ನೇರಳೆಹಣ್ಣು ದುಬಾರಿ: ವ್ಯಾಪಾರ ಭರ್ಜರಿ; ಔಷಧೀಯ ಗುಣವುಳ್ಳ ನೇರಳೆ ಹಣ್ಣಿಗೆ ಬಹುಬೇಡಿಕೆ
ಜಂಬುನೇರಳೆ ಹಣ್ಣಿನಲ್ಲಿ ನೈಸರ್ಗಿಕ ಆಮ್ಲಿಯ ಪದಾರ್ಥಗಳಿದ್ದು, ದೇಹದಲ್ಲಿ ಜೀರ್ಣ ಕ್ರಿಯೆಗೆ ಅನುಕೂಲವಾಗಲಿದೆ
Team Udayavani, Jun 9, 2022, 4:25 PM IST
ದೇವನಹಳ್ಳಿ: ಮಾವಿನಹಣ್ಣಿನ ಭರಾಟೆ ನಡುವೆ ಮಾರುಕಟ್ಟೆಗೆ ಬಂದಿರುವ ಜಂಬುನೇರಳೆ ಹಣ್ಣಿನ ಸುಗ್ಗಿ ಪ್ರಾರಂಭವಾಗಿದೆ. ಅನೇಕ ರೋಗ ನಿಯಂತ್ರಿಸುವ ಗುಣವುಳ್ಳ ಹಣ್ಣಿಗೆ ಬೆಲೆ ಕೇಳಿದೊಡನೆ ಜನರು ಹಿಂಜರಿಯುಂತಾಗಿದೆ. ಜೂನ್ ತಿಂಗಳೆಂದರೆ ನೇರಳೆಹಣ್ಣಿನ ಸುಗ್ಗಿ. ಹಲವಾರು ಔಷಧಿ ಗುಣಗಳನ್ನು ಹೊಂದಿರುವ ನೇರಳೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ನೇರಳೆ ಹಣ್ಣು ದುಬಾರಿಯಾಗಿದ್ದರೂ ಸಹ ಗ್ರಾಹಕರು ಖರೀದಿ ಜೋರಾಗಿಯೇ ನಡೆದಿದೆ.
ಕಾಡಿನಲ್ಲಿ ಬೆಳೆಯುವ ಹಣ್ಣು: ಹೆಚ್ಚಾಗಿ ಕಾಡಿನಲ್ಲೇ ಬೆಳೆಯುವ ನೇರಳೆಹಣ್ಣಿಗೆ ಪಟ್ಟಣ, ನಗರ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಹಣ್ಣು. ಹೀಗಾಗಿಯೇ ಮಾರುಕಟ್ಟೆಯಲ್ಲಿ ನೇರಳೆಹಣ್ಣಿಗೆ ಹೆಚ್ಚು ಬೇಡಿಕೆ ಜೊತೆಗೆ ಬೆಳೆಗಾರರು ಮತ್ತು ಮಾರಾಟಗಾರರಿಗೂ ಒಳ್ಳೆಯ ಲಾಭವಿದೆ ಎನ್ನುತ್ತಾರೆ ತಳ್ಳುವಗಾಡಿ ವ್ಯಾಪಾರಸ್ಥರು.
