲು ಸಾಧ್ಯವಿದೆ. ವಿಶ್ವಸಾಗರ ದಿನದ ಅಂಗವಾಗಿ ಸಾಂಕೇತಿಕವಾಗಿ ಕಾಪುವಿನಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾಗರ ದಿನವನ್ನು ಸಾಗರ ದಡದಲ್ಲಿ ಆಚರಿಸಿದರಷ್ಟೇ ಮಹತ್ವ ಸಿಗುತ್ತದೆ. ಅದಕ್ಕೆ ಪೂರಕವಾಗಿ ಟಿಪ್ಸ್ ಸೆಷನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಬೀಚ್ ಸ್ಚಚ್ಚತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇದನ್ನೂ ಓದಿ : ತಮಿಳುನಾಡು ಭಾರತ ಸರ್ಕಾರಕ್ಕೆ ಸೂಚನೆ ನೀಡುವಂತಿಲ್ಲ: ಸಿಎಂ ಬೊಮ್ಮಾಯಿ
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಪುರಸಭಾ ಸದಸ್ಯರಾದ ರತ್ನಕರ ಶೆಟ್ಟಿ, ನಿತಿನ್, ಸರಿತಾ ಪೂಜಾರಿ,ಶೋಭಾ ಬಂಗೇರ, ನೂರುದ್ದೀನ್, ವಿದ್ಯಲತಾ, ನವೀನ್ ಅಮೀನ್, ಟಿಪ್ಸ್ ಸಂಸ್ಥೆಯ ಶರತ್, ಜಾನ್ ರತ್ನಾಕರ್, ಸಂಪತ್, ಗಣೇಶ್, ಪುರಸಭೆ ಆರೋಗ್ಯಾಧಿಕಾರಿ ದಿನೇಶ್ ಕುಮಾರ್, ಪರಿಸರ ಇಂಜಿನಿಯರ್ ರವಿಶಂಕರ್, ಕಾಪು ಮೊಗವೀರ ಮಹಾಸಭಾದ ಅಧ್ಯಕ್ಷ ಕುಶ ಸಾಲ್ಯಾನ್, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ನ ಲಾಲಾಜಿ ಪುತ್ರನ್, ಸಂತೋಷ್ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.