ಗಡಿಯಲ್ಲಿನ ಉದ್ವಿಗ್ನತೆಗೆ ಭಾರತವೇ ನೇರ ಹೊಣೆ; ಚೀನದ ವಿದೇಶಾಂಗ ಸಚಿವ ಆರೋಪ
Team Udayavani, Jun 12, 2022, 9:07 PM IST
ಸಿಂಗಾಪುರ: ಭಾರತ ಮತ್ತು ಚೀನ ನಡುವಿನ ನೈಜ ಗಡಿ ರೇಖೆಯಲ್ಲಿ (ಎಲ್‌ಎಸಿ) ಗಡಿಯಲ್ಲಿ ಆಗಾಗ ಉಂಟಾಗುತ್ತಿರುವ ಶಾಂತಿ ಭಂಗದ ಪ್ರಕರಣಗಳಿಗೆ, ಅಲ್ಲಿ ಎದ್ದಿರುವ ಉದ್ವಿಗ್ನತೆಗೆ ಭಾರತವೇ ಕಾರಣ ಎಂದು ಚೀನದ ವಿದೇಶಾಂಗ ಸಚಿವ ವೀ ಫೆಂಘೆ ಆರೋಪಿಸಿದ್ದಾರೆ.
ಸಿಂಗಾಪುರದಲ್ಲಿ ಭಾನುವಾರ ನಡೆದ ಶಾಂಗ್ರಿ ಲಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಲ್‌ಎಸಿಯಲ್ಲಿ ಚೀನ ಸೈನಿಕರಿಂದ ಶಾಂತಿ ಭಂಗವಾಗುವ ನಿಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಭಾರತವೇ ನೇರ ಹೊಣೆ.
ಆಗಾಗ ಅಲ್ಲಿ ಆಗಿರುವ ಗಲಭೆಗಳಿಗೆ ಭಾರತವೇ ಕಾರಣ. ಘರ್ಷಣೆಗೆ ಪ್ರಚೋದನೆ ನೀಡಿದ್ದೇ ಭಾರತ ಎಂಬುದು ನಮಗೆ ತಿಳಿದುಬಂದಿದೆ. ಗಡಿಯಲ್ಲಿ ಭಾರತ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿದ್ದಲ್ಲದೆ, ಹೆಚ್ಚುವರಿ ಯೋಧರನ್ನು ಚೀನ ಗಡಿಯ ಕಡೆಗೆ ರವಾನಿಸಿದೆ. ಇಂಥ ಘಟನೆಗಳು ಘರ್ಷಣೆಗೆ ಪ್ರೇರಣೆ ನೀಡುತ್ತವೆ” ಎಂದಿದ್ದಾರೆ.
ಸಂವಾದದಲ್ಲಿ ಹಾಜರಿದ್ದ ಅಮೆರಿಕದ ಚಿಂತಕರ ಚಾವಡಿಯ ಸದಸ್ಯರಾದ ಡಾ. ತನ್ವಿ ಮದನ್, “ಎಲ್‌ಎಸಿಯಲ್ಲಿ 2 ವರ್ಷಗಳ ಹಿಂದೆ ಚೀನ ಸೈನಿಕರು ಶಾಂತಿ ಉಲ್ಲಂಘಿಸಿದ್ದರು. ಈಗಲೂ ಗಡಿಯಲ್ಲಿ ಅನಗತ್ಯವಾಗಿ ಚೀನ ತನ್ನ ಸೈನಿಕರನ್ನು ಹೆಚ್ಚುವರಿ ಸಂಖ್ಯೆಯಲ್ಲಿ ಜಮಾಯಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಸೇನೆಯನ್ನು ಜಮಾವಣೆ ಮಾಡುವಂತಾಗಿದೆ. ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಚೀನ ಯಾವ ಕ್ರಮ ಕೈಗೊಂಡಿದೆ” ಎಂಬ ಪ್ರಶ್ನೆಯನ್ನು ಕೇಳಿದಾಗ, ವೆಯ್ ಮೇಲಿನಂತೆ ಉತ್ತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.