ಸಾಗರ : ಮುಪ್ಪಾನೆ ಲಾಂಚ್ ಸೌಲಭ್ಯ ಸ್ಥಗಿತ ; ನೀರು ಹೆಚ್ಚಾದರೆ ಮಾತ್ರ ಪುನರಾರಂಭ
Team Udayavani, Jun 11, 2022, 7:44 PM IST
ಸಾಗರ: ತಾಲೂಕಿನ ಕರೂರು ಹೋಬಳಿಯ ಮುಪ್ಪಾನೆ ಲಾಂಚ್ ಮಾರ್ಗವನ್ನು ಶರಾವತಿ ಹಿನ್ನೀರಿನಲ್ಲಿ ನೀರಿನ ಕೊರತೆಯ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಸುರಿದು ಅಗತ್ಯ ಪ್ರಮಾಣದ ನೀರು ಸಂಗ್ರಹವಾದರೆ ಮತ್ತೆ ಲಾಂಚ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಹಾಯಕ ಕಡವು ನಿರೀಕ್ಷಕ ದಾಮೋದರ ನಾಯ್ಕ ತಿಳಿಸಿದ್ದಾರೆ.
ಶನಿವಾರ ಪತ್ರಿಕೆಗೆ ಮಾಹಿತಿ ನೀಡಿ ಮಾತನಾಡಿದ ಅವರು, ಲಾಂಚ್ ಸಂಚಾರಕ್ಕೆ ಅಗತ್ಯ ನೀರಿನ ಮಟ್ಟ ಶರಾವತಿ ಹಿನ್ನೀರಿನಲ್ಲಿ ಇಲ್ಲ. ನೀರಿನ ಮಟ್ಟ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಒಂದು ದ್ವಿಚಕ್ರವಾಹನ ಮತ್ತು 5 ಜನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಲಾಂಚ್‌ನಲ್ಲಿ ಪ್ರಯಾಣ ಮಾಡಿ, ಪರಿಶೀಲನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಲಾಂಚ್‌ನ ತಳಭಾಗ ಭೂಸ್ಪರ್ಶವಾಗುವುದು ಗಮನಕ್ಕೆ ಬಂದಿದೆ ಎಂದರು.
ಶರಾವತಿ ಹಿನ್ನೀರಿನ ಮಟ್ಟ ಕುಸಿದ ಸಂದರ್ಭ ಲಾಂಚ್ ಸೌಲಭ್ಯ ಅಪಾಯಕಾರಿ. ದುರ್ಘಟನೆ ಸಂಭವಿಸುವ ಅಪಾಯವಿರುವುದರಿಂದ ಮುಪ್ಪಾನೆ ಹಲ್ಕೆರೆ ಲಾಂಚ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಆರಂಭವಾಗಿ ಹಿನ್ನೀರು ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಾದರೆ ಮುಪ್ಪಾನೆ ಲಾಂಚ್ ಸೌಲಭ್ಯ ಮತ್ತೆ ಆರಂಭಿಸಲಾಗುವುದು. ಸ್ಥಳೀಯ ಜನರು ಸಹಕರಿಸಬೇಕು ಎಂದರು.
ಇದನ್ನೂ ಓದಿ : ಆಸ್ಟ್ರೇಲಿಯ ವಿರುದ್ದದ ಏಕದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ: ತಂಡಕ್ಕೆ ಮರಳಿದ ಭನುಕ ರಾಜಪಕ್ಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.