ವಾರಾಂತ್ಯದ ಹಿನ್ನೆಲೆ: ಮಲ್ಪೆ ಬೀಚ್; ಮಳೆ ಇದ್ದರೂ ಜನಜಂಗುಳಿ
Team Udayavani, Jun 13, 2022, 12:17 AM IST
ಮಲ್ಪೆ : ವಾರಾಂತ್ಯದ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಮಳೆ ಬಂದರೂ ಮಲ್ಪೆ ಬೀಚ್‌ಗೆ ಪ್ರವಾಸಿಗರು ಆಗಮಿಸುತ್ತಿರುವುದು ಕಂಡು ಬಂದಿದೆ.
ಹೊರ ಜಿಲ್ಲೆಯ, ಹೆಚ್ಚಾಗಿ ಉತ್ತರ ಕರ್ನಾಟಕದ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬೀಚ್‌ಗೆ ಶನಿವಾರ ಮತ್ತು ರವಿವಾರ ಬೆಳಗ್ಗಿನಿಂದ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಪಾರ್ಕಿಂಗ್ ಏರಿಯಾ ಮತ್ತು ರಸ್ತೆ ಬದಿಯಲ್ಲಿ ವಾಹನಗಳ ಸಾಲು ಕಂಡು ಬಂದಿದೆ. ಮುಖ್ಯ ಬೀಚ್‌ನಲ್ಲಿ ಒಂದು ಕಿ.ಮೀ ಉದ್ದಕ್ಕೆ ನೆಟ್ ಅಳವಡಿಸಲಾಗಿದ್ದು, ಆಗಮಿಸಿದ ಜನರು ದೂರದಲ್ಲೇ ನಿಂತು ಸಮುದ್ರವನ್ನು ವೀಕ್ಷಿಸಿದರು. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧ ವಾಗಿರುವ ಹಿನ್ನೆಲೆ ಯಲ್ಲಿ ಪ್ರವಾಸಿಗರು ನೀರಿಗಿಳಿಯ ದಂತೆ 6 ಅಡಿ ಎತ್ತರಕ್ಕೆ ನೆಟ್ ಅಳ ವಡಿಸಲಾಗಿದೆ.
ನೀರಿಗಿಳಿದ ಪ್ರವಾಸಿಗರು
ಬೀಚ್‌ನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರವಾಸಿಗರು ಜೀವ ರಕ್ಷಕರ ಕಣ್ಣು ತಪ್ಪಿಸಿ ನೀರಿಗಿಳಿದು ಆಟವಾಡುತ್ತಿರುವುದು ಕಂಡು ಬಂದಿದೆ. ಮುಖ್ಯ ಬೀಚ್‌ನಲ್ಲಿ ನೆಟ್ ಅಳ ವಡಿಸಿದೆ ಎಂದು ಹೆಚ್ಚಿನ ಪ್ರವಾಸಿ ಗರು ಉತ್ತರ ದಿಕ್ಕು ತೊಟ್ಟಂ ಫುರ್ಟಾಡೋ ಗೆಸ್ಟ್ ಹೌಸ್ ಸಮೀಪ ಹಾಗೂ ದಕ್ಷಿಣ ಭಾಗದ ಕೊಳ ಹನುಮಾನ್ ನಗರದ ಸಮುದ್ರ ತೀರದಲ್ಲಿ ನೀರಿಗಿಳಿದು ಆಟವಾಡುತ್ತಿದ್ದರು. ಜೀವ ರಕ್ಷಕರು ನೀರಿಗಿಳಿದವರನ್ನು ಓಡಿಸುತ್ತಿದ್ದರೂ ಅವರು ಕ್ಯಾರೇ ಎನ್ನದೆ ಮತ್ತೊಂದು ಕಡೆಯಲ್ಲಿ ಪ್ರತ್ಯಕ್ಷ ವಾಗು ತ್ತಿದ್ದರು. ಪೊಲೀಸರ ಮಾತನ್ನು ಕೂಡ ಕೇಳುತ್ತಿರಲಿಲ್ಲ. ರವಿವಾರ ಬೆಳಗ್ಗಿನಿಂದ ಇಲ್ಲಿನ ಜೀವರಕ್ಷಕ ಸಿಬಂದಿಗೆ ಪ್ರವಾಸಿಗರನ್ನು ನೀರಿಗಿಳಿಯದಂತೆ ತಡೆಯುವುದೇ ಬಹುದೊಡ್ಡ ಸಾಹಸ ವಾಗಿತ್ತು.
ಬೀಚ್‌ನಲ್ಲಿ ಈಗ ಯಾವುದೇ ವಾಟರ್ ಸ್ಪೋರ್ಟ್ಸ್ ಇಲ್ಲ. ದೂರ ದಿಂದ ಬಂದ ಪ್ರವಾಸಿಗರು ಎಷ್ಟೇ ಎಚ್ಚರಿಕೆ ನೀಡಿದರೂ ಬೇರೆ ಭಾಗದಲ್ಲಿ ನೀರಿಗೆ ಇಳಿದು ಅಪಾಯವನ್ನು ತಂದುಕೊಳ್ಳುತ್ತಾರೆ. ಪ್ರಸ್ತುತ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದೆ ಎಂದು ಬೀಚ್ ನಿರ್ವಾಹಕರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಸೀವಾಕ್‌ನಲ್ಲೂ ಜನ ಮಲ್ಪೆ ಸೀವಾಕ್‌ನಲ್ಲೂ ಜನ ಸಂದಣಿ ಕಂಡು ಬಂದಿದೆ. ಮಳೆ ಇದ್ದರೂ ಇಲ್ಲಿನ ಉದ್ಯಾನವನದಲ್ಲೂ ಜನರು ವಿಹರಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.