ಇಂದಿನಿಂದ ರಣಜಿ ಸೆಮಿಫೈನಲ್ಸ್: ಮುಂಬಯಿ-ಯುಪಿ ಮಹಾ ಸಮರ
ಬಂಗಾಲ-ಮಧ್ಯಪ್ರದೇಶ ನಡುವೆ ಇನ್ನೊಂದು ಉಪಾಂತ್ಯ
Team Udayavani, Jun 14, 2022, 6:30 AM IST
ಬೆಂಗಳೂರು: ಬರೋಬ್ಬರಿ 41 ಸಲ ರಣಜಿ ಟ್ರೋಫಿಯನ್ನೆತ್ತಿದ ಮುಂಬಯಿ ಪ್ರಸಕ್ತ ದೇಶಿ ಕ್ರಿಕೆಟ್ ಸೀಸನ್‌ನಲ್ಲಿ ಮತ್ತೆ ನೆಚ್ಚಿನ ತಂಡವಾಗಿ ಮೂಡಿಬಂದಿದೆ. ಮಂಗಳವಾರದಿಂದ ಬೆಂಗಳೂರಿನಲ್ಲಿ ಮೊದಲ್ಗೊಳ್ಳಲಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಅದು ಉತ್ತರ ಪ್ರದೇಶವನ್ನು ಎದುರಿಸಲಿದ್ದು, ಮೇಲುಗೈ ನಿರೀಕ್ಷೆಯಲ್ಲಿದೆ.
ಇನ್ನೊಂದು ಸೆಮಿಫೈನಲ್ ಮುಖಾ ಮುಖೀ ಬಂಗಾಲ ಮತ್ತು ಮಧ್ಯಪ್ರದೇಶ ನಡುವೆ ನಡೆಯಲಿದೆ.
ಪೃಥ್ವಿ ಶಾ ನೇತೃತ್ವದ ಮುಂಬಯಿ ಕ್ವಾರ್ಟರ್ ಫೈನಲ್‌ನಲ್ಲಿ ದುರ್ಬಲ ಉತ್ತರಾಖಂಡ ವಿರುದ್ಧ 725 ರನ್ನುಗಳ ವಿಶ್ವದಾಖಲೆಯ ಗೆಲುವು ಸಾಧಿಸಿದ ಉತ್ಸಾಹದಲ್ಲಿದೆ. ಇನ್ನೊಂದು ಪಂದ್ಯ ದಲ್ಲಿ ಉತ್ತರ ಪ್ರದೇಶ ಆತಿಥೇಯ ಕರ್ನಾಟಕವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು. ಹೀಗಾಗಿ ಇಲ್ಲಿ ಯುಪಿ ಸಾಧನೆಯ ