![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jun 9, 2022, 12:53 PM IST
ಸಮಸ್ತಿಪುರ್: ಬಿಹಾರದಲ್ಲಿ ನಡೆದ ಮನಕಲುಕುವ ಘಟನೆಯೊಂದರಲ್ಲಿ ಮೃತದೇಹವನ್ನು ಬಿಡುಗಡೆ ಮಾಡಲು 50 ಸಾವಿರ ರೂ. ಲಂಚವನ್ನು ಕೇಳಿದ್ದಾರೆಂದು ಆರೋಪಿಸಿ ತಮ್ಮ ಮಗನ ಶವವನ್ನು ಬಿಡುಗಡೆ ಮಾಡುವ ಸಲುವಾಗಿ ಯುವಕನ ಪೋಷಕರು ಭಿಕ್ಷೆ ಬೇಡಿ ಹಣ ಸಂಗ್ರಹಿಸಲು ಮುಂದಾದ ಬಗ್ಗೆ ವರದಿಯಾಗಿದೆ.
ಕೆಲ ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದ. ಈಗ, ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿದೆ. ನನ್ನ ಮಗನ ಶವವನ್ನು ಬಿಡಿಸಲು ಆಸ್ಪತ್ರೆಯ ಉದ್ಯೋಗಿ 50 ಸಾವಿರ ರೂ. ಕೇಳಿದ್ದಾರೆ. ನಾವು ಬಡವರು, ಈ ಮೊತ್ತವನ್ನು ಹೇಗೆ ಪಾವತಿಸುವುದು ಎಂದು ಮೃತ ಯುವಕನ ತಂದೆ ಮಹೇಶ್ ಠಾಕೂರ್ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.
ನಾವು ಖಂಡಿತವಾಗಿಯೂ ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ, ಹೊಣೆಗಾರರನ್ನು ಬಿಡುವುದಿಲ್ಲ ಎಂದು ಸಮಸ್ತಿಪುರದ ಸಿವಿಲ್ ಸರ್ಜನ್ ಡಾ ಎಸ್‌ಕೆ ಚೌಧರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಾನು ನಡೆಸಿದ ಪ್ರಾಥಮಿಕ ತನಿಖೆಯು ದಂಪತಿಗಳ ಆರೋಪಗಳು ಸುಳ್ಳು ಎಂದು ತಿಳಿದುಬಂದಿದೆ. ಯಾವುದೇ ಉದ್ಯೋಗಿ ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಎಂ ವಿನಯ್ ಕುಮಾರ್ ರಾಯ್ ಹೇಳಿಕೆ ನೀಡಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.