ದಿವ್ಯಾಂಗರಿಗೆ ಮೀಸಲು ಅನುದಾನ ವ್ಯರ್ಥ
ಟೆಂಡರ್ ಪಡೆದುಕೊಂಡವರ ಜವಾಬ್ದಾರಿ. ಅದರಲ್ಲಿ ಲೋಪವಾಗಿರೋದು ಗೊತ್ತಾಗಿದೆ.
Team Udayavani, Jun 11, 2022, 6:31 PM IST
ರಾಮನಗರ: ಸ್ವಚ್ಛ ನಗರ ಎಂಬ ಹೆಗ್ಗಳಿಕೆ ರಾಮನಗರ ನಗರಸಭೆ ಭಾಜನವಾಗಿತ್ತು. ಆದರೆ, ಇದೀಗ ಸ್ವಚ್ಛತೆ ಮರೀಚಿಕೆಯತ್ತ ದಾಪುಗಾಲು ಹಾಕುತ್ತಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ನಗರಸಭೆ ವ್ಯಾಪ್ತಿಯಲ್ಲಿ ಇಟ್ಟಿರುವ ಇ-ಟಾಯ್ಲೆಟ್ ಮತ್ತು ದಿವ್ಯಾಂಗರಿಗಾಗಿ ನಿರ್ಮಿಸಲಾದ ಶೌಚಾಲಯಗಳು ಇಂದಿಗೂ ಸಾರ್ವಜನಿಕ ಮುಕ್ತ ಕಾಣದೆ ಬೀಗ ಜಡಿದ ಸ್ಥಿತಿಯಲ್ಲಿರುವುದು ಶೋಚನೀಯವಾಗಿದ್ದು, ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 7 ಇ- ಟಾಯ್ಲೆಟ್ ಗಳನ್ನು ಪರೀಕ್ಷಾರ್ಥವಾಗಿ ಹಾಕಲಾಗಿತ್ತು. ಇದನ್ನು ಎಲ್.ಕೆ, ಮೆಟಲ್‌ಶೀಟ್ಸ್ ಪ್ರೈ.ಲಿ. ಕಂ ಎಂಬ ಕಂಪನಿ ನಿರ್ಮಿಸಿತ್ತು. ಇದರ ನಿರ್ವಹಣೆ ಕೂಡ ಅವರೇ ಮಾಡಬೇಕಿತ್ತು. ಆದರೆ, ಇದರ ಸಂಪೂರ್ಣ ಜವಾಬ್ದಾರಿ ನಗರಸಭೆಯ ಆರೋಗ್ಯ ಶಾಖೆಯದ್ದಾಗಿದ್ದು, ನಗರಸಭೆಯ ಅಧಿಕಾರಿಗಳು ಇದ್ಯಾವುದೂ ಗೊತ್ತಿಲ್ಲ ಎನ್ನುವಂತೆ ನಿರುತ್ತರರಾಗಿದ್ದಾರೆ.
ಟೆಂಡರ್ ಮೂಲಕ ನಿರ್ವಹಣೆ ಜವಾಬ್ದಾರಿ ಹೊತ್ತವ ನಷ್ಟದ ನೆಪ ಹೇಳಿ ಸರ್ಕಾರದ ಮಹತ್ತರವಾದ ಯೋಜನೆಯನ್ನು ಹಳ್ಳದ ಹಾದಿ ಹಿಡಿಸುತ್ತಿದ್ದರೂ, ಆಡಳಿತದ ಚುಕ್ಕಾಣಿ ಹಿಡಿದಿರುವವರು ಚಿತ್ತ ಹರಿಸದೇ ಇರುವುದು ಮಾತ್ರ ವಿಪರ್ಯಾಸದ ಸಂಗತಿ.
