ಕಾರ್ಕಳದಲ್ಲಿ ಕಾಂಗ್ರೆಸ್ ಗೆಲುವು: ವೀರಪ್ಪ ಮೊಯ್ಲಿ ಶಪಥ
Team Udayavani, Jun 12, 2022, 6:45 AM IST
ಕಾರ್ಕಳ: ಜಾತಿ, ಮತಗಳ ಧ್ರುವೀಕರಣ ಬಿಜೆಪಿ ಸಂಸ್ಕೃತಿ. ಕಾಂಗ್ರೆಸ್ ಧರ್ಮ, ಪಕ್ಷ ಎಲ್ಲವನ್ನೂ ಮೀರಿದ ಪಕ್ಷ. ಜಾತಿಯ ಸಮೀಕರಣ ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಂದೂ ಸೋಲಿಲ್ಲ. ಎಲ್ಲ ಗೋಡೆಗಳನ್ನು ಕೆದಕಿ ಭ್ರಮೆ ಹೋಗಲಾಡಿಸುವ ರೀತಿಯಲ್ಲಿ ಕರಾವಳಿ ಸಹಿತ ರಾಜ್ಯದಲ್ಲಿ ಪಕ್ಷ ಸಂಘಟಿಸುವ ಕಾರ್ಯ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯ್ಲಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಶನಿವಾರ ಮಾತನಾಡಿದ ಅವರು ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಿದ್ದೇನೆ. ಅವಿಭಜಿತ ಜಿಲ್ಲೆಗಳಲ್ಲಿ ಅಗಸ್ಟ್ ತಿಂಗಳಿನಿಂದ ಪ್ರವಾಸ ಕೈಗೊಳ್ಳುವೆ ಮಾತ್ರವಲ್ಲದೇ ಸಕ್ರಿಯವಾಗಿ ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವೆ ಎಂದರು.
ಸುನಿಲ್ ಮೇಲೆ ಬೇಸರ
ಹೆಬ್ರಿ ತಾಲೂಕು, ಕಚೇರಿ ಕಾಂಗ್ರೆಸ್ ಸರಕಾರದ ಸಾಧನೆ. ಹೆಬ್ರಿ ತಾಲೂಕು ರಚನೆಗೆ 10 ಕೋಟಿ ರೂ. ಅನುದಾನ ಕಾದಿರಿಸಲಾಗಿತ್ತು. ಆದರೆ ಹೆಬ್ರಿ ತಾಲೂಕು ಕಟ್ಟಡ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಸಚಿವ ಸುನಿಲ್ ಕಾರ್ಕಳ ಉತ್ಸವಕ್ಕೆ ಆಮಂತ್ರಣ ನೀಡಿದರು. ಉದ್ಘಾಟನೆ ವೇಳೆ ಮರೆತು ಬಿಟ್ಟರು. ಜನರ ಭಾವನೆಗೆ ಸುನಿಲ್ ತಿಲಾಂಜಲಿ ಇಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಎಣ್ಣೆಹೊಳೆ: ತನಿಖೆ ನಡೆಸುತ್ತೇವೆ
ಎಣ್ಣೆಹೊಳೆ ಏತ ನೀರಾವರಿ ಯೋಜನೆ ನಮ್ಮ ಸರಕಾರದ ಸಾಧನೆ. ಆರಂಭದಲ್ಲಿ 41 ಕೋ. ರೂ. ಕಾದಿರಿಸಲಾಗಿತ್ತು. ಪ್ರಸ್ತುತ 108 ಕೋಟಿ ರೂ. ವಿನಿಯೋಗಿಸಿ ಎಣ್ಣೆಹೊಳೆ ಸೇತುವೆ ಬಳಿ ನಿರ್ಮಿಸಲಾಗಿದೆ. ವಿವಿಧೋದ್ದೇಶಕ್ಕೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದ್ದು, ಪ್ರತಿಬಂಧಕ ಗೋಡೆಗಳ ನಿರ್ಮಾಣವಾಗದೆ ಊರು ಮುಳುಗುವ ಭೀತಿ ಇದೆ. ಈ ಸಮಗ್ರ ಯೋಜನೆಯ ಖರ್ಚು ವೆಚ್ಚಗಳ ಕುರಿತಂತೆ ಜಿಲ್ಲಾ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲಾಗುವುದು ಎಂದರು.
ಬೋಳ ಘಟನೆ ನ್ಯೂಸೆನ್ಸ್ ವ್ಯಾಲ್ಯೂ !
ಬೋಳದಲ್ಲಿ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿರುವುದು ಕಾರ್ಕಳದ ಇತಿ
ಹಾಸದಲ್ಲಿ ಕಪ್ಪು ದಿನ. ದೇಶದ್ರೋಹಿ ಕೃತ್ಯದಲ್ಲಿ ತೊಡಗಿಸಿಕೊಂಡವರು ಯಾರೇ ಆಗಲಿ ಅವರನ್ನು ಬಂಧಿಸುವ ಜವಾಬ್ದಾರಿ ಸರಕಾರ ಹಾಗೂ ಪೊಲೀಸ್ ಇಲಾಖೆಯದ್ದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಸುಧಾಕರ ಕೋಟ್ಯಾನ್, ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಹಿರಿಯಂಗಡಿ, ಶೇಖರ ಮಡಿವಾಳ, ಜಿಲ್ಲಾ ವಕ್ತಾರ ಬಿಪಿನ್‌ಚಂದ್ರಪಾಲ್, ಮಹಿಳಾ ಕಾಂಗ್ರೆಸ್
ಅಧ್ಯಕ್ಷೆ ರಂಜನಿ ಹೆಬ್ಟಾರ್, ವಕ್ತಾರ ಶುಭದ ರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಬಾಲಕೃಷ್ಣ, ಪ್ರಭಾಕರ ಬಂಗೇರ, ರವಿಶಂಕರ್ ಶೇರಿಗಾರ್, ಸುಭಿತ್ ಎನ್.ಆರ್., ಸುಧಾಕರ ಶೆಟ್ಟಿ, ನವೀನ್ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ್ ಇನ್ನಾ, ಅಶ³ಕ್ ಅಹ್ಮದ್ ಉಪಸ್ಥಿತರಿದ್ದರು.
ಕಾರ್ಕಳದಲ್ಲಿ ಕಾಂಗ್ರೆಸ್ ಶಾಸಕ! ಭರವಸೆಯಲ್ಲ ಇದು ಶಪಥ
ಕಾರ್ಕಳ ಕ್ಷೇತ್ರದಿಂದ 6 ಬಾರಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಸ್ಥಾನ ಪಡೆದ ತನ್ನನ್ನು ಕ್ಷೇತ್ರದ ಜನತೆ ಆಶೀರ್ವದಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಎಂಎಲ್‌ಎ ಗೆದ್ದು ಬರುವಂತೆ ಸಂಘಟನೆ ಮಾಡುವೆ. ಇದು ಬರೀ ಭರವಸೆಯಲ್ಲ ಶಪಥ ಎಂದು ಮೊಯ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.