ಅನಾಥ ಮಗುವಿಗೆ ಅಜ್ಜ, ಅಜ್ಜಿ ಆಸರೆಯೇ ಸೂಕ್ತ: ಸುಪ್ರೀಂ
Team Udayavani, Jun 10, 2022, 6:50 AM IST
ನವದೆಹಲಿ: ಕೊರೊನಾದಿಂದ ಕಳೆದ ವರ್ಷ ತನ್ನ ಅಪ್ಪ- ಅಮ್ಮನ್ನು ಕಳೆದುಕೊಂಡಿದ್ದ ಅಹ್ಮದಾಬಾದ್ನ 6 ವರ್ಷದ ಗಂಡು ಮಗುವಿನ ಪಾಲನೆಯ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಮಗುವಿನ ಅಜ್ಜ- ಅಜ್ಜಿಗೆ (ತಂದೆಯ ಅಪ್ಪ-ಅಮ್ಮ) ಒಪ್ಪಿಸಿದೆ. ಮಗು ತನ್ನ ತಾಯಿಯ ತಂಗಿಯ (ಚಿಕ್ಕಮ್ಮ) ಬಳಿಯಲ್ಲೇ ಬೆಳೆಯಬೇಕು ಎಂದು ನೀಡಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.
ಮಗುವಿನ ಚಿಕ್ಕಮ್ಮ ಕೇಂದ್ರ ಸರ್ಕಾರಿ ನೌಕರರಾಗಿದ್ದು, ಅವಿವಾಹಿತೆಯಾಗಿದ್ದರಿಂದ ಆಕೆಯ ಪಾಲನೆಯಲ್ಲಿ ಮಗು ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದು ಗುಜರಾತ್ ಹೈಕೋರ್ಟ್ ತಿಳಿಸಿತ್ತು. ಆದರೆ, ಇದನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. “ಚಿಕ್ಕಮ್ಮನಿಂತ ಅಜ್ಜ-ಅಜ್ಜಿಯರು, ಮೊಮ್ಮಕ್ಕಳೊಂದಿಗೆ ಗಾಢವಾದ ಮಮಕಾರ ಹೊಂದಿರುತ್ತಾರೆ. ಮೊಮ್ಮಕ್ಕಳ ಪಾಲನೆ ವಿಚಾರದಲ್ಲಿ ತಮ್ಮ ವಯಸ್ಸನ್ನೂ ಮರೆತು ಆ ಕರ್ತವ್ಯ ನಿಭಾಯಿಸುತ್ತಾರೆ’ ಎಂದು ಹೇಳಿತು.
“ಇನ್ನು, ಈ ಪ್ರಕರಣದಲ್ಲಿ, ಮಗು ತನ್ನ ಅಜ್ಜ- ಅಜ್ಜಿಯ ಬಳಿಯಲ್ಲೇ ಬೆಳೆಯುವುದು ಸೂಕ್ತ. ಮಗುವಿನ ಚಿಕ್ಕಮ್ಮ, ತನಗೆ ಬೇಕೆನಿಸಿದಾಗ ತಾನಿರುವ ಗುಜರಾತ್ನ ದಾಬೋದ್ನಿಂದ ಅಹ್ಮದಾಬಾದ್ಗೆ ಬಂದು ಮಗುವನ್ನು ನೋಡಿಕೊಂಡು ಹೋಗಬಹುದು’ ಎಂದು ಕೋರ್ಟ್ ಆದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.