![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 9, 2022, 10:10 AM IST
ತಮಿಳುನಾಡಿನ ಚಿದಂಬರಂನಲ್ಲಿರುವ ಪ್ರಸಿದ್ಧ ನಟರಾಜ ದೇವಸ್ಥಾನ ಈಗ ವಿವಾದಕ್ಕೀಡಾಗಿದೆ. ಈ ದೇಗುಲದ ವಿಚಾರವಾಗಿ ತಮಿಳು ನಾಡು ಸರಕಾರ ಮತ್ತು ಅರ್ಚಕರ ನಡುವೆ ದೊಡ್ಡ ಗದ್ದಲವೇ ಏರ್ಪ ಟ್ಟಿದೆ. ಇದಕ್ಕೆ ಕಾರಣ, ದೇಗುಲದ ಆಡಳಿತ ಮತ್ತು ಆರ್ಥಿಕ ವಿಷಯಗಳ ಪರಿಶೀಲನೆ ಮಾಡಲು ಸರಕಾರ ಮುಂದಾಗಿರುವುದು. ಈ ಕುರಿತ ಒಂದು ಸೂಕ್ಷ್ಮ ನೋಟ ಇಲ್ಲಿದೆ.
ನಟರಾಜ ದೇವಾಲಯ
ಸುಮಾರು 12ನೇ ಶತಮಾನದಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ಸ್ಥಾಪಿಸಿರುವ ದೇಗುಲವಿದು. ಇಲ್ಲಿ ಶಿವನನ್ನು ನಟರಾಜನ ರೂಪದಲ್ಲಿ ನೋಡಬಹುದು. ಹಾಗೆಯೇ ಈ ದೇಗುಲ ಕಂಬಗಳಿಂದಾಗಿಯೂ ಹೆಚ್ಚು ಪ್ರಸಿದ್ಧಿ. ನೃತ್ಯ ಸಭಾ ಮಂಟಪದಲ್ಲಿ 50, ರಾಜಸಭಾದಲ್ಲಿ 1000, ಶತಶಿಲಾದಲ್ಲಿ 100 ಕಂಬಗಳಿವೆ. ಭರತನಾಟ್ಯದ 108 ಪ್ರಕಾರ ಕೆತ್ತಲಾಗಿದೆ.
ವಿವಾದವೇನು?
ಆಡಳಿತ ಮಂಡಳಿ ಅವ್ಯವಹಾರ ನಡೆಸಿದೆ ಎಂಬ ಆರೋಪ ಸಂಬಂಧ ದೂರುಗಳು ಸಲ್ಲಿಕೆಯಾಗಿವೆ. ಹೀಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸುವ ಸಲುವಾಗಿ ಸರಕಾರದ ಪ್ರತಿನಿಧಿಗಳು ಮಂಗಳವಾರ ದೇಗುಲಕ್ಕೆ ಹೋಗಿದ್ದರು. ಆದರೆ ಅಲ್ಲಿನ ಅರ್ಚಕರನ್ನು ಒಳಗೊಂಡ ಆಡಳಿತ ಮಂಡಳಿ ಇವರಿಗೆ ದೇಗುಲದೊಳಗೆ ಬರಲು ಅನುಮತಿ ನೀಡಿಲ್ಲ.
ಅರ್ಚಕರ ವಿರೋಧವೇಕೆ?
ಈ ದೇಗುಲದ ನಿರ್ವಹಣೆ ವಿಚಾರದಲ್ಲಿ ಅರ್ಚಕರು ಮತ್ತು ಸರಕಾರದ ನಡುವಿನ ತಿಕ್ಕಾಟ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ಅಲ್ಲಿ ಪೂಜೆಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಗಳು ದೀಕ್ಷಿತರಿಗೆ ಮತ್ತು ಆಡಳಿತ ಹಾಗೂ ಹಣಕಾಸು ನಿರ್ವಹಣೆ ಸರಕಾರದ ಬಳಿ ಇರಬೇಕು ಎಂದು ಸುಪ್ರೀಂ ತೀರ್ಪು ನೀಡಿತ್ತು.
ಸರಕಾರದ ವಾದವೇನು?
2014ರಲ್ಲೇ ಸುಪ್ರೀಂಕೋರ್ಟ್ ಈ ಬಗ್ಗೆ ಆದೇಶ ನೀಡಿರುವುದರಿಂದ ದೇಗುಲದಲ್ಲಿನ ಆಡಳಿತ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ. ಜತೆಗೆ ಈ ಬಗ್ಗೆ ಹಲವಾರು ಆರೋಪಗಳು ಬಂದಿರುವುದರಿಂದ ಪರಿಶೀಲನೆ ನಡೆಸುತ್ತಿದ್ದೇವೆ. ಒಂದು ವೇಳೆ ಅಕ್ರಮ ಕಂಡು ಬಂದಿಲ್ಲವೆಂದರೆ, ಹೆದರಿಕೆ ಏಕೆ ಎಂದು ಸಂಬಂಧಪಟ್ಟ ಸಚಿವರು ಪ್ರಶ್ನಿಸಿದ್ದಾರೆ.
Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?
ಬಚ್ಚನ್, ಮೋಹನ್‌ಲಾಲ್ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.