ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ನಿಷೇಧ ಕಾರ್ಯಸಾಧುವೇ?


Team Udayavani, Jun 12, 2022, 6:00 AM IST

ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ  ನಿಷೇಧ  ಕಾರ್ಯಸಾಧುವೇ?

ಪ್ಲಾಸ್ಟಿಕ್‌ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಸಂಪೂರ್ಣವಾಗಿ ತ್ಯಜಿಸುವುದು ಕಷ್ಟ. ಆದರೆ ಹಂತಹಂತವಾಗಿ ಇದರ ಸಂಪೂರ್ಣ ನಿರ್ಮೂಲನೆ ಮಾಡಬಹುದು. ಇದಕ್ಕಾಗಿ ಸರಿಯಾದ ಯೋಜನೆ ರೂಪುಗೊಳ್ಳಬೇಕು ಮಾತ್ರವಲ್ಲ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ  ಕೊಡುಗೆಯನ್ನು ನೀಡಲೇಬೇಕು. ಈಗಲೇ ಈ ಬಗ್ಗೆ  ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ.

ಪ್ಲಾಸ್ಟಿಕ್‌ನಿಂದಾಗಿ ಪರಿಸರದ ಮೇಲಾಗುತ್ತಿರುವ ಹಾನಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜುಲೈ 1ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳ ಉತ್ಪಾದನೆ, ಬಳಕೆ, ಮಾರಾಟ, ಸಂಗ್ರಹ, ಆಮದಿಗೆ ನಿಷೇಧ ಹೇರಿದೆ. ನಿಷೇಧ ಜಾರಿಯ ಗಡುವು ಸಮೀಪಿಸುತ್ತಿದ್ದಂತೆ ಪಾನೀಯ  ತಯಾರಕರು, ಈ ಉದ್ಯಮಗಳಲ್ಲಿ ತೊಡಗಿಕೊಂಡಿರುವವರು  ಆತಂಕಿತ ರಾಗಿದ್ದಾರೆ. ಹೀಗಾಗಿ ನಿಷೇಧ ಜಾರಿಯನ್ನು ತಾತ್ಕಾಲಿಕ ವಾಗಿ ಮುಂದೂ ಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾ ರಂಭಿಸಿದ್ದಾರೆ.

ಪ್ಲಾಸ್ಟಿಕ್‌ ಸ್ಟ್ರಾಗಳ ಬದಲಿಗೆ ಅಗತ್ಯಕ್ಕೆ ಬೇಕಾದಷ್ಟು ಪೇಪರ್‌ ಸ್ಟ್ರಾಗಳನ್ನು ತಯಾರಿಸುವ ಸಾಮರ್ಥ್ಯ ದೇಶ ಕ್ಕಿಲ್ಲ. ಇದಕ್ಕೆ ಬೇಕಿರುವ ಕಚ್ಚಾ ವಸ್ತುಗಳನ್ನೂ ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆ  ನಿಷೇಧಿಸುವುದರಿಂದ ಪೂರೈಕೆ ಮತ್ತು ಆಮದಿನ ಮೇಲೆ ಒತ್ತಡ ಉಂಟಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.  ಒಂದು ಪ್ಲಾಸ್ಟಿಕ್‌ ಸ್ಟ್ರಾದ ಬೆಲೆ 15 ಪೈಸೆಯಾದರೆ ಪೇಪರ್‌ ಸ್ಟ್ರಾದ ಬೆಲೆ 40 ಪೈಸೆಯಾಗಿದೆ. ಹೀಗಾಗಿ ಸರಿಸುಮಾರು 3 ಸಾವಿರ ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ ಎಂದು ಕಂಪೆನಿಗಳು ತಿಳಿಸಿವೆ.

ಪರಿಸರ ಮಾಲಿನ್ಯಕ್ಕೆ  ಪ್ರಮುಖ ಕಾರಣ

ಪ್ಲಾಸ್ಟಿಕ್‌ ತ್ಯಾಜ್ಯವು ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಕೇಂದ್ರದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 2019- 20ರಲ್ಲಿ 34 ಲಕ್ಷ ಟನ್‌ಗಳಿಗಿಂತ ಹೆಚ್ಚು ಮತ್ತು 2018- 19ರಲ್ಲಿ 30.59 ಲಕ್ಷ ಟನ್‌ಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗಿದೆ.

ಪ್ಲಾಸ್ಟಿಕ್‌ ಕರಗುವುದಿಲ್ಲ. ಹೀಗಾಗಿ ಸಹಸ್ರಾರು ವರ್ಷಗಳ ಕಾಲ ಅದು ಮಣ್ಣಿನಲ್ಲಿ ಇರುತ್ತದೆ. ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಪ್ಲಾಸ್ಟಿಕ್‌ಗಳನ್ನು ಸುಡಲಾಗುವುದಿಲ್ಲ.  ಏಕ ಬಳಕೆಯ ಪ್ಲಾಸ್ಟಿಕ್‌ಗಳು ಗಾಳಿಯ ಮೂಲಕ ಚರಂಡಿ ಸೇರಿ ನದಿ, ತೊರೆಗಳ ಮೂಲಕ ಹಾದುಹೋಗಿ ಸಾಗರದ ಒಡಲು ಸೇರುತ್ತದೆ. ಪ್ರಪಂಚದ ಒಟ್ಟು ಪ್ಲಾಸ್ಟಿಕ್‌ನ ಶೇ. 93ರಷ್ಟನ್ನು  ಪ್ರತೀವರ್ಷ ಕೇವಲ 10 ನದಿಗಳು ಸಾಗಿಸುತ್ತವೆ.

2015ರಲ್ಲಿ ಜಾರ್ಜಿಯಾ ವಿಶ್ವ ವಿದ್ಯಾನಿಲಯದ ಸಂಶೋಧಕರು ವರ್ಷಕ್ಕೆ 4.8 ಮಿಲಿಯನ್‌ ಮತ್ತು 12.7 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಪ್ಲಾಸ್ಟಿಕ್‌ ಕರಾವಳಿಯ 30 ಮೈಲುಗಳ ಒಳಗೆ ವಾಸಿಸುವ ಜನರ ಮೂಲಕ ಸಾಗರಗಳನ್ನು ಪ್ರವೇಶಿಸುತ್ತವೆ ಎಂದು ಅಂದಾಜಿಸಿ¨ªಾರೆ. ಈ ಮಾಲಿನ್ಯದ ಬಹುಪಾಲು ಏಕಬಳಕೆಯ ಪ್ಲಾಸ್ಟಿಕ್‌ ತ್ಯಾಜ್ಯವಾಗಿದೆ. ಭಾರತವು ಪ್ರತೀದಿನ 25,940 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಆದರೆ ಅದರಲ್ಲಿ ಶೇ. 60ರಷ್ಟನ್ನು  ಮಾತ್ರ ಸಂಗ್ರಹಿಸಲಾಗುತ್ತದೆ ಎನ್ನುತ್ತಾರೆ ಅಧ್ಯಯನಕಾರರು.

ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧದ ಕುರಿತು ಜಾಗತಿಕ ಮಟ್ಟದಲ್ಲೇ ತೀವ್ರ ಚರ್ಚೆಯಾಗುತ್ತಿದೆ. ಭಾರತವು ಈಗ ಹೆಜ್ಜೆ ಇಟ್ಟಿದೆ. ಯುಎಸ್‌ನ ಮಾಲಿಬು, ಬಕ್ಲಿì, ಸಿಯಾಟಲ್‌, ಮಿಯಾಮಿ ಬೀಚ್‌ಗಳಲ್ಲಿ  ಈಗಾಗಲೇ ಪ್ಲಾಸ್ಟಿಕ್‌ ಸ್ಟ್ರಾಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ನ್ಯೂಯಾರ್ಕ್‌ ಹಾಗೂ ಹವಾಯಿ ರಾಜ್ಯದಲ್ಲಿ 2020ರಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆಯನ್ನು ನಿಷೇಧಿಸಲಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ 2014ರಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧದ ಪರಿಣಾಮ ಈಗ ಶೇ. 85ರಷ್ಟು ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಕಡಿಮೆಯಾಗಿದೆ.

ನಿಷೇಧ ಯಾಕೆ?

ಹೆಸರೇ ಸೂಚಿಸುವಂತೆ ಏಕ ಬಳಕೆಯ ಪ್ಲಾಸ್ಟಿಕ್‌ಗಳು ಒಂದೇ ಬಾರಿ ಬಳಕೆಗೆ ಯೋಗ್ಯವಾದಂಥವು. ಈ ಪ್ಲಾಸ್ಟಿಕ್‌ಗಳ ಸಮರ್ಪಕ ವಿಲೇವಾರಿ ಕಷ್ಟಸಾಧ್ಯವಾಗಿದ್ದು ಇದರ ಮರುಬಳಕೆಯೂ ಅಸಾಧ್ಯ. ಹೀಗಾಗಿ ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧದ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ  ವರ್ಷದ ಹಿಂದೆಯೇ ಉತ್ಪಾದಕರು, ಅಂಗಡಿಯವರು, ಬೀದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಸೂಚನೆ ನೀಡಿತ್ತು.  ಏಕ ಬಳಕೆಯ ಪ್ಲಾಸ್ಟಿಕ್‌ನಲ್ಲಿ ಬಲೂನ್‌, ಧ್ವಜ, ಕ್ಯಾಂಡಿ, ಐಸ್‌ಕ್ರೀಮ್‌, ಇಯರ್‌ಬಡ್ಸ್‌ನಲ್ಲಿ ಬಳಸುವ ಪ್ಲಾಸ್ಟಿಕ್‌ ಕಡ್ಡಿ, ಅಲಂಕಾರದಲ್ಲಿ ಬಳಸುವ ಥರ್ಮಾಕೋಲ್‌, ಪ್ಲೇಟ್‌, ಕಪ್‌, ಗ್ಲಾಸ್‌, ಕಟ್ಲೆರಿ, ಸ್ವೀಟ್‌ ಬಾಕ್ಸ್‌, ಪ್ಯಾಕಿಂಗ್‌ನಲ್ಲಿ ಬಳಸುವ ಪ್ಲಾಸ್ಟಿಕ್‌ ಟೇಪ್‌, ಆಹ್ವಾನ ಪತ್ರಿಕೆ, ಸಿಗರೇಟ್‌ ಪ್ಯಾಕೇಟ್‌ ಸೇರಿದಂತೆ 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಬ್ಯಾನರ್‌ಗಳು ಸೇರಿವೆ.

ಭಾರತದಲ್ಲಿ  ಪ್ಲಾಸ್ಟಿಕ್‌ ಸಮಸ್ಯೆ

2018-19ರಲ್ಲಿ ಭಾರತದಲ್ಲಿ ಒಟ್ಟು 33.60 ಲಕ್ಷ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗಿತ್ತು ಎಂದು ಸಿಪಿಸಿಬಿ ವರದಿ ಮಾಡಿದೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಪ್ಲಾಸ್ಟಿಕ್‌ ಬಳಕೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಶೇ. 35ರಷ್ಟಿದೆ. ಹೆಚ್ಚುತ್ತಿರುವ ಪ್ಲಾಸ್ಟಿಕ್‌ ಬಳಕೆ ಮತ್ತು ಅದರ ಪರಿಣಾಮದ ಹಿನ್ನೆಲೆಯಲ್ಲಿ 2022ರ ಜುಲೈಯಿಂದ ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್‌ ಅನ್ನು ನಿಷೇಧಿಸಲು ನಿರ್ಧರಿಸಲಾಗಿದೆ.

ಪ್ಲಾಸ್ಟಿಕ್‌ ಪ್ಯಾಕೇಜಿಂಗ್‌ ಉತ್ಪನ್ನಗಳ ತಯಾರಕರಿಗೆ ಪರಿಸರ ಸಚಿವಾಲಯ ಹೊಸ ನಿರ್ದೇಶನ ನೀಡಿದ್ದು, ಇದರ ಅನ್ವಯ ಈ ಕಂಪೆನಿಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ಅದರ ಒಂದು ಭಾಗವನ್ನು ಮರುಬಳಕೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಸ್ತೆ ನಿರ್ಮಾಣ, ವಿದ್ಯುತ್‌, ತೈಲ, ಸಿಮೆಂಟ್‌ ಉತ್ಪಾದನೆಗೆ ಬಳಸಲು ಸರಕಾರ ಚಿಂತನೆ ನಡೆಸಿದೆ. ಇದೇ ಯೋಜನೆಯ ಆಧಾರದ ಮೇಲೆ ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಿಸಲಾಗಿದೆ.

ಎಲ್ಲೆಲ್ಲಿ ನಿಷೇಧ?

ಕೀನ್ಯಾದಲ್ಲಿ  ಪ್ಲಾಸ್ಟಿಕ್‌ ಬಳಕೆಯನ್ನು  ನಿಷೇಧಿಸಲಾಗಿದ್ದು, ಕಾನೂನು  ಉಲ್ಲಂ ಸಿದವರಿಗೆ 4 ವರ್ಷಗಳ  ಸೆರೆಮನೆ ವಾಸ, 40 ಸಾವಿರ ಡಾಲರ್‌ ದಂಡ ವಿಧಿಸಲಾಗುತ್ತದೆ. ಫ್ರಾನ್ಸ್‌, ಚೀನ, ಇಟಲಿಯಲ್ಲಿ  ಕೆಲವೆಡೆ ಏಕ ಬಳಕೆಯ ಪ್ಲಾಸ್ಟಿಕ್‌  ಬಳಕೆಯನ್ನು ಸಂಪೂರ್ಣವಾಗಿ  ನಿಷೇಧಿಸಲಾಗಿದ್ದರೆ ಇನ್ನು ಕೆಲವೆಡೆ  ಭಾಗಶಃ ನಿಷೇಧ ಅಥವಾ ತೆರಿಗೆ  ವಿಧಿಸಲಾಗಿದೆ.

ಪ್ರಾಣಿಗಳು ಮತ್ತು ಮಾನವನ ಆರೋಗ್ಯದ ಮೇಲೆ ಪರಿಣಾಮ

ಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಸೇರಿ ಸಣ್ಣ ವಿಷಕಾರಿ ಕಣಗಳಾಗುತ್ತವೆ. ಇದು ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತವೆ. ಪ್ರಾಣಿಗಳು ಇದನ್ನು ಸೇವಿಸಿದಾಗ ಆಹಾರ ಸರಪಳಿಯಲ್ಲಿ ಸೇರಿಕೊಳ್ಳುತ್ತವೆ. ಭೂಮಂಡಲದ ಮೈಕ್ರೋಪ್ಲಾಸ್ಟಿಕ್‌ ಮಾಲಿನ್ಯವು ಸಮುದ್ರದ ಮೈಕ್ರೋಪ್ಲಾಸ್ಟಿಕ್‌ ಮಾಲಿನ್ಯಕ್ಕಿಂತ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಅಂತಿಮವಾಗಿ ಇದು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ ಎನ್ನುತ್ತಾರೆ ಜರ್ಮನಿಯ ಸಂಶೋಧಕರು.

ಪರಿಣಾಮ ಅಗಾಧ

– ಜಾಗತಿಕವಾಗಿ ವಾರ್ಷಿಕ ಪ್ಲಾಸ್ಟಿಕ್‌ ಬಳಕೆಯ ಅರ್ಧದಷ್ಟು ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನವಾಗಿದೆ.

– ವಾರ್ಷಿಕವಾಗಿ 380 ಮಿಲಿಯನ್‌ ಮೆಟ್ರಿಕ್‌ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತದೆ.

– 1950ರ ದಶಕದಲ್ಲೇ ಪ್ಲಾಸ್ಟಿಕ್‌ ಪರಿಚಯವಾಗಿದ್ದು, ಈವರೆಗೆ 8.3 ಬಿಲಿಯನ್‌ ಮೆ. ಟನ್‌ ಪ್ಲಾಸ್ಟಿಕ್‌ ಉತ್ಪಾದಿಸಲಾಗಿದೆ.

– ಪ್ರತೀ ನಿಮಿಷಕ್ಕೆ ಮಾನವರು 1.2 ಮಿಲಿಯನ್‌ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸುತ್ತಾರೆ. ಅವುಗಳಲ್ಲಿ ಸರಿಸುಮಾರು ಶೇ. 91ರಷ್ಟನ್ನು ಮರು ಬಳಕೆ ಮಾಡುವುದಿಲ್ಲ.

– ಪ್ರತೀ ವ್ಯಕ್ತಿ ತಿಂಗಳಿಗೆ ಸರಾಸರಿ 13 ಬಾಟಲಿಗಳನ್ನು ಬಳಸುತ್ತಾನೆ ಎಂದಾದರೆ ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ಬಳಸಿದರೆ ವಾರ್ಷಿಕವಾಗಿ 156 ಪ್ಲಾಸ್ಟಿಕ್‌ ಬಾಟಲಿಗಳನ್ನು ಉಳಿಸಬಹುದು.

– ವಿಶ್ವದಾದ್ಯಂತ ಐದು ಟ್ರಿಲಿಯನ್‌ ಪ್ಲಾಸ್ಟಿಕ್‌ ಚೀಲಗಳನ್ನು ಉತ್ಪಾದಿಸಲಾಗುತ್ತದೆ. ಒಂದು  ಚೀಲ ಸಂಪೂರ್ಣವಾಗಿ ಕರಗಲು ಒಂದು ಸಾವಿರ ವರ್ಷ ಬೇಕಾಗುತ್ತದೆ.

– ಪ್ರಪಂಚದಲ್ಲಿ  ಪ್ರತೀ ವರ್ಷ 500 ಶತಕೋಟಿ ಪ್ಲಾಸ್ಟಿಕ್‌ ಕಪ್‌ಗಳನ್ನು ಬಳಸಲಾಗುತ್ತಿದೆ.

– ಪ್ರತೀವರ್ಷ ಕನಿಷ್ಠ 14 ಮಿಲಿಯನ್‌ ಟನ್‌ ಪ್ಲಾಸ್ಟಿಕ್‌ ಸಾಗರ ಸೇರುತ್ತದೆ.

– ಪ್ಲಾಸ್ಟಿಕ್‌ ತ್ಯಾಜ್ಯ ವಾರ್ಷಿಕ ಶೇ. 9ರ ದರದಲ್ಲಿ ಬೆಳೆಯುತ್ತದೆ.

– ಅಧ್ಯಯನವೊಂದರ ಪ್ರಕಾರ ಪ್ರತೀ ವರ್ಷ ವ್ಯಕ್ತಿಯೊಬ್ಬರು ಸರಾಸರಿ 70 ಸಾವಿರ ಮೈಕ್ರೋಪ್ಲಾಸ್ಟಿಕ್‌ ಕಣಗಳನ್ನು ಸೇವಿಸುತ್ತಾರೆ.

– ಪ್ಲಾಸ್ಟಿಕ್‌ ಮಾಲಿನ್ಯದಿಂದ ಪ್ರತೀವರ್ಷ 1 ಮಿಲಿಯನ್‌ ಸಮುದ್ರ ಪ್ರಾಣಿಗಳು ಸಾಯುತ್ತವೆ.

– ಉತ್ಪಾದನೆಯಾಗುವ ಪ್ಲಾಸ್ಟಿಕ್‌ನಲ್ಲಿ  ಶೇ.75ರಷ್ಟು ತ್ಯಾಜ್ಯ.

– ಪ್ಲಾಸ್ಟಿಕ್‌ ಮಣ್ಣಿನಲ್ಲಿ ಕರಗಲು ಸುಮಾರು 500- 1,000 ವರ್ಷಗಳು ಬೇಕಾಗುತ್ತದೆ.

– ಪ್ರಪಂಚದಾದ್ಯಂತ ಬೀಚ್‌ಗಳಲ್ಲಿರುವ ಒಟ್ಟು ಕಸಗಳಲ್ಲಿ  ಶೇ. 73 ಪ್ಲಾಸ್ಟಿಕ್‌ ಆಗಿದೆ.

– ಸುಮಾರು ಶೇ. 91ರಷ್ಟು ಪ್ಲಾಸ್ಟಿಕ್‌ ಅನ್ನು  ಮರುಬಳಕೆ ಮಾಡಲಾಗುವುದಿಲ್ಲ.

– ಏಕ ಬಳಕೆಯ ಪ್ಲಾಸ್ಟಿಕ್‌ ತ್ಯಾಜ್ಯ ಪ್ರತೀವರ್ಷ ಸರಿಸುಮಾರು 380 ಮಿಲಿಯನ್‌ ಟನ್‌ ಅಥವಾ  ಒಟ್ಟು ಪ್ಲಾಸ್ಟಿಕ್‌ ಉತ್ಪಾದನೆಯ ಶೇ. 50ರಷ್ಟು

– ಒಬ್ಬ ವ್ಯಕ್ತಿ ವರ್ಷಕ್ಕೆ 700ಕ್ಕೂ ಹೆಚ್ಚು ಪ್ಲಾಸಿcಕ್‌ ಚೀಲ ಬಳಸುತ್ತಾನೆ. ವಿಶ್ವ ಮಟ್ಟದಲ್ಲಿ ಪ್ರತೀ ಸೆಕೆಂಡಿಗೆ 1,60,000 ಚೀಲಗಳು,  ವರ್ಷಕ್ಕೆ 5 ಟ್ರಿಲಿಯನ್‌ ಚೀಲ ಬಳಕೆಯಾಗುತ್ತದೆ.

– ಪ್ಲಾಸ್ಟಿಕ್‌ ತ್ಯಾಜ್ಯದ ಮರುಬಳಕೆಯಲ್ಲಿ ನಾರ್ವೆ ದೇಶವು ಮುಂಚೂಣಿಯಲ್ಲಿದೆ. ಇಲ್ಲಿ ಅತ್ಯಧಿಕ ಪಾಲಿಥೀನ್‌ ಟೆರೆಫ್ತಾಲೇಟ್‌ ಮರುಬಳಕೆ ದರ ಶೇ. 97ರಷ್ಟಾಗಿದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.