ಗ್ಯಾಂಗ್ ರೇಪ್: ಎಐಎಂಐಎಂ ಶಾಸಕನ ಮಗ, ಅಳಿಯನ ಸೆರೆ
Team Udayavani, Jun 9, 2022, 12:52 AM IST
ಹೈದರಾಬಾದ್: ಕಳೆದ ತಿಂಗಳು ತೆಲಂಗಾಣದ ಹೈದರಾಬಾದ್ನಲ್ಲಿ 17 ವರ್ಷದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ಮಂಗಳವಾರ ಎಐಎಂಐಎಂ ಶಾಸಕರೊಬ್ಬರ ಮಗ ಹಾಗೂ ಅಳಿಯನನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದಂತಾಗಿದೆ.
ಶಾಸಕರ ಮಗನ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಅತ್ಯಾಚಾರದ ಆರೋಪ ಆತನ ವಿರುದ್ಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಆರೋಪಿಗಳು ಅತ್ಯಾಚಾರಕ್ಕೆ ಬಳಸಿದ ಇನೋವಾ ಕಾರು ಆರೋಪಿಯ ತಂದೆಗೆ ಸರಕಾರ ನೀಡಿರುವ ಕಾರಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 28ರಂದು ಪಬ್ನಲ್ಲಿದ್ದ ಯುವತಿಯನ್ನು ಮನೆಗೆ ಬಿಡುವ ನೆಪದಲ್ಲಿ ಎಂಟು ಮಂದಿ ಅಪ್ರಾಪ್ತರು 2 ಕಾರಿನಲ್ಲಿ ಕರೆದೊಯ್ದಿದ್ದಾರೆ.
ಅವರು ಆಕೆಗೆ ಮುತ್ತಿಡುವ ವೀಡಿಯೋಗಳನ್ನೂ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ಜುಬಿಲಿ ಹಿಲ್ಸ್ ಬಳಿ ಇನೋವಾ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.