ಕೌನ್ಸೆಲಿಂಗ್‌ ಸುತ್ತುಗಳಿಗೆ ಮಿತಿಯಿರಲಿ : NEET PG ಸೀಟುಗಳ ವಿಚಾರದಲ್ಲಿ ಸುಪ್ರೀಂ ಕಿವಿಮಾತು


Team Udayavani, Jun 10, 2022, 7:10 AM IST

ಕೌನ್ಸೆಲಿಂಗ್‌ ಸುತ್ತುಗಳಿಗೆ ಮಿತಿಯಿರಲಿ : NEET PG ಸೀಟುಗಳ ವಿಚಾರದಲ್ಲಿ ಸುಪ್ರೀಂ ಕಿವಿಮಾತು

ಹೊಸದಿಲ್ಲಿ: 2021ರ ನೀಟ್‌ ಪ್ರವೇಶ ಪರೀಕ್ಷೆ ಆಧಾರದಲ್ಲಿ ಒಂಬತ್ತು ಸುತ್ತುಗಳ ಕೌನ್ಸೆಲಿಂಗ್‌ನ ಅನಂತರವೂ ಮಿಕ್ಕಿರುವ 1,456 ವೈದ್ಯಕೀಯ ಸ್ನಾತಕೋತ್ತರ ಸೀಟುಗಳನ್ನು ಸ್ಟ್ರೇ ಸುತ್ತಿನ ಆಧಾರದಲ್ಲಿ ತುಂಬುವುದು ಔಚಿತ್ಯವೆನಿಸಿದರೂ ಅದಕ್ಕೊಂದು ಇತಿಮಿತಿಗಳನ್ನು ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

“ಉಳಿಕೆ ಸೀಟುಗಳನ್ನು ತುಂಬಲು ಒಂದು ಸ್ಟ್ರೇ ಸುತ್ತು ನಡೆಸುವುದು, ಅದರಲ್ಲೂ ಮಿಕ್ಕಿದ ಸೀಟುಗಳನ್ನು ತುಂಬಲು ಮತ್ತೂಂದು ಸ್ಟ್ರೇ ಸುತ್ತು ನಡೆಸುವುದು ಹೀಗೆ ಎಷ್ಟು ಸುತ್ತುಗಳನ್ನು ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ ನ್ಯಾ| ಎಂ.ಆರ್‌. ಶಾ ಹಾಗೂ ನ್ಯಾ| ಅನಿರುದ್ಧ ಬೋಸ್‌ ಅವರುಳ್ಳ ನ್ಯಾಯಪೀಠ, ಮಿಕ್ಕ ಸೀಟುಗಳನ್ನು ತುಂಬಲು ಒಂದು ನಿಶ್ಚಿತ ಮಾರ್ಗಸೂಚಿಯಿರಬೇಕು’ ಎಂದು ಹೇಳಿತು.

“ಯಾವ ಸೀಟೂ ಉಳಿಯದಂತೆ ಹಂಚಿಕೆ ಮಾಡಬೇಕು ಎಂಬ ಧಾವಂತದಡಿ ಅನರ್ಹರಿಗೆ ಸೀಟು ನೀಡಬಾರದು. ಎಂದಿಗೂ ಅಭ್ಯರ್ಥಿಗಳ ಶಿಕ್ಷಣ ಹಾಗೂ ಜನರ ಆರೋಗ್ಯದ ಜತೆಗೆ ರಾಜಿಯಾಗಬಾರದು’ ಎಂದು ನ್ಯಾಯಪೀಠ ತಿಳಿಸಿದೆ. “ಈಗ ಉಳಿದಿರುವುದು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಸೀಟುಗಳು. ಇದು ಮೂರು ವರ್ಷದ ಕೋರ್ಸ್‌. ಈಗ ಉಳಿಕೆಯಿರುವ ಸೀಟುಗಳನ್ನು ಹಂಚಲು ಸಾಫ್ಟ್ವೇರ್‌ ಲಾಕ್‌ ಆಗಿದೆ ಎಂದು ಹೇಳುತ್ತಿ ರುವ ಸರಕಾರ ಆ ಸೀಟುಗಳನ್ನು ಮುಂದಿನ ವರ್ಷ ಹಂಚುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಹೇಳಲಾಗುತ್ತ ದೆಯೇ? ಆಗುವುದಿಲ್ಲ ಅಲ್ಲವೇ? ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸೂಕ್ತ ಕೋರ್ಸ್‌ಗೆ ಪ್ರವೇಶ ನೀಡುವುದು, ಜನರ ಆರೋಗ್ಯವನ್ನು ಕಾಪಾಡುವ ವಿಚಾರದಲ್ಲಿ ರಾಜಿಯಾಗ ಬಾರದು’ ಎಂದು ನ್ಯಾಯಪೀಠ ತಿಳಿಸಿತು.

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.