ದಿಡಗ ಗ್ರಾಮ: ಬಲವಂತದ ಮತಾಂತರ ಆರೋಪ
ಹಿಂದೂ ಧರ್ಮದಿಂದ ಕ್ರಿಶ್ಚಿಯನ್‌ಗೆ ಮತಾಂತರ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
Team Udayavani, Jun 10, 2022, 6:27 PM IST
ಚನ್ನರಾಯಪಟ್ಟಣ: ತಾಲೂಕಿನ ದಿಡಗ ಗ್ರಾಮದ ಕಾಲೋನಿಯಲ್ಲಿ ಬಲವಂತವಾಗಿ ಮತಾಂತರ ಮಾಡುತ್ತಿದ್ದವರನ್ನು ಹಿರೀಸಾವೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಕ್ರಿಶ್ಚಿಯನ್ ಮತಕ್ಕೆ ಕಾಲೋನಿ ಅನೇಕ ಕುಟುಂಬದವರನ್ನು ಮತಾಂತರ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಮತಾಂತರದಲ್ಲಿ ತೊಡಗಿದ್ದ ಫಾಸ್ಟರ್ ಸತ್ಯ ಹಾಗೂ ಆತನ ತಂಡವನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಶ್ರೀನಿವಾಸಪುರ ಸಮೀಪದ ಅಲ್ಫಾಸ್ ನಗರ ನಿವಾಸಿ ಬಿ.ಆರ್.ಸತ್ಯ ಫಾ ಸ್ಟರ್ ಕಳೆದ ಏಳೆಂಟು ತಿಂಗಳಿನಿಂದ ದಿವಸಗಳಿಂದ ದಿಡಗ ಸುತ್ತ ಮುತ್ತಲಿನ ಕಾಲೋನಿಯಲ್ಲಿ ಮತಾಂತರ ಮಾಡುತ್ತಿರುವ ಬಗ್ಗೆ ಹಿಂದೂಪರ ಸಂಘಟನೆ ಮುಖಂಡರರಿಗೆ ಮಾಹಿತಿ ಹೋಗಿದೆ. ಇವರನ್ನು ಸಾಕ್ಷಿ ಸಮೇತ ಪೊಲೀಸರಿಗೆ ಒಪ್ಪಿಸುವ ಫಣ ತೊಟ್ಟಿದ್ದು ಅನೇಕ ಬಾರಿ ಸಾಕ್ಷಿ ಸಮೇತ ಹಿಡಿಯಲಾಗಲಿಲ್ಲ. ಮತಾಂತರ ಮಾಡುವುದು ಇತರರಿಗೆ ತಿಳಿಯಬಾರದು ಎಂಬ ಉದ್ದೇಶದಿಂದ ಬಿ.ಆರ್.ಸತ್ಯ ತನ್ನ ಸಹಚರ ರೊಂದಿಗೆ ಗ್ರಾಮಕ್ಕೆ ತಡರಾತ್ರಿ ವೇಳೆ ಆಗಮಿಸಿ ಕಡುಬಡವರಿಗೆ ಹಣದ ಆಮಿಷ ಒಡ್ಡುವ ಮೂಲಕ ಮತಾಂತರ ಮಾಡುತ್ತಿದ್ದ. ರೋಗಿಗಳು ಇರುವ ಮನೆಗೆ ತೆರಳಿ ನೀವು ಚರ್ಚ್‌ಗೆ ಬಂದರೆ ರೋಗ ಗುಣಮುಖವಾಗುತ್ತದೆ ಎಂದು ಹೇಳಿ, ಅವರನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್‌ಗೆ ಮತಾಂತರ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ಆಮಿಷವೊಡ್ಡಿ ಮತಾಂತರ: ಈಗಾಗಲೇ ಕಾಲೋ ನಿಯ ಮೂರು ಕುಟುಂಬಗಳಿಗೆ ಆಮಿಷವೊಡ್ಡಿ ಮತಾಂತರ ಮಾಡಿರುವ ಫಾಸ್ಟರ್ ಸತ್ಯ ಮತ್ತಷ್ಟು ಮನೆಗಳನ್ನು ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.
ನಿಖರ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಕಾಲೋನಿಯ ಮನೆಯೊಂದರಲ್ಲಿ ಆತ ಅಮಾ ಯಕರಿಂದ ಪ್ರಾರ್ಥನೆ ಮಾಡಿಸುತ್ತಿದ್ದ ವೇಳೆ ಸರಿ ಯಾಗಿ ಅಲ್ಲಿಗೆ ಹಿಂದೂಪರ ಸಂಘಟನೆ ಕಾರ್ಯ ಕರ್ತರು ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲು: ಆತನನ್ನು ಮನೆಯಿಂದ ಹೊರ ಕರೆದ ಹಿಂದೂಪರ ಕಾರ್ಯಕರ್ತರು, ನಮ್ಮವರನ್ನು ಇಲ್ಲ-ಸಲ್ಲದ ಆಮಿಷ ತೋರಿಸಿ ಬಲವಂ ತವಾಗಿ ಮತಾಂತರ ಮಾಡುವುದು ಸರಿಯಲ್ಲ ಎಂದು ಆತನಿಗೆ ಬುದ್ಧಿ ಹೇಳುವ ವೇಳೆ ಫಾಸ್ಟರ್ ಬಿ.ಆರ್. ಸತ್ಯ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯ ಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಪೊಲೀಸರು ಮಧ್ಯಪ್ರವೇಶ ಮಾಡಿ ವ್ಯಾಜ್ಯವನ್ನು ತಣ್ಣಗೆ ಮಾಡಿದರು. ಹಿಂದೂಪರ ಸಂಘಟನೆ ಮುಖಂಡರು ಹಿರೀಸಾವೆ ಠಾಣೆಗೆ ತೆರಳಿ ಮತಾಂತರ ಮಾಡುತ್ತಿದ್ದವ ಮೇಲೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಹಿಂದೂಪರ ಸಂಘಟನೆ ಮುಖಂಡರಾದ ಪುಟ್ಟೇಗೌಡ, ಕರಿ ಕ್ಯಾತನಹಳ್ಳಿ ಸತೀಶ್, ಮಲ್ಲಿ ಕಾರ್ಜುನ್, ಧರ್ಮ ರಾಜ್, ರಾಮು, ತುಳಿಸಿರಾಜು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.