ಕಾರ್ಯ ನಿರ್ವಹಿಸದ ದಿವ್ಯಾಂಗರ ಶೌಚಾಲಯ: ನಗರ ಪ್ರದೇಶದಲ್ಲಿ ಸcತ್ಛತೆ ಕಾಪಾಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಪಾರ್ಕ್ ಬಳಿ ದಿವ್ಯಾಂಗರಿಗೆ ಅನುಕೂಲವಾಗಲೆಂದು ವಿಕಲಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಆದರೆ, ಅದು ನೆಪಕ್ಕಷ್ಟೇ ಉದ್ಘಾಟನೆ ಭಾಗ್ಯ ಕಂಡಿದ್ದು, ಇಂದಿಗೂ ಅದನ್ನು ದಿವ್ಯಾಂಗರ ಉಪಯೋಗಕ್ಕೆ ಮುಕ್ತ ಮಾಡದೆ ಬೀಗ ಜಡಿದುಬಿಟ್ಟಿದ್ದಾರೆ.
ನಗರಸಭೆಯ 2017-18ನೇ ಸಾಲಿನ ಶೇ.3ರ ಎಸ್‌ಎಫ್‌ಸಿ ಮುಕ್ತ ನಿಧಿಯ ಅನುದಾನದಲ್ಲಿ ನಿರ್ಮಿಸಲಾದ ಶೌಚಾಲಯ ದಿವ್ಯಾಂಗರಿಗೆ ಉಪಯೋಗಕ್ಕೆ ಬರತ್ತಿಲ್ಲ. ಅಷ್ಟಕ್ಕೂ ನಿರ್ವಹಣೆಯ ಜವಾಬ್ದಾರಿಯನ್ನ ಟೆಂಡರ್ ಕರೆದು ಕೊಟ್ಟಿದ್ದಾರೆ. ಆದರೆ, ಅದರ ಟೆಂಡರ್ ಪಡೆದು ಜವಾಬ್ದಾರಿ ಹೊತ್ತವ ಅದನ್ನ ನಿರ್ವಹಣೆ ಮಾಡುತ್ತಿಲ್ಲ. ಇದನ್ನ ಕೇಳಬೇಕಾಗಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಕ್ಕೆ ಮೊರೆ ಹೋಗಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನ ಪ್ರಶ್ನಿಸಿದರೆ, ಅದು ಟೆಂಡರ್ ಪಡೆದುಕೊಂಡವರ ಜವಾಬ್ದಾರಿ. ಅದರಲ್ಲಿ ಲೋಪವಾಗಿರೋದು ಗೊತ್ತಾಗಿದೆ. ಆದರೆ, ಅಲ್ಲಿ ನಷ್ಟದ ನೆಪದಲ್ಲಿ ಅದರ ನಿರ್ವಹಣಾಕಾರ ಕೈಬಿಟ್ಟಿದ್ದಾರೆ.ಅವರನ್ನ ಕರೆಸಿ ಸರಿಪಡಿಸುತ್ತೇವೆ ಎನ್ನುತ್ತಾರೆ.
ರಸ್ತೆಬದಿ ನಿರ್ಮಾಣವೇ ತೊಂದರೆ: ಸಾರ್ವಜನಿಕರ ಉಪಯೋಗಕ್ಕೆಂದು ಸರ್ಕಾರ ನೂತನ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡುತ್ತಿದೆ. ಅಧಿಕಾರಿಗಳು ಯೋಜನೆ ಅನುಷ್ಟಾನಕ್ಕೆ ಮೊದಲು ಸಾಧಕ ಬಾಧಕಗಳ ಬಗ್ಗೆ ಗಮನ ಹರಿಸದೆ, ರಸ್ತೆ ಬದಿ ನಿರ್ಮಾಣ ಮಾಡಿರುವುದು ಸಾರ್ವಜನಿಕರಿಂದ ಹಾನಿಗೊಳಗಾಗಲು ಪ್ರಮುಖ ಕಾರಣವಾಗಿದೆ. ಅಲ್ಲದೆ, ರಸ್ತೆ ಬದಿಯೇ ಅವುಗಳನ್ನು ಇಟ್ಟಿರೋದು ಕೂಡ ಮಹಿಳೆಯರು ಮತ್ತು ಮಕ್ಕಳು ಬಳಸುವುದಕ್ಕೆ
ಮುಜುಗರವಾಗುತ್ತಿರೋದು ಕೂಡ ಯೋಜನೆ ಕ್ಷಣಾರ್ಧದಲ್ಲೇ ಬೈಕ್ ಕಳ್ಳತನ ಯಶಸ್ವಿಗೆ ಹಿನ್ನಡೆಯಾಗಿದೆ.
ಸಾರ್ವಜನಿಕರೇ ಸರ್ಕಾರದ ವಸ್ತುಗಳು ತಮ್ಮದೆಂಬ ಅರಿವಿಲ್ಲದೆ ಕಳುವು ಮಾಡಿಕೊಂಡು ಹೋಗುತ್ತಾರೆ. ಇದನ್ನು ಕಂಡರೂ ಕಾಣದಂತೆ ಕೆಲವರಿದ್ದಾರೆ. ನಾವು ಏನು ಮಾಡೋದು. ಅದನ್ನೇ ಕಾಯೊRಂಡು ಕೂರೋಕೆ ಸಾಧ್ಯವಿಲ್ಲ. ಆದರೆ, ಟೆಂಡರ್ ದಾರರಿಗೆ ಕರೆಸಿ ಎಚ್ಚರಿಕೆ ಕೊಟ್ಟು ನಿರ್ವಹಣೆ ಮಾಡುವಂತೆ ಹೇಳೆವೆ. ಸಾರ್ವಜನಿಕರೂ ಕೂಡ 5 ರೂ. ನಾಣ್ಯದ ಬದಲಿಗೆ ವಾಷರ್, ಕಬ್ಬಿಣದ ಬಿಲ್ಲೆಗಳನ್ನೂ ಬಳಸಿ, ನಷ್ಟಕ್ಕೆ ಕಾರಣವಾಗುತ್ತಿರುವುದು ಕೂಡ ಯೋಜನೆ ಹಿನ್ನೆಡೆಗೆ ಕಾರಣವಾಗಿದೆ.
● ಸುಬ್ರಹ್ಮಣ್ಯ, ಆರೋಗ್ಯ ಶಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ
ಸರ್ಕಾರದ ಹಣದಲ್ಲಿ ಯಾವುದೇ ಯೋಜನೆ ರೂಪಿಸಿದ್ದರೂ, ಅದರ ಉಪಯೋಗದ ಸಾಧಕ ಬಾಧಕ ಅಧಿಕಾರಿಗಳು ನಿರ್ವಹಿಸಬೇಕು. ಆದರೆ, ಟೆಂಡರ್ ಪಡೆದವರು ಕೈ ಬಿಟ್ಟಿರುವುದನ್ನ ಅಧಿಕಾರಿಗಳು ಇನ್ನಾದರೂ ಕ್ರಮವಹಿಸಿ, ಅವರಿಗೆ ಎಚ್ಚರಿಕೆ ನೀಡಿ ನಿರ್ವಹಣೆ ಮಾಡಿಸಬೇಕು. ಇಲ್ಲವಾದರೆ, ಇ- ಟಾಯ್ಲೆಟ್‌ಗಳನ್ನು ಶಾಲಾ ಆವರಣ, ಡೀಸಿ ಕಚೇರಿ, ತಾಲೂಕು ಕಚೇರಿಗಳಂತಹ ಸಾರ್ವಜನಿಕ ದಟ್ಟಣೆ ಇರುವ ಕಡೆ ಸ್ಥಾಪಿಸಬೇಕು. ಆ ಮೂಲಕ
ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು.
● ಗೂಳಿಗೌಡ (ಕುಮಾರ್), ಯುವ ಘಟಕದ ಮುಖಂಡ, ಜೆಡಿಎಸ್, ರಾಮನಗರ
ಪ್ರಕಾಶ್.ಎಂ.ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.