ಕೊರೊನಾ ಇಳಿಮುಖ ವಾಗಿರುವುದರಿಂದ ವ್ಯಾಪಾರ ವಹಿ ವಾಟುಗಳು ಚೇತರಿಕೆಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜೊತೆಯಲ್ಲಿ ದಿನನಿತ್ಯದ ವಸ್ತುಗಳು ಏರಿಕೆಯಾಗುತ್ತಿರು ವುದರಿಂದ ಸಾಗಾಣಿಕಾ ವೆಚ್ಚ ದುಬಾರಿಯಾಗಿದೆ. ಆದರೂ ನೇರಳೆಹಣ್ಣಿನ ವ್ಯಾಪಾರ ಮುಂದುವರೆಸಿ ಕೊಂಡು ಹೋಗುತ್ತಿದ್ದೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಜಂಬು ನೇರಳೆಗೆ ಚಿಣ್ಣರ ಕನ್ನ: ಮಾವಿನ ಹಣ್ಣಿನ ಸುಗ್ಗಿಯೊಂದಿಗೆ ಜಂಬುನೇರಳೆ ಹಣ್ಣಿನ ಸುಗ್ಗಿಯೂ ಆರಂಭವಾಗಿದೆ. ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಸಿಗುತ್ತದೆ. ಜಿಲ್ಲೆಯ ರಸ್ತೆ ಬದಿಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಅತಿ ದೊಡ್ಡ ಸಂಖ್ಯೆಯಲ್ಲಿ ಜಂಬುನೇರಳೆ ಹಣ್ಣುಗಳನ್ನು ಬೆಳೆಸಿದೆ. ಜೊತೆಗೆ ಕೃಷಿಕರು ತಮ್ಮ ಜಮೀನುಗಳಲ್ಲಿ ಜಂಬು ನೇರಳೆ ಮರಗಳನ್ನು ಬೆಳೆಸಿದ್ದಾರೆ. ರಸ್ತೆ ಬದಿ ಯಲ್ಲಿ ಸುಧಾರಿತ ತಳಿ ಜಂಬು ನೇರಳೆ ಮರ ಬೆಳೆಸಲಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿ ಗಳು ಶಾಲೆ ಬಿಟ್ಟ ಕೂಡಲೆ ನೇರಳೆ ಹಣ್ಣುಗಳಿಗಾಗಿ ಮರ ಏರುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಬಡಾವಣೆಗಳಲ್ಲಿ ಹಾಗೂ ದೇವನಹಳ್ಳಿ ನ್ಯಾಯಾಲಯದ ಆವರಣದಲ್ಲಿ ನೇರಳೆ ಹಣ್ಣಿನ ಮರವನ್ನು ಬೆಳೆಸಿದ್ದಾರೆ.
ಔಷಧೀಯ ಗುಣವುಳ್ಳ ನೇರಳೆಗಿದೆ ದುಬಾರಿ ಬೆಲೆ: ಸಕ್ಕರೆ ಕಾಯಿಲೆ ನಿಯಂತ್ರಿಸುವ ಹಾಗೂ ಜೀರ್ಣ ಶಕ್ತಿ ವೃದ್ಧಿಸುವ ಜಂಬುನೇರಳೆ ಸಿಗುವುದೇ ಈಗ ಅಪರೂ ಪವಾ ಗಿದೆ. ಒಂದು ಕೆಜಿ ಜಂಜು ನೇರಳೆ ಬೆಲೆ ಮಾರುಕಟ್ಟೆಯಲ್ಲಿ 240, 250 ರವರೆಗೆ ಇದ್ದು, ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ. ಜಂಬು ನೇರಳೆ ಹಣ್ಣು ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಿಸುವ ಶಕ್ತಿ ಹೊಂದಿದೆ. ಹೀಗಾಗಿ ಸೇವಿ ಸುವವರ ಸಂಖ್ಯೆ ಹೆಚ್ಚಾಗಿದೆ. ಉತ್ಪಾದನೆ ಕಡಿಮೆಯಾಗಿದೆ. ಮೇದೊಧೀಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುವುದರಿಂದ ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿಯುಳ್ಳ ಅಂಶವುಳ್ಳ ಹಣ್ಣಾಗಿದೆ. ಪ್ರತಿ ದಿನ ಮತ್ತು ಸಂಜೆ
ಜಂಬುನೇರಳೆ ಹಣ್ಣಿನ ಬೀಜದ ಪುಡಿ ಸೇವಿಸು ವುದರಿಂದ ಅತಿಯಾದ ಮೂತ್ರ ತೊಂದರೆ ನಿವಾರಣೆ ಆಗುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ.
ಜಂಬುನೇರಳೆ ಹಣ್ಣು ಮೂಲವ್ಯಾದಿ ಹಾಗೂ ಪಿತ್ತಜನಕಾಂಗ ತೊಂದರೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಂಬುನೇರಳೆ ಹಣ್ಣಿನಲ್ಲಿ ನೈಸರ್ಗಿಕ ಆಮ್ಲಿಯ ಪದಾರ್ಥಗಳಿದ್ದು, ದೇಹದಲ್ಲಿ ಜೀರ್ಣ ಕ್ರಿಯೆಗೆ ಅನುಕೂಲವಾಗಲಿದೆ. ಪಿತ್ತಜನಕಾಂಗ ಕಾರ್ಯವನ್ನುಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಎಂದು ವೈದ್ಯರ ಅನಿಸಿಕೆಯಾಗಿದೆ. ಜಂಬುನೇರಳೆ ಹಣ್ಣು ತಾಜಾ ಜ್ಯೂಸ್‌ನಿಂದ ಹೃದಯ ಕಾಯಿಲೆ, ನಿರಂತರ ಬೇಧಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ ರೋಗಾಣುಗಳನ್ನು ಕೊಳ್ಳುವ ಶಕ್ತಿ ಹೊಂದಿದೆ.
ದೇಹದಲ್ಲಿರುವ ಲಿವರ್ ಸ್ವಚ್ಚಗೊಳ್ಳುತ್ತದೆ. ಹಣ್ಣು ತಿನ್ನುವುದರಿಂದ ಗಾಯ ಬೇಗ ಗುಣಮುಖವಾಗಿ, ಅಸ್ತಮಾ ಕಾಯಿಲೆಗೆ ಒಳಗಾಗಿದ್ದವರಿಗೂ ಇದು ರಾಮಬಾಣವಾಗಿದೆ. ಹಣ್ಣಿನಲ್ಲಿ ಐರನ್ ಮತ್ತು ಕ್ಯಾಲ್ಸಿಯಂ, ಪೊಟಾಸಿಯಂ ಇರುತ್ತದೆ. ಅಜೀರ್ಣ, ಚಂಚಲತೆ, ಕಿಡ್ನಿ ಸಮಸ್ಯೆ ನಿವಾರಣೆಗೂ ನೇರಳೆ ಹಣ್ಣು ದಿವ್ಯ ಔಷಧಿಯಾಗಿದೆ.
ವಿಟಮಿನ್ ಸಿ ಹೇರಳ: ಮಧುಮೇಹ ಕಾಯಿಲೆ ಇರು ವವರು ಈ ಹಣ್ಣು ಸೇವನೆ ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಣ್ಣು ಸೇವನೆ ಮಾಡುವುದರಿಂದ ರೊಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ. ಇದನ್ನು ತಿನ್ನುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುವುದರ ಜತೆಗೆ ಕೆಲವು ಅಪಾಯಕಾರಿಯಾದ ಕ್ಯಾನ್ಸರ್ ರೋಗ ಕಡಿಮೆ ಮಾಡುವ ಅಂಶ ಹೊಂದಿದೆ.
ಜಿಲ್ಲೆಯಲ್ಲಿ ಸುಮಾರು 25 ಹೆಕ್ಟೇರ್ ನೇರಳೆಹಣ್ಣಿನ ಪ್ರದೇಶವಿದೆ. ರೈತರು ನೇರಳೆ ಹಣ್ಣು ಬೆಳೆಯುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸಿದರೆ ಉತ್ತಮ ಹಣ ಮತ್ತು ಬೇಡಿಕೆ ಸಹ ಇದೆ. ಔಷಧಿಯ ಗುಣಗಳು ಹೆಚ್ಚಿದೆ. ಇಲ್ಲಿನ ರೈತರು ಹೆಚ್ಚು ತರಕಾರಿ, ಹೂವು, ಮಾವು, ದ್ರಾಕ್ಷಿ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹಾಗಾಗಿ ನೇರಳೆ ಬೆಳೆ ಕಡಿಮೆ ಇದೆ. ನೇರಳೆ ಬೆಳೆಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ಕೊಡಲಾಗುತ್ತಿದೆ. ರೈತರು ನೇರಳೆ ಬೆಳೆ ಬೆಳೆಯಲು ಮುಂದಾದರೆ ಉದ್ಯೋಗ ಖಾತ್ರಿ ಯೋಜನೆ ಹಾಗೂ ರಾಷ್ಟ್ರೀಯ ತೋಟ ಗಾರಿಕಾ ಮಿಷನ್ ಅಡಿಯಲ್ಲಿ ಸಹಾಯಧನ ನೀಡಲಾಗುವುದು.
●ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ
ನೇರಳೆ ಹಣ್ಣು ನಮಗೆ ಬಾರಿ ಇಷ್ಟ. ಪ್ರತಿ ಬಾರಿ ನೇರಳೆ ಸೀಸನ್‌ನಲ್ಲಿ ತಪ್ಪದೇ ನೇರಳೆಹಣ್ಣನ್ನು ಖರೀದಿ ಸುತ್ತೇವೆ. ನೇರಳೆ ಹಣ್ಣು ಜೂನ್ ತಿಂಗಳಿನಲ್ಲಿ ಸಿಗುವುದರಿಂದ ಹಣ್ಣನ್ನು ತೆಗೆದುಕೊಂಡು ಹೋಗುತ್ತೇವೆ. ಕೆಲವು ಕಾಯಿಲೆಗಳಿಗೆ ಈ ಹಣ್ಣು ರಾಮಬಾಣವಾಗಿದೆ. ವರ್ಷಕ್ಕೆ ಒಂದೇ ಬಾರಿ ಸಿಗುವ ಹಣ್ಣು ನೇರಳೆ ಹಣ್ಣು. ಇದರ ಬೀಜ, ತೊಗಟೆ, ಎಲೆ, ಹಣ್ಣುಪುಡಿಯಿಂದ ತಯಾರಿಸಿದ ಜ್ಯೂಸ್ ಕುಡಿಯುತ್ತಾರೆ.
●ಮಂಜುಳಾ, ಗ್ರಾಹಕಿ
ನೇರಳೆ ಹಣ್ಣನ್ನು ವಿವಿಧ ಮರಗಳಿಂದ ಬೆಳೆಗೆ ತೆರಳಿ ಹಣ್ಣನ್ನು ಕಿತ್ತುಕೊಂಡು ಬರುತ್ತೇವೆ. ದಿನನಿತ್ಯ 40 ಕೆ.ಜಿ ವ್ಯಾಪಾರ ಮಾಡುತ್ತಿದ್ದೇವೆ. ಈ ವ್ಯಾಪಾರವನ್ನು ಈ ಜೂನ್ ತಿಂಗಳಿನಲ್ಲಿ ತಳ್ಳುವ ಗಾಡಿಯ ಮೇಲೆ ಹಾಕಿಕೊಂಡು ವ್ಯಾಪಾರ ಮಾಡಿ ಜಿವನ ಸಾಗಿಸುತ್ತಿದ್ದೇವೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಇತರ ಕಡೆ ಹಣ್ಣನ್ನು ಖರೀದಿಸುತ್ತಿದ್ದೇವೆ. ಕಳೆದ 18 ವರ್ಷಗಳಿಂದ ನೇರಳೆ ವ್ಯಾಪಾರ ಮಾಡಲಾಗುತ್ತಿದೆ.
●ವಿನೋದ್ ರಾಜ್,ನೇರಳೆ ವ್ಯಾಪಾರಸ್ಥ
●ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.