40 ದಿನದ ಪಯಣ ಮುಗಿಸಿದ “ಮೇ ಫ್ಲವರ್’; ಕೆನಡಾದ ಹಾಲಿಫಾಕ್ಸ್ ಬಂದರಿನಲ್ಲಿ ಪ್ರಯಾಣ ಅಂತ್ಯ
ಒಂದೂ ಸಿಬ್ಬಂದಿಯಿಲ್ಲದೆ ಸ್ವಯಂಚಾಲಿತವಾಗಿ ಸಾಗಿದ ಹಡಗು
Team Udayavani, Jun 11, 2022, 6:50 AM IST
ಒಟ್ಟಾವಾ: ವಿಶ್ವದ ಮೊದಲ ಸ್ವಯಂಚಾಲಿತ ಹಡಗು ಜೂ. 5ರಂದು ಒಟ್ಟು 40 ದಿನಗಳ ಪ್ರಯಾಣ ಮುಗಿಸಿ, ಭೂ ಪ್ರದೇಶಕ್ಕೆ ವಾಪಸಾಗಿದೆ. ಈ ಹಡಗು ಒಟ್ಟು 5,632 ಕಿ.ಮೀ ಪ್ರಯಣ ಮಾಡಿದೆ.
ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಐಬಿಎಂ ಇತರೆ ಕೆಲವು ಸಂಸ್ಥೆಗಳೊಂದಿಗೆ ಸೇರಿಕೊಂಡು ಈ “ಮೇಫ್ಲವರ್ ಆಟೋನೊಮಸ್ ಶಿಪ್'(ಎಂಎಎಸ್) ತಯಾರಿಸಿದೆ. ಯುನೈಡೆಡ್ ಕಿಂಗ್‌ಡಂನ ಪೇಮೌತ್ ಕಡಲ ತೀರದಿಂದ ಪ್ರಯಾಣ ಆರಂಭಿಸಿದ್ದ ಹಡಗು ಕೆನಡಾದ ಹ್ಯಾಲಿಫ್ಯಾಕ್ಸ್ ಕಡಲ ತೀರದಲ್ಲಿ ಪ್ರಯಾಣ ಮುಗಿಸಿದೆ. ವಿಶೇಷವೆಂದರೆ ಈ ಹಡಗಿನಲ್ಲಿ ಒಬ್ಬ ಸಿಬ್ಬಂದಿಯೂ ಇರಲಿಲ್ಲ.
ಈ ಹಡಗು 50ಗಿ20 ಅಡಿ ಅಳತೆಯದ್ದಾಗಿದೆ. ಹಡಗಿನ ಮೇಲ್ಭಾಗದಲ್ಲಿ ಸೌರಫಲಕಗಳನ್ನು ಹಾಕಲಾಗಿದ್ದು, ಅದರ ಶಕ್ತಿಯಿಂದಾಗಿ ಹಡಗಿನ ಕಂಪ್ಯೂಟರ್ ಸಿಸ್ಟಂ ಮತ್ತು ಮೋಟಾರುಗಳು ಚಾಲ್ತಿಯಲ್ಲಿದ್ದವು. ಹಡಗು ಗಂಟೆಗೆ 18.52 ಕಿ.ಮೀ ವೇಗದಲ್ಲಿ ಚಲಿಸಿದೆ ಎಂದು ಸಂಸ್ಥೆ ತಿಳಿಸಿದೆ.
“ಈ ಎಂಎಎಸ್ ಹಡಗಿನಲ್ಲಿ ಒಟ್ಟು 6 ಕ್ಯಾಮರಾಗಳು ಹಾಗೂ 30 ಸೆನ್ಸರ್‌ಗಳನ್ನು ಅಳವಡಿಸಲಾಗಿದೆ.
ಹಡಗಿಗೆ ಸಮುದ್ರದಲ್ಲಿ ಎದುರಾಗಬಲ್ಲ ಎಲ್ಲ ಗಾತ್ರದ ಹಡಗುಗಳು, ಮಂಜುಗಡ್ಡೆಗಳನ್ನು ಎದುರಿಸುವುದಕ್ಕೂ ತರಬೇತಿ ಕೊಡಲಾಗಿತ್ತು. ಆದರೆ 40 ದಿನಗಳ ಪ್ರಯಾಣದಲ್ಲಿ ಯಾವೊಂದು ಹಡಗು, ಮಂಜುಗಡ್ಡೆಯೂ ಈ ಹಡಗಿಗೆ ಎದುರಾಗಲೇ ಇಲ್ಲ’ ಎಂದಿದ್ದಾರೆ ಐಬಿಎಂನ ಪ್ರಮುಖ ತಂತ್ರಜ್ಞ ಆ್ಯಂಡಿ ಸ್ಟಾನ್‌ಫೋರ್ಡ್.
ಅಂಕಿ-ಅಂಶ
40 ದಿನ
– ಹಡಗು ಸಂಚರಿಸಿದ ಒಟ್ಟು ದಿನಗಳು
5,632 ಕಿ.ಮೀ.
– ಸಮುದ್ರದಲ್ಲಿ ಹಡಗು ಕ್ರಮಿಸಿದ ಒಟ್ಟು ದೂರ
– 6
ಹಡಗಿನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು
30
– ಮೇ ಫ್ಲವರ್‌ನಲ್ಲಿ ಅಳವಡಿಸಲಾಗಿರುವ ಸೆನ್ಸರ್‌ಗಳ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.