ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 425 ಅಂಕ ಜಿಗಿತ; ಜೂ.09ರಂದು ಲಾಭ, ನಷ್ಟ ಕಂಡ ಷೇರು ಯಾವುದು?
ಎನ್ ಎಸ್ ಇ ನಿಫ್ಟಿ ಕೂಡಾ 121.85 ಅಂಕ ಏರಿಕೆಯೊಂದಿಗೆ 16,478.10 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯ
Team Udayavani, Jun 9, 2022, 4:57 PM IST
ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ನೀರಸ ವಹಿವಾಟಿನ ನಂತರವೂ ಗುರುವಾರ (ಜೂನ್ 09) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 427 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಓಟಿಟಿ ಬಿಡುಗಡೆಗೆ ಸಿದ್ದವಾದ ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 427.79 ಅಂಕ ಏರಿಕೆಯೊಂದಿಗೆ 55,320.28 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 55,366.84 ಅಂಕಕ್ಕೆ ತಲುಪಿ, 54,507.41 ಅಂಕಕ್ಕೆ ಇಳಿಕೆಯಾಗಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 121.85 ಅಂಕ ಏರಿಕೆಯೊಂದಿಗೆ 16,478.10 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಡಾ.ರೆಡ್ಡೀಸ್, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್ ಟೆಲ್, ಟೆಕ್ ಮಹೀಂದ್ರ, ಸನ್ ಫಾರ್ಮಾ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಟಾಟಾ ಸ್ಟೀಲ್, ಎನ್ ಟಿಪಿಸಿ, ಎಸ್ ಬಿಐ, ಬಜಾಜ್ ಫೈನಾನ್ಸ್ ಷೇರುಗಳು ಶೇ.3.81ರಷ್ಟು ನಷ್ಟ ಕಂಡಿದೆ. ಇನ್ನುಳಿದಂತೆ ಶಾಂಘೈ, ಸಿಯೋಲ್ ಮತ್ತು ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಇಳಿಕೆಯಾಗಿದ್ದು, ಟೋಕಿಯೋ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಮುಕ್ತಾಯ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.