ಡೈನೊಸರ್ ಪಳೆಯುಳಿಕೆ ಪತ್ತೆ; 14.5 ಕೋಟಿ ವರ್ಷಗಳ ಹಿಂದೆ ಜೀವಂತವಾಗಿದ್ದ ದೈತ್ಯಜೀವಿಗಳು
ಕೈಗಳಲ್ಲಿ, ಕಾಲುಗಳಲ್ಲಿ ಹರಿತವಾದ ಪಂಜಗಳನ್ನು ಹೊಂದಿದ್ದ ಪ್ರಾಣಿಗಳು
Team Udayavani, Jun 13, 2022, 7:00 AM IST
ನವದೆಹಲಿ: ಜುರಾಸಿಕ್ ಪಾರ್ಕ್‌ನಂಥ ಸಿನಿಮಾ ಹಾಗೂ ಮುಂತಾದ ಬರಹಗಳನ್ನು ಓದಿ, ಡೈನೊಸರ್‌ಗಳ ಬಗ್ಗೆ ನಾವು ಕಲ್ಪಿಸಿಕೊಂಡಿರುವುದಕ್ಕಿಂತ ದೈತ್ಯವಾದ, ಅತಿ ಭಯಂಕರವಾದ ಡೈನೊಸಾರ್‌ಗಳು ಈ ಭೂಮಿಯಲ್ಲಿ ವಾಸವಾಗಿದ್ದವೆಂಬ ಕುತೂಹಲಕಾರಿ ವಿಚಾರವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಸುಮಾರು 14.5 ಕೋಟಿ ವರ್ಷಗಳ ಹಿಂದೆ, ದ್ವಿಪಾದಿಯಾಗಿ ಸಂಚರಿಸುತ್ತಿದ್ದ, ಕೈಗಳಲ್ಲಿ- ಕಾಲುಗಳಲ್ಲಿ ಅತಿ ಉದ್ದವಾಗಿರುವ, ಚಾಕುವಿನಷ್ಟು ಹರಿತವಾಗಿರುವಂಥ ಪಂಜಗಳನ್ನು ಇವು ಹೊಂದಿದ್ದವು ಎಂದು ಲೈವ್ ಸೈನ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.
ಜಪಾನ್‌ನ ಉತ್ತರ ಭಾಗದಲ್ಲಿರುವ ದ್ವೀಪವೊಂದರಲ್ಲಿರುವ ಹಕ್ಕಾಯ್‌ಡೊ ಎಂಬಲ್ಲಿನ ಸಮುದ್ರದ ದಂಡೆಯಲ್ಲಿರುವ ಕೆಸರಿನ ಆಳದಲ್ಲಿ ಈ ಜಾತಿಯ ಡೈನೊಸಾರ್‌ಗಳ ಪಳೆಯುಳಿಕೆಗಳು ಪತ್ತೆಯಾಗಿದ್ದು, ಅವುಗಳನ್ನು ಅಮೆರಿಕ ಹಾಗೂ ಜಪಾನ್‌ನ ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆಗೊಳಪಡಿಸಿದ್ದರು. ಆ ಸಂಶೋಧನೆಗಳಿಂದ ಈ ದೈತ್ಯ ಜೀವಿಗಳ ಬಗೆಗಿನ ವಿಚಾರಗಳು ಪತ್ತೆಯಾಗಿವೆ.
ಇವು ಸಸ್ಯಾಹಾರಿ ಪ್ರಾಣಿಗಳು
ಈ ಮಾದರಿಯ ಡೈನೊಸಾರ್‌ಗಳಿಗೆ “ಪರಾಲಿಥೆರಿಸೈನೋಸಾರಸ್ ಝೆಪಾನಿಕಸ್’ ಎಂದು ಹೆಸರಿಡಲಾಗಿದೆ. ಈ ಮಾದರಿಯ ಡೈನೊಸರ್‌ಗಳು ಥೆರಿಸೈನೋಸರಸ್ ಜಾತಿಗೆ ಸೇರಿದವು. ಈ ಮಾದರಿಯ ಡೈನೊಸಾರ್‌ಗಳು ಎರಡು ಕಾಲುಗಳಲ್ಲಿ ನಡೆಯುಂಥವು (ದ್ವಿಪಾದಿಗಳು), ಸಸ್ಯಾಹಾರ ಸೇವಿಸುವಂಥವು ಹಾಗೂ ಕಾಲುಗಳಲ್ಲಿ ಕೇವಲ ಮೂರು ಬೆರಳುಗಳನ್ನು ಹೊಂದಿರುವಂಥವಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.