ಬೆಳೆ ವಿಮೆ ಪಾವತಿ ಸಮಸ್ಯೆಗೆ ಕೊನೆ ಎಂದು?
ಒಂದಕ್ಕಿಂತ ಹೆಚ್ಚು ಜಮೀನುಳ್ಳ ರೈತರ ಬೆಳೆ ವಿಮೆ ಪಾವತಿಗೆ ಪ್ರಾಬ್ಲಂ
Team Udayavani, Jun 9, 2022, 11:57 AM IST
ತೆಲಸಂಗ: ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಆನ್ ಲೈನ್ ಅರ್ಜಿ ಹಾಕುವಾಗ ಉಂಟಾಗಿದ್ದ ಸಮಸ್ಯೆ ಪರಿಹಾರವಾಗಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದು, ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ ಬೆಳೆಗಾರರಿಗೆ ಮತ್ತೂಂದು ಸಮಸ್ಯೆ ಎದುರಾಗಿದೆ.
ಪ್ರಸಕ್ತ ವರ್ಷ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಯ ಆನ್‌ಲೈನ್ ಅರ್ಜಿ ಆ್ಯಪ್ ಮರುವಿನ್ಯಾಸಗೊಳಿಸಿದ್ದರಿಂದ ರೈತರು ವಿಮೆ ಭರಿಸಲು ಪರದಾಡುವಂತಾಗಿತ್ತು. ಪಹಣಿ ಪತ್ರದಲ್ಲಿನ ಹೆಸರು, ಆಧಾರ ಕಾರ್ಡ್‌ಲ್ಲಿನ ಹೆಸರು ತಿರುವು ಮುರುವಾಗಿದ್ದರೂ ವಿಮೆ ಅರ್ಜಿ ತಿರಸ್ಕಾರಗೊಳ್ಳುತ್ತಿತ್ತು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಧಿಕಾರಿಗಳು ಸಮಸ್ಯೆ ಪರಿಹರಿಸಿದ್ದು, ಎಲ್ಲ ರೈತರು ವಿಮೆ ಪಾವತಿಸಬಹುದಾಗಿದೆ. ಆದರೆ ಇದೀಗ ಅದೇ ಆ್ಯಪ್‌ಲ್ಲಿ ಮತ್ತೂಂದು ಸಮಸ್ಯೆ ಎದುರಾಗಿದೆ.
ಏನದು ಸಮಸ್ಯೆ: ಒಬ್ಬ ರೈತ ಬೇರೆ ಬೇರೆ ಸರ್ವೇ ನಂ. ನ ಒಂದಕ್ಕಿಂತ ಹೆಚ್ಚು ಭೂಮಿ ಹೊಂದಿದ್ದರೆ ಒಂದು ಜಮೀನಿನ ಬೆಳೆ ವಿಮೆ ಪಾವತಿಸಿದ ಬಳಿಕ ಇನ್ನೊಂದು ಸರ್ವೇ ಸಂಖ್ಯೆಯ ಬೆಳೆಗೆ ವಿಮೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್ ಅರ್ಜಿ ಹಣ ಪಾವತಿ ಮಾಡುವಾಗ ರಿಜೆಕ್ಟ್ ಮಾಡುತ್ತಿದೆ. ಇದರಿಂದ ಒಂದಕ್ಕಿಂತ ಹೆಚ್ಚು ಜಮೀನು ಹೊಂದಿದ ರೈತರು ವಿಮೆ ಭರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅನೇಕ ರೈತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದು, ಸಮಸ್ಯೆ ಸರಿಪಡಿಸಲು ಆಗ್ರಹಿಸಿದ್ದಾರೆ.
ಹೆಸರು ಮ್ಯಾಚ್ ಆಗದ್ದನ್ನು ಸರಿಪಡಿಸಲಾಗಿದೆ. ರೈತರು ಇವತ್ತಿನಿಂದ ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು. ಸದ್ಯ ಇವತ್ತಿಂದ ಒಂದೇ ಭೂಮಿಯ ಬೆಳೆಗೆ ಮಾತ್ರ ವಿಮೆ ಪಾವತಿ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನೂ ಸರಿಪಡಿಸುವ ಕೆಲಸ ಮಾಡುತ್ತೇವೆ. – ಶ್ವೇತಾ ಹಾಡಕರ್, ತೋಟಗಾರಿಕಾ ನಿರ್ದೇಶಕರು, ಅಥಣಿ.
ನಮ್ಮದು ಮೂರು ದ್ರಾಕ್ಷಿ ತೋಟಗಳಿವೆ. ಸದ್ಯ ಒಂದಕ್ಕೆ ವಿಮೆ ಪಾವತಿಸಿದ್ದೇನೆ. ಇನ್ನೂ ಎರಡು ದ್ರಾಕ್ಷಿ ತೋಟಗಳಿಗೂ ವಿಮೆ ಪಾವತಿಸಬೇಕಿದೆ. ಆನ್‌ಲೈನ್ ಅರ್ಜಿ ಸ್ವೀಕರಿಸುತ್ತಿಲ್ಲ. ಈ ಹಿಂದೆ ಹೀಗಿರಲಿಲ್ಲ. ಪ್ರಸಕ್ತ ವರ್ಷ ಈ ಸಮಸ್ಯೆ ಎದುರಾಗಿದ್ದು, ತಕ್ಷಣದಿಂದಲೇ ಸರಿಪಡಿಸಿದರೆ ಅನುಕೂಲವಾಗುತ್ತದೆ. – ಬಸೀರಹ್ಮದ ಮುಜಾವರ, ದ್ರಾಕ್ಷಿ ಬೆಳೆಗಾರ, ತೆಲಸಂಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.