ಇಸ್ಲಾಂ ವಿರುದ್ಧ ಹೇಳಿಕೆ: ಶಿಕ್ಷೆಗೆ ಆಗ್ರಹ
Team Udayavani, Jun 11, 2022, 11:42 AM IST
ವಾಡಿ: ಇಸ್ಲಾಂ ಧರ್ಮಗುರು ಪ್ರವಾದಿ ಮಹ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಬಿಜೆಪಿ ಮುಖಂಡರಾದ ನೂಪುರ್ ಶರ್ಮಾ, ರಾಜಾ ಸಿಂಗ್ ಹಾಗೂ ನವೀನ್ ಜಿಂದಾಲ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್ ಫ್ರಂಟ್ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಪೊಲೀಸ್ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಯುನೈಟೆಡ್ ಫ್ರಂಟ್ ಸಂಘಟನೆ ಅಧ್ಯಕ್ಷ ಝಹೂರ್ ಖಾನ್, ದೇಶದಲ್ಲಿ ಇಸ್ಮಾಂ ವಿರುದ್ಧ ಮಾತನಾಡುವರರ ಸಂಖ್ಯೆ ಹೆಚ್ಚಾಗುತ್ತಿದೆ. ಧರ್ಮ ಗುರುಗಳನ್ನು ಅವಮಾನಿಸುವ ಮತ್ತು ಇಸ್ಮಾಂ ಧರ್ಮ ಸಂಸ್ಕೃತಿಯನ್ನು ಪ್ರಶ್ನಿಸುವ ಮನಸ್ಥಿತಿಗಳು ಸಮಾಜದಲ್ಲಿ ಕೋಮು ದ್ವೇಷ ಹುಟ್ಟುಹಾಕುತ್ತಿವೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಕಾರಣಕ್ಕೆ ಪ್ರಶ್ನೆ ಮಾಡುವ ಭರದಲ್ಲಿ ಧರ್ಮದ ಕುರಿತು ಅವಹೇಳನಕಾರಿ ನುಡಿಗಳನ್ನು ವ್ಯಕ್ತಪಡಿ ಸುವುದು ಜನರ ನಂಬಿಕೆಗಳನ್ನೇ ಅವಮಾನಿಸಿದಂತಾಗುತ್ತದೆ. ಹೀಗೆ ಅವಮಾನಿಸಿದವರನ್ನು ಶಿಕ್ಷಿಸದೇ ಬಿಟ್ಟರೆ ಮುಂದೊಂದು ದಿನ ದೊಡ್ಡ ಪ್ರತಿಭಟನೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುನೈಟೆಡ್ ಫ್ರಂಟ್ ಅಧ್ಯಕ್ಷ ಝಹೂರ್ ಖಾನ್, ಪ್ರಧಾನ ಕಾರ್ಯದರ್ಶಿ ಉಮೇರ್ ಜುನೈದಿ, ಎಂ.ಡಿ.ಜುಬೇಲ್, ಮಹ್ಮದ್ ಮಝರ್, ಮಹ್ಮದ್ ರಫೀಕ್, ಅಜ್ಮತ್ ಪಟೇಲ್, ಯೂಸೂಫ್ ಕೊಡಜ್ಜಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.