ಸಂಗೀತ ಅಮೂರ್ತವಾದ ಮನೋಜ್ಞ ಕಲೆ: ಡಾ| ಶಶಿಧರ ನರೇಂದ್ರ

ನಿರ್ದೇಶಕ ಶಶಿಧರ ನರೇಂದ್ರ-ಸೊಲ್ಲಾಪುರದ ಹಿರಿಯ ತಬಲಾ ಕಲಾವಿದ ಪಂ| ಬದಾಮಿಕರಗೆ ಸನ್ಮಾನ

Team Udayavani, Jun 12, 2022, 12:11 PM IST

7

ಧಾರವಾಡ: ಸೂರ್‌ ಹಿ ಈಶ್ವರ ಅನ್ನುವಂತೆ, ಸೂರ್‌ ಎನ್ನುವುದು ಇಡೀ ಜಗತ್ತಿಗೆ ಸಂಬಂಧಿಸಿದ್ದು, ಸಂಗೀತ ಎಂಬುದು ಅತ್ಯಂತ ಅಮೂರ್ತವಾದ ಮನೋಜ್ಞ ಕಲೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಮಂತ್ರಾಲಯದ ತಜ್ಞ ಸಮಿತಿ ಸದಸ್ಯ ಡಾ| ಶಶಿಧರ ನರೇಂದ್ರ ಹೇಳಿದರು.

ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಹಾಗೂ ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಬಲಾ ಹಾಗೂ ತಬಲಾದ ನೆರಳು ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ 1917ಕ್ಕೂ ಮೊದಲು ಹಿಂದುಸ್ತಾನಿ ಸಂಗೀತ ಪ್ರಚಲಿತವಿರಲಿಲ್ಲ. ಸಿತಾರರತ್ನ ರಹಿಮತ್‌ ಖಾನ್‌ರು ಧಾರವಾಡಕ್ಕೆ ಆಗಾಗ ಬರುತ್ತಿದ್ದರು. ಅವರಿಂದಲೇ ಧಾರವಾಡದಲ್ಲಿ ಹಿಂದುಸ್ತಾನಿ ಸಂಗೀತ ಆರಂಭಗೊಂಡಿತು. ಸವಾಯಿ ಗಂಧರ್ವರು, ಪಂ| ಪಂಚಾಕ್ಷರಿ ಗವಾಯಿಗಳು, ಡಾ| ಮಲ್ಲಿಕಾರ್ಜುನ ಮನಸೂರ, ಡಾ| ಗಂಗೂಬಾಯಿ ಹಾನಗಲ್‌, ಪಂ| ಪುಟ್ಟರಾಜ ಗವಾಯಿಗಳು, ಭಾರತರತ್ನ ಭೀಮಸೇನ ಜೋಶಿ, ಪಂ| ಬಸವರಾಜ ರಾಜಗುರು ಅವರಂಥ ಮೇರು ಕಲಾವಿದರ ಹಿಂದುಸ್ತಾನಿ ಸಂಗೀತ ಪರಂಪರೆಯಿಂದ ಧಾರವಾಡವು ಇಡೀ ಜಗತ್ತಿನಲ್ಲಿಯೇ ಗುರುತಿಸುವಷ್ಟರ ಮಟ್ಟಿಗೆ ಬೆಳೆದಿದೆ. ಧಾರವಾಡ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಮುಂದಿನ ಪೀಳಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಸಿದ್ಧಗೊಂಡಿದೆ ಎಂದರು.

ತಬಲಾದ ಕುರಿತು ವಿಶೇಷ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಸೊಲ್ಲಾಪುರದ ರಾಷ್ಟ್ರಮಟ್ಟದ ಖ್ಯಾತ ತಬಲಾ ವಾದಕ ಪಂ| ಆನಂದ ಬದಾಮಿಕರ ನಡೆಸಿಕೊಟ್ಟರು. ಲೆಹರಾದಲ್ಲಿ ವಿನೋದ ಪಾಟೀಲ ಸಾಥ್‌ ಸಂಗತ್‌ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಶಾಂತಾರಾಮ ಹೆಗಡೆ ಮಾತನಾಡಿ, 1958ರಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ವಿಭಾಗವಾಗಿ ಆರಂಭಗೊಂಡು, 1973ರಲ್ಲಿ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯವಾಗಿ ಸ್ಥಾಪನೆಗೊಂಡು ಈವರೆಗೆ ನಮ್ಮ ಮಹಾವಿದ್ಯಾಲಯದ ಸಹಸ್ರಾರು ಸಂಖ್ಯೆಯ ಸಂಗೀತ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರಾದ್ಯಂತ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ಸಂಗತಿಯಾಗಿದೆ ಎಂದರು.

ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರ ಸಂಸ್ಕೃತಿ ಮಂತ್ರಾಲಯದ ನಾಗಪುರ ಕಲ್ಚರಲ್‌ ಸೆಂಟರ್‌ ಸದಸ್ಯರಾಗಿ ನೇಮಕಗೊಂಡ ಹಿರಿಯ ನಟ, ನಿರ್ದೇಶಕ ಡಾ| ಶಶಿಧರ ನರೇಂದ್ರ ಮತ್ತು ಸೊಲ್ಲಾಪುರದ ಹಿರಿಯ ತಬಲಾ ಕಲಾವಿದ ಪಂ| ಆನಂದ ಬದಾಮಿಕರ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವೀರಣ್ಣ ಪತ್ತಾರ, ಡಾ| ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ| ಗೋಪಿಕೃಷ್ಣ, ಅಲ್ಲಮಪ್ರಭು ಕಡಕೋಳ, ಡಾ| ಶಕ್ತಿ ಪಾಟೀಲ, ಸುಜಾತಾ ಕಮ್ಮಾರ, ಡಾ| ಶರಣಬಸಪ್ಪ ಮೆಡೇದಾರ, ಡಾ| ಗುರುಬಸವ ಮಹಾಮನೆ, ಡಾ| ಪರಶುರಾಮ ಕಟ್ಟಿಸಂಗಾವಿ, ಚಂದ್ರಶೇಖರಯ್ಯ ಹಿರೇಮಠ, ಡಾ| ಕೆ.ಮೃತ್ಯುಂಜಯ, ಡಾ| ಮಂಜುನಾಥ ಭಜಂತ್ರಿ, ಡಾ| ರೂಪಾ ಬುಡ್ನಾಯಕ, ನೂರಜಾನ್‌ ನದಾಫ್‌, ಮೋಸಿನಖಾನ್‌, ಸುರೇಶ ನಿಡಗುಂದಿ, ಜಯತೀರ್ಥ ಪಂಚಮುಖೀ, ಪ್ರಸಾದ ಮಡಿವಾಳರ, ಬಸವರಾಜ ಹಿರೇಮಠ, ಭೂಷಣ ಗುಡ್ಡದಮಠ, ಅನಿಲ ಮೇತ್ರಿ, ಹೇಮಂತ ಜೋಶಿ, ಕವಿತಾ ಜಂಗಮಶೆಟ್ಟಿ ಇದ್ದರು.

ಸಹನಾ ಮಡಿವಾಳರ ನಿರೂಪಿಸಿದರು. ಡಾ| ಎ.ಎಲ್‌. ದೇಸಾಯಿ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.