ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಟೈಪ್ -1 ಡಯಾಬಿಟಿಸ್ : ಕರಾವಳಿಯ ಮಕ್ಕಳು ಸುರಕ್ಷಿತ
Team Udayavani, Jun 11, 2022, 7:25 AM IST
ಉಡುಪಿ: ಟೈಪ್- 1 ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದು ಕೊಂಡಿದೆ. 0-18 ವರ್ಷದೊಳಗಿನ ಒಂದು ಲಕ್ಷ ಮಕ್ಕಳಲ್ಲಿ ಸರಾಸರಿ 18 ಮಕ್ಕಳು ಟೈಪ್ -1 ಡಯಾಬಿಟಿಸ್‌ನಿಂದ ಬಾಧಿತರಾಗಿರುವುದು ಆತಂಕ ಮೂಡಿಸಿದೆ. ರಾಜ್ಯಾದ್ಯಂತ ಇತರ ಖಾಸಗಿ ಆಸ್ಪತ್ರೆ ಗಳಲ್ಲಿ ಸರಿಸುಮಾರು 6,366 ಮಕ್ಕಳ ಸಹಿತ 10,000 ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
78.32 ಲಕ್ಷ ಮಕ್ಕಳ ಪರೀಕ್ಷೆ
ರಾಜ್ಯ ಸರಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಅಂಗನ ವಾಡಿ, ಸರಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳ 18 ವರ್ಷದೊಳಗಿನ 78.32 ಲಕ್ಷ ಮಕ್ಕಳನ್ನು ಮಕ್ಕಳನ್ನು ಟೈಪ್ -1 ಡಯಾಬಿಟಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1,884 ಮಕ್ಕಳು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು.
ರಾಯಚೂರಿನಲ್ಲಿ ಅಧಿಕ
ರಾಜ್ಯದ ಒಟ್ಟು ಟೈಪ್ -1 ಡಯಾಬಿಟಿಸ್ ಪ್ರಕರಣಗಳಲ್ಲಿ ಶೇ. 75ರಷ್ಟು ಕೇವಲ ರಾಯಚೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ. ರಾಯಚೂರು 1,448, ದಾವಣಗೆರೆ 87, ಬಳ್ಳಾರಿ 46, ಬೆಳಗಾವಿ 33, ಚಿಕ್ಕಮಗಳೂರು 30, ಕಲಬುರಗಿ 23, ಬಾಗಲಕೋಟೆಯಲ್ಲಿ 20 ಪ್ರಕರಣ ವರದಿಯಾಗಿದೆ. ಉಳಿದಂತೆ ಯಾದಗಿರಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸ ಲಾದ ಮಕ್ಕಳಲ್ಲಿ ಪತ್ತೆಯಾಗಿಲ್ಲ.
ಉಚಿತ ಚಿಕಿತ್ಸೆ
ಆರೋಗ್ಯ ಇಲಾಖೆ ತಾಲೂಕು ಮಟ್ಟದಲ್ಲಿ ಈ ಕಾಯಿಲೆಯನ್ನು ಪತ್ತೆಹಚ್ಚಲು ಲ್ಯಾಬ್ ವ್ಯವಸ್ಥೆ ಕಲ್ಪಿಸಿದೆ. ಈಗಾಗಲೇ ಡಯಾಬಿಟಿಸ್ ವರದಿಯಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ಸುಲಿನ್ ಹಾಗೂ ಮಧುಮೇಹ ಸಂಬಂಧಿಸಿದ ಔಷಧಗಳನ್ನು ನೀಡಲಾಗುತ್ತಿದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ತಾಲೂಕು-ಸಮುದಾಯ ಆರೋಗ್ಯ ಕೇಂದ್ರ ಗಳಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಉಚಿತವಾಗಿ ಔಷಧ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ನಿಯಂತ್ರಣ ಹೇಗೆ?
ಮಕ್ಕಳಲ್ಲಿ ಟೈಪ್ 1 ಮಧುಮೇಹವನ್ನು ನಿರ್ವಹಿಸಲು ಮಧುಮೇಹ ತಜ್ಞ, ಪೌಷ್ಟಿಕ ತಜ್ಞ, ಮನಃಶಾಸ್ತ್ರಜ್ಞರು ಹಾಗೂ ಕುಟುಂಬ ದವರ ಬೆಂಬಲ ಅಗತ್ಯವಾಗಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುವುದು ಅಥವಾ ಕಡಿಮೆಯಾ ಗುವುದನ್ನು ತಡೆಯಬೇಕು. ಸಕ್ಕರೆ ಪ್ರಮಾಣ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಮಕ್ಕಳು ಸದಾಕಾಲ ಚಟುವಟಿಕೆಯಲ್ಲಿರುವಂತೆ ಪ್ರೇರೇಪಿಸಬೇಕು ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ಟೈಪ್ 1 ಡಯಾಬಿಟಿಸ್ ಕಂಡುಬಂದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ಪ್ರಕರಣಗಳು ಇರಬಹುದು. ಕಾಯಿಲೆ ಕಂಡು ಬಂದವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.
– ಡಾ| ನಾಗರತ್ನಾ,
ಡಾ| ಜಗದೀಶ್
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಉಡುಪಿ/ದ.ಕ.
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.