ವಿದ್ಯಾರ್ಥಿಗಳು ಕುಡಿಯುವ ನೀರಲ್ಲಿ ರಾಶಿ ಹುಳು
Team Udayavani, Jun 10, 2022, 12:34 PM IST
ಕಲಬುರಗಿ: ಈ ವಸತಿ ನಿಲಯದಲ್ಲಿ ಕುಡಿಯಲು ಮತ್ತು ಶೌಚಾಲಯ ಮತ್ತು ಬಟ್ಟೆ ತೊಳೆಯಲು ಒಂದೇ ನೀರು. ನೀರಿನ ಟ್ಯಾಂಕ್‌ಗಳನ್ನಂತೂ ವರ್ಷಗಟ್ಟಲೇ ತೊಳೆದೇ ಇಲ್ಲ. ಇವುಗಳಲ್ಲಿ ಹುಳುಗಳ ರಾಶಿಯೇ ಇದ್ದು, ಇದೇ ನೀರನ್ನು ಫಿಲ್ಟರ್ ಮಾಡಿ ಕೊಡಲಾಗುತ್ತಿದೆ.
ಇದು ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಮೆಟ್ರಿಕ್ ನಂತರದ ನಂ.4 ಹಾಸ್ಟೆಲ್. ಕೋಟನೂರು (ಡಿ) ಜಿಡಿಎ ಲೇಜೌಟ್‌ನಲ್ಲಿದೆ. ಇಲ್ಲಿ ಬಹುತೇಕ ವ್ಯವಸ್ಥೆ ಪುಸ್ತಕದಲ್ಲಿದೆ, ವಾಸ್ತವದಲ್ಲಿ ಇಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.
ಈ ವಸತಿ ನಿಲಯದಲ್ಲಿ 200 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಇದೆ. ಸದ್ಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಕುಡಿಯಲು ಪ್ರತ್ಯೇಕ ಪಿಲ್ಟರ್ ನೀರು ಸರಬರಾಜು ಇಲ್ಲ. ಅದರೆ, ಪಿಲ್ಟರ್ ತಂದು ಇಡಲಾಗಿದ್ದು, ಹುಳಗಳು ತುಂಬಿರುವ ಟ್ಯಾಂಕ್‌ನ ನೀರನ್ನು ಈ ಫಿಲ್ಟರ್ ಗೆ ಸರಬರಾಜು ಮಾಡಲಾಗುತ್ತದೆ. ಈ ನೀರು ಮಕ್ಕಳು ಕುಡಿಯಲು ಯೋಗ್ಯವಾಗಿಲ್ಲ.
ಮೇಲ್ಚಾವಣಿಯಲ್ಲೇ ಬಟ್ಟೆ ವಾಷ್
ಇಲ್ಲಿ ಬಟ್ಟೆ ತೊಳೆಯಲು ಮಕ್ಕಳಿಗೆ ಪ್ರತ್ಯೇಕ ಸ್ಥಳವಿಲ್ಲದೇ ಇರುವುದರಿಂದ ಮಕ್ಕಳೆಲ್ಲರೂ ಬಟ್ಟೆಗಳನ್ನು ಕಟ್ಟಡ ಮೇಲ್ಚಾವಣಿಯಲ್ಲಿಯೇ ತೊಳೆಯುವುದರಿಂದ ಎಲ್ಲ ನೀರು ಮೇಲ್ಚಾವಣಿಯಲ್ಲೇ ಜಮೆಯಾಗಿ, ಛತ್ತು ಹಾಸು ಗಟ್ಟಿ, ನೀರು ಗೋಡೆಗಳಲ್ಲಿ ಇಳಿಯುತ್ತಿದೆ. ಇದು ಅಪಾಯಕಾರಿ. ಪ್ರತ್ಯೇಕ ಕೋಣೆಗಳಿಲ್ಲ. ದೊಡ್ಡ ಹಾಲ್ ನಲ್ಲಿಯೇ ಮಕ್ಕಳು ಮಲಗಬೇಕು. ಇದರಿಂದ ಸರಿಯಾಗಿ ಓದಲು, ಬರೆಯಲು ಹಾಗೂ ನಿದ್ದೆಯೂ ಆಗುವುದಿಲ್ಲ ಎನ್ನುವುದು ಮಕ್ಕಳ ಅಳಲು. ಇನ್ನೂ ಟ್ರಂಕ್‌ಗಳನ್ನು ಕೊಟ್ಟಿಲ್ಲ. ಬೆಡ್, ಮಂಚದ ವ್ಯವಸ್ಥೆಯೂ ಇಲ್ಲ. ಇದರಿಂದ ಮಕ್ಕಳಿಗೆ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಪಾಲಕರು.
ಬಾಗಿಲುಗಳೇ ಇಲ್ಲ: ಈ ಕಟ್ಟಡಕ್ಕೆ ಮುಖ್ಯದ್ವಾರ ಹೊರತು ಪಡಿಸಿದರೆ ಕೆಲವೆಡೆ ಬಾಗಿಲು ಇಲ್ಲ. ಇದರಿಂದ ಆಗಾಗ್ಗೆ ಕಳ್ಳತನ ಆಗುತ್ತವೆ. ಊಟದ ವ್ಯವಸ್ಥೆಯೂ ಅಷ್ಟಕಷ್ಟೆ, ವಾರದಲ್ಲಿ ನಾಲ್ಕು ದಿನ ಬದನೆಕಾಯಿ ಮತ್ತು ಆಲೂಗಡ್ಡೆಯೇ ಹೆಚ್ಚಿನ ಆಹಾರಗಳಲ್ಲಿರುತ್ತದೆ. ತರಕಾರಿ ಸೊಪ್ಪು ಕಡಿಮೆ ಬಳಕೆ ಮಾಡಲಾಗುತ್ತದೆ. ಸಾಂಬಾರಿನ ಬಗ್ಗೆ ಮಾತನಾಡದೇ ಇದ್ದರೆ ವಾಸಿ. ಮಕ್ಕಳಿಗೆ ಓದಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನೆರವಾಗುವಂತಹ ಪುಸ್ತಕ, ಪತ್ರಿಕೆ ಯಾವೂದು ಬರೋದಿಲ್ಲ. ಗ್ರಂಥಾಲಯವೂ ಇಲ್ಲ. ಈ ಎಲ್ಲದಕ್ಕೂ ಪ್ರತ್ಯೇಕ ಹಣವನ್ನು ಸರಕಾರ ನೀಡುತ್ತದೆ.
ನಮ್ಮ ವಸತಿ ನಿಲಯದಲ್ಲಿ ಫಿಲ್ಟರ್ ನೀರು ಕೊಡುತ್ತಿದ್ದೇವೆ. ಬಾಡಿಗೆ ಕಟ್ಟಡದಲ್ಲಿರುವ ನಿಲಯವನ್ನು ಮೊರಾರ್ಜಿ ದೇಸಾಯಿ ವಸತಿ ನಿಲಯ ಇದ್ದ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ. ಬೆಡ್ ಇಲ್ಲ, ಹಾಸಿಗೆ, ಟ್ರಂಕ್ ಬಂದಿಲ್ಲ.ಶೀಘ್ರ ಬಂದರೆ ಕೊಡಲಾಗುವುದು. ಬಟ್ಟೆ ತೊಳೆಯಲು ವ್ಯವಸ್ಥೆ ಮಾಡಲಾಗುವುದು. –ಮಲ್ಲಪ್ಪ ಕೊಡೇಕಲ್, ವಾರ್ಡ್ನ್, ವಸತಿ ನಿಲಯ
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಸತಿ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಫಿಲ್ಟರ್‌ಗೆ ನೀರು ಪೂರೈಕೆ ಮಾಡುವ ಟ್ಯಾಂಕ್‌ನ್ನು ವರ್ಷಾನುಗಟ್ಟಲೇ ತೊಳೆದಿಲ್ಲ. ಹುಳುಗಳು ತುಂಬಿವೆ. ಅದೇ ನೀರನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಕಟ್ಟಡ ನೀರಿನಿಂದ ತೇವವಾಗಿದೆ. ಮಕ್ಕಳಿಗೆ ಮಂಚ, ಹಾಸಿಗೆ ನೀಡಿಲ್ಲ. ಊಟವೂ ಅಷ್ಟಕಷ್ಟೆ. ಇದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆಹರಿಸಲಿ. –ಸುನೀಲ ಮಾನ್ಪಡೆ, ಹೋರಾಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.