ಹಿಂದೂ ರಾಷ್ಟ್ರಕ್ಕಾಗಿ ನಾವು ಹೋರಾಡಬೇಕಿದೆ : ಸದ್ಗುರು ಚಾರುದತ್ತ ಪಿಂಗಳೆ
Team Udayavani, Jun 12, 2022, 7:34 PM IST
ಪಣಜಿ : ಶುಕ್ರವಾರದ ಪ್ರಾರ್ಥನೆಯ ನಂತರ ಮತಾಂಧರು ನಡೆಸಿದ ಹಿಂಸಾಚಾರವನ್ನು ಗಮನಿಸಿದರೆ ಎಲ್ಲಿಯ ವರೆಗೆ ಇಡೀ ಆಡಳಿತ ವ್ಯವಸ್ಥೆಯು ಹಿಂದುಗಳ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲವೋ ಅಲ್ಲಿಯವರೆಗೆ ಹಿಂದೂ ರಾಷ್ಟ್ರಕ್ಕಾಗಿ ನಮಗೆ ಹೋರಾಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮೀತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಚಾರುದತ್ತ ಪಿಂಗಳೆ ಕರೆ ನೀಡಿದರು.
ಗೋವಾದ ಪೊಂಡಾದಲ್ಲಿರುವ ಶ್ರೀ ರಾಮನಾಥ ದೇವಸ್ಥಾನದಲ್ಲಿ ಆಯೋಜಿಸಿರುವ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಉಧ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ವಾರಣಾಸಿಯಲ್ಲಿರುವ ನಂದಿಯು ಇಂದಿಗೂ ಜ್ಞಾನವಾಪಿ ಮಸೀದಿಯತ್ತ ಮುಖ ಮಾಡಿ ಮೂಲ ವಿಧ್ವಂಸಗೊಂಡ ದೇವಸ್ಥಾನದ ಭಗ್ನಾವಶೇಷಗಳನ್ನು ನೋಡುತ್ತಿದೆ. ಕರ್ನಾಟಕದಲ್ಲಿ ಪಹಲೇ ಹಿಜಾಬ್ ಬಾದ್‍ಮೆ ಕಿತಾಬ್ ಎಂಬ ಅಭಿಯಾನವನ್ನು ಮೂಲಭೂತವಾಧಿಗಳು ವಿದ್ಯಾರ್ಥಿನಿಯರ ಮೂಲಕ ಆರಂಭಿಸಿದ್ದರು. ಅವರ ವಿರುದ್ಧ ಉಚ್ಛ ನ್ಯಾಯಾಲಯವು ತೀರ್ಪು ನೀಡಿದ ನಂತರವೂ ಹಿಜಾಬ್‍ಗಾಗಿ ಒತ್ತಾಯಿಸುವ ಮುಸ್ಲೀಮರಿಗೆ ಕುರಾನ್ ಶ್ರೇಷ್ಠವೇ ಅಥವಾ ದೇಶದ ಸಂವಿಧಾನ ಶ್ರೇಷ್ಠವೇ..? ಎಂದು ಪ್ರಶ್ನಿಸಲು ದೇಶದ ಯಾವುದೇ ಸೆಕ್ಯುಲರ್ ವಾಧಿಗಳಿಗೆ ಧೈರ್ಯವಾಗಲಿಲ್ಲ. ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುವುದು ಹೇಗೆ ಯೋಗ್ಯವಿದೆ..? ಇದು ನಮ್ಮ ನೈಸರ್ಗಿಕ ಮತ್ತು ಸಾಂವಿಧಾನಿಕ ಹಕ್ಕಾಗಿದೆ. ಪ್ರಸ್ತುತ ಭಾರತದಲ್ಲಿ ಸಕ್ರೀಯವಿರುವ ಹಿಂದೂ ವಿರೋಧಿ ಅಲಾಯನ್ಸನ ಹಿಂದೆ ರಾಜಕೀಯ ಸ್ವಾರ್ಥವಿದೆ.
ಈ ಅಜೇಂಡಾವು ಹಿಂದೂ ರಾಷ್ಟ್ರದ ಮುಂದಿರುವ ದೊಡ್ಡದೊಡ್ಡ ಸವಾಲಾಗಿದೆ. ಈ ಹಿಂದೂ ವಿರೋಧಿ ಅಲೈನ್ಸನ್ನು ಸೋಲಿಸಲು ಮುಂಬರುವ ಕಾಲದಲ್ಲಿ ನಾವು ಅದನ್ನು ವೈಜ್ಞಾನಿಕ ಮತ್ತು ಬೌಧ್ಧಿಕ ಮಟ್ಟದಲ್ಲಿ ನಿರಂತರವಾಗಿ ಖಂಡಿಸಲೇಬೇಕಾಯಿತು. ಆ ದೃಷ್ಠಿಯಿಂದ ಈ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಮಹತ್ವದ್ದಾಗಿದೆ.
ಕಾಲಮಹಾತ್ಮೆಗನುಸಾರವಾಗಿ 2025 ರಲ್ಲಿ ಹಿಂದೂ ರಾಷ್ಟ್ರ ಬಂದೇ ಬರುವುದು, ಅದಕ್ಕಾಗಿ ಹಿಂದೂಗಳು ಈಗಿನಿಂದಲೇ ಕೃತಿಶೀಲರಾಗಬೇಕು ಎಂದು ಸಧ್ಗುರು ಚಾರುದತ್ತ ಪಿಂಗಳೆ ಕರೆ ನೀಡಿದರು.
ಇದನ್ನೂ ಓದಿ : ಪಶ್ಚಿಮ ಬಂಗಾಳ: ಬಿಸಿಲ ಝಳದ ಪ್ರಕೋಪಕ್ಕೆ ಮೂವರು ಭಕ್ತರ ಸಾವು
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮೀತಿ ಪುರಸ್ಕತ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ “ಭಾರತೀಯ ಆರ್ಥಿಕತೆಯ ಮೇಲೆ ಹೊಸ ಧಾಳಿ-ಹಲಾಲ್ ಜಿಹಾದ್” ಗೃಂಥವನ್ನು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದ ಹಿಂದೂ ಫ್ರಂಟ್ ಫಾರ್ ಜಸ್ಟೀಸ್‍ನ ಡಾ.ಹರಿಶಂಕರ ಜೈನ್, ಭಾರತ ಸೇವಾಶ್ರಮ ಸಂಘದ ಸ್ವಾಮಿ ಸಂಯುಕ್ತಾನಂದ ಮಹಾರಾಜ್, ಇಂಟರ್ ನ್ಯಾಶನಲ್ ವೇದಾಂತ ಸೊಸೈಟಿಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜ್, ಸಮೀತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಚಾರುದತ್ತ ಪಿಂಗಳೆ ರವರ ಹಸ್ತದಿಂದ ಪ್ರಕಾಶಿಸಲಾಯಿತು.
ಶಂಖನಾದದಿಂದ ಹಿಂದೂ ಅಧಿವೇಶನವನ್ನು ಆರಂಭಿಸಲಾಯಿತು. ನಂತರ ವ್ಯಾಸಪೀಠದ ಮೇಲೆ ಉಪಸ್ಥಿತರಿದ್ದ ಗಣ್ಯರ ಶುಭ ಹಸ್ತದಿಂದ ದೀಪಪ್ರಜ್ವಲನೆ ಮಾಡಲಾಯಿತು. ದೀಪಪ್ರಜ್ವಲನೆಯ ನಂತರ ವೇದಮಂತ್ರ ಪಠಿಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಸಧ್ಗುರು ಸತ್ಯವಾನ್ ಕದಮ್ ರವರು ಸನಾತನ ಸಂಸ್ಥೆಯ ಸಂಸ್ಥಾಪಕ ಡಾ ಜಯಂತ ಆಠವಲೆ ರವರು ನೀಡಿದ ಸಂದೇಶವನ್ನು ಓದಲಾಯಿತು.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಶಾಧಿಕಾರಿ ಸ್ವಾಮಿ ಗೋವಿಂದದೇವಗಿರಿಜಿ ಮಹಾರಾಜರು “ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳುವುದು ಎಂದು ವೀಡಿಯೊ ಮೂಲಕ ನೀಡಿದ ಆಶೀರ್ವಚನವನ್ನು ತೋರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.