ಕುಡಿವ ನೀರಿನಲ್ಲಿ ಹುಳುಗಳು ಪತ್ತೆ!
Team Udayavani, Jun 11, 2022, 1:34 PM IST
ಯಳಂದೂರು: ಪಟ್ಟಣದ ಆಶ್ರಯ ಬಡಾವಣೆಯ ಬಹುತೇಕ ನಲ್ಲಿ ಮೂಲ ದಿಂದ ಕುಡಿಯುವ ನೀರಿನಲ್ಲಿ ಹುಳಗಳು ಬರುತ್ತಿದೆ. ಇದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಗೆ ಸೇರುವ ಆಶ್ರಯ ಬಡಾವಣೆಯಲ್ಲಿ ನಲ್ಲಿ ಸಂಪರ್ಕದ ಮೂಲಕ ಮನೆಗೆ ಸರಬರಾಜು ಮಾಡುವ ಕುಡಿಯುವ ನೀರು ಕಳೆದ ಹಲವು ದಿನಗಳಿಂದಲ್ಲೂ ಕಲುಷಿತ ನೀರು ಸರಬರಾಜುವಾಗುತ್ತಿದೆ. ಇದ್ದರಿಂದ ಸಾಕಷ್ಟು ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ. ಈ ಬಗ್ಗೆ ಸಮಪರ್ಕ ಶುದ್ಧ ನೀರನ್ನು ಪೂರೈಕೆ ಮಾಡಬೇಕಾದದ್ದು ಪಪಂ ಜವಾಬ್ದಾರಿ, ಆದರೆ ಇದಕ್ಕೂ ತನಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಪರಿಣಾಮ ಕಳೆದ ಹಲವು ದಿನಗಳಂದಲೂ ನೀರಿಗಾಗಿ ತತ್ತರಿಸಿ ಹೋಗಿದ್ದಾರೆ.
ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಈ ನೀರನ್ನೇ ಕುಡಿಯಬೇಕಾದ ಸ್ಥಿತಿ ಇದೆ ಎಂದು ಬಡಾವಣೆ ನಿವಾಸಿ ನಾಗಮ್ಮ ಆರೋಪಿಸಿದ್ದಾರೆ.
ಪಟ್ಟಣದ 1ನೇ ವಾರ್ಡ್‌ನಲ್ಲಿ ಕೆಲವು ಮನೆಗಳಲ್ಲಿ ನೀರಿನ ಸಂಪ್‌ಗ್ಳು ನೀರು ಸಂಪೂಣವಾಗಿ ಶೇಖರಣೆ ಮಾಡಿ ನಂತರ ಆ ನೀರು ಮತ್ತೆ ಪೈಪ್‌ಗೆ ಸೇರುವ ಸಮಯದಲ್ಲಿ ಈ ರೀತಿಯ ಕಲುಷಿತ ನೀರು ಹೋಗಿರುವ ಸಾಧ್ಯತೆ ಇದ್ದು, ಜತೆಗೆ ಕುಡಿಯುವ ನೀರಿನ ಪೈಪ್ ಒಡೆದು ಹೋಗಿರುವ ಬಗ್ಗೆ ಪರಿಶೀಲಿಸಲಾಗಿದೆ. ಎಲ್ಲೂ ಸಹ ಸೋರಿಕೆ ಕಂಡುಬಂದಿಲ್ಲ. – ಮಲ್ಲೇಶ್, ಮುಖ್ಯಾಧಿಕಾರಿ, ಯಳಂದೂರು ಪಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.