ಕನ್ನಡ ನಾಮಫಲಕಗಳಲ್ಲಿ ಪದಗಳ ದೋಷ !: “ಬಸ್” ಬದಲಾಗಿ “ಬಸು” ಎಂದು ಗೀಚಿ ಅಪಹಾಸ್ಯ
Team Udayavani, Jun 12, 2022, 10:51 AM IST
![4kannada](https://www.udayavani.com/wp-content/uploads/2022/06/4kannada-620x372.jpg)
![4kannada](https://www.udayavani.com/wp-content/uploads/2022/06/4kannada-620x372.jpg)
ವಾಡಿ: ಚಿತ್ತಾಪುರ ತಾಲೂಕಿನ ಸಿಮೆಂಟ್ ನಗರಿ ವಾಡಿ, ನಾಲವಾರ ವಲಯದ ವಿವಿಧ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಕನ್ನಡಾಕ್ಷರಗಳ ನಾಮಫಲಕಗಳಲ್ಲಿ ಪದಗಳ ದೋಷಗಳು ಕಂಡು ಬಂದಿವೆ.
ಕೊಲ್ಲೂರು ಗ್ರಾಮದ ಡಾ|ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಸೂಕ್ತ ನಾಮಫಲ ಅಳವಡಿಸಲು ಸಾರಿಗೆ ಸಂಸ್ಥೆಗೆ ಆಸಕ್ತಿಯಿಲ್ಲ ಎಂಬುದು ಸಾಬೀತಾಗಿದೆ.
ಯಾವುದೋ ಕಂಪನಿಗಳು ಗ್ರಾಮೀಣ ಪ್ರದೇಶಕ್ಕೆ ಕಾಲಿಡುವ ಮೂಲಕ ಎಲ್ಲ ಬಸ್ ನಿಲ್ದಾಣಗಳಿಗೂ ಬಣ್ಣ ಬಳಿದು ತಮ್ಮ ಕಂಪನಿಯ ಜಾಹೀರಾತು ಪ್ರಕಟಿಸಿವೆ. ಬಸ್ ನಿಲ್ದಾಣದ ನಾಮಫಲಕವನ್ನು ಅವರಸರದಲ್ಲಿ ಇವರೇ ಬರೆದು ಹೋಗಿದ್ದರಿಂದ “ಬಸ್’ ಬದಲಾಗಿ “ಬಸು’ ಎಂದು ಗೀಚಿ ಅಪಹಾಸ್ಯ ಮಾಡಿದ್ದಾರೆ.
ಜಾಹೀರಾತು ಕಂಪನಿಗಳ ಹಾವಳಿಗೆ ಸಿಕ್ಕು ನಲುಗುತ್ತಿರುವ ಗ್ರಾಮೀಣ ಭಾಗದ ಬಸ್ ನಿಲ್ದಾಣಗಳು ತಮ್ಮ ಸೌಂದರ್ಯ ಕಳೆದುಕೊಂಡಿವೆ. ಸುಣ್ಣಬಣ್ಣ ಮಾಡಲು ಸಾಧ್ಯವಾಗದೇ ಸಾರಿಗೆ ಇಲಾಖೆ ಕೈಕಟ್ಟಿ ಕುಳಿತದ್ದೇ ಈ ಕಂಪನಿಗಳ ಜಾಹೀರಾತಿಗೆ ಲಾಭ ತಂದು ಕೊಡುತ್ತಿವೆ. ಇದಲ್ಲದೇ ವಿವಿಧ ಗ್ರಾಮಗಳ ಸರ್ಕಾರಿ ನಾಮಫಲಕಗಳಲ್ಲೂ ಸಾಕಷ್ಟು ಕನ್ನಡ ಅಕ್ಷರಗಳ ಪದ ದೋಷ ಎದ್ದು ಕಾಣುತ್ತಿವೆ. ಪ್ರಥಮ-ಪ್ರದಮ, ಶಾಸಕ ಪ್ರಿಯಾಂಕ್ -ಪ್ರಿಯಾಂಕ, ಅಣೆಕಟ್ಟು-ಅಣಿಕಟ್, ಹಳಕರ್ಟಿ- ಹಲಕಟ್ಟಿ-ಹಲಕಟ್ಟಾ? ಹೀಗೆ ವಿವಿಧ ರೀತಿಯ ನಾಮಫಲಕಗಳು ಕನ್ನಡವನ್ನು ಅಣಕಿಸುತ್ತಿವೆ.
ಇದನ್ನೂ ಓದಿ:ಮೋದಿ ಭದ್ರತೆಗೆ ತೆರಳಿದ್ದ ಯೋಧನ ದೇಹದಲ್ಲಿ 30ಕ್ಕೂ ಹೆಚ್ಚು ಗ್ರೆನೇಡ್ ಚೂರುಗಳು
ಕನ್ನಡಕ್ಕೆ ಆದ್ಯತೆ ನೀಡುವಲ್ಲಿ ಅಂಗಡಿ ಮಾಲೀಕರ ನಿರ್ಲಕ್ಷ್ಯ
ಹೆದ್ದಾರಿ ಸಂಪರ್ಕ ಹೊಂದಿರುವ ಸಿಮೆಂಟ್ ನಗರಿ ವಾಡಿ ಪಟ್ಟಣ ಸೇರಿದಂತೆ ನಾಲವಾರ, ಕುಂಬಾರಹಳ್ಳಿ, ಕೊಲ್ಲೂರ, ರಾವೂರ, ಇಂಗಳಗಿ, ಕಮರವಾಡಿ, ಹಳಕರ್ಟಿ, ಲಾಡ್ಲಾಪುರ ಹಾಗೂ ಇನ್ನಿತರ ಪ್ರದೇಶಗಳಲ್ಲಿನ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಲ್ಲಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲವೂ ಇಂಗ್ಲಿಷ್ ಮತ್ತು ಹಿಂದಿಮಯವಾಗಿದ್ದು ಕನ್ನಡ ಮೂರನೇ ದರ್ಜೆಗೆ ಜಾರಿದೆ. ಕೆಲವರು ನಾಮಫಲಕದ ಮೊದಲಿಗೆ ಕನ್ನಡದಲ್ಲಿ ಬರೆಯಿಸಿದ್ದಾರೆಯಾದರೂ ಅದು ಆಂಗ್ಲ ಅಕ್ಷರಗಳಿಗಿಂತ ತೀರಾ ಚಿಕ್ಕದಾಗಿವೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರದ ಆದೇಶವಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲವಾಗಿದೆ.
–ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![11-kharge](https://www.udayavani.com/wp-content/uploads/2025/02/11-kharge-150x90.jpg)
![11-kharge](https://www.udayavani.com/wp-content/uploads/2025/02/11-kharge-150x90.jpg)
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
![13-](https://www.udayavani.com/wp-content/uploads/2025/02/13-1-2-150x90.jpg)
![13-](https://www.udayavani.com/wp-content/uploads/2025/02/13-1-2-150x90.jpg)
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
![Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ](https://www.udayavani.com/wp-content/uploads/2025/02/ban-150x100.jpg)
![Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ](https://www.udayavani.com/wp-content/uploads/2025/02/ban-150x100.jpg)
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
![MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ](https://www.udayavani.com/wp-content/uploads/2025/02/khandre-2-150x84.jpg)
![MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ](https://www.udayavani.com/wp-content/uploads/2025/02/khandre-2-150x84.jpg)
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
![Yathanaa](https://www.udayavani.com/wp-content/uploads/2025/02/Yathanaa-150x90.jpg)
![Yathanaa](https://www.udayavani.com/wp-content/uploads/2025/02/Yathanaa-150x90.jpg)
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್