ಪಶ್ಚಿಮ ಬಂಗಾಳದ ಹೌರಾದಲ್ಲಿ ಮತ್ತೆ ಹಿಂಸಾಚಾರ; ಬಿಜೆಪಿ ಕಚೇರಿ ಬೆಂಕಿಗೆ ಆಹುತಿ
ನಿಯಂತ್ರಣ ಸಾಧ್ಯವಾಗದಿದ್ದರೆ ಕೇಂದ್ರದ ಸಹಾಯ ಪಡೆಯಿರಿ : ಮಮತಾಗೆ ಬಿಜೆಪಿ ಸವಾಲು
Team Udayavani, Jun 11, 2022, 4:22 PM IST
ಹೌರಾ: ಪಶ್ಚಿಮ ಬಂಗಾಳದ ಹೌರಾದ ಪಂಚಲಾ ಬಜಾರ್ ಪ್ರದೇಶದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಶನಿವಾರ ಹೊಸ ಘರ್ಷಣೆ ನಡೆದಿದೆ. ಶುಕ್ರವಾರ ಪ್ರತಿಭಟನೆಗಳ ನಡೆದ ವೇಳೆ ಘರ್ಷಣೆಯಲ್ಲಿ ರಘುದೇವಪುರದ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು ಮತ್ತು ಬೆಂಕಿ ಹಚ್ಚಲಾಗಿತ್ತು.
ಜಿಲ್ಲಾಡಳಿತವು ಈಗಾಗಲೇ ಜೂನ್ 15 ರವರೆಗೆ ಉಲುಬೇರಿಯಾ-ಉಪ ವಿಭಾಗದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ. ಹೌರಾದಲ್ಲಿ ಸೋಮವಾರದವರೆಗೆ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ : ಮದುವೆಯಾಗಿ ವಾರದ ಒಳಗೆ ಧಾರ್ಮಿಕ ವಿವಾದಕ್ಕೆ ಸಿಲುಕಿದ ನಯನತಾರಾ ಜೋಡಿ
ರೋಮ್ ಸುಟ್ಟುಹೋದಾಗ ನೀರೋ ಪಿಟೀಲು ಬಾರಿಸುತ್ತಿದ್ದ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂಗಾಳ ಉರಿಯುವಾಗ ಪುಂಡ ಪೋಕರಿಗಳಿಗೆ ಮೊರೆಯಿಡುತ್ತಾರೆ. ಪಶ್ಚಿಮ ಬಂಗಾಳ ಪೊಲೀಸರೇ, ಸಚಿವರೇ ದಯವಿಟ್ಟು ನಿದ್ದೆಯಿಂದ ಎದ್ದೇಳಿ. ನೀವು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಕೇಂದ್ರ ಸರಕಾರದ ಸಹಾಯವನ್ನು ಪಡೆಯಿರಿ ಎಂದು ಬಿಜೆಪಿ ನಾಯಕ ಸುವೆಂದು ಅಧಿಕಾರಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
WB | Police attempt to douse fire after a fresh clash broke out b/w police & protesters in Panchla Bazaar, Howrah
Sec 144 CrPC imposed in & around the stretches of National Highways & Railway Stations under the jurisdiction of Uluberia-Sub Division, Howrah extended till June 15 pic.twitter.com/tmBYROTz5M
— ANI (@ANI) June 11, 2022
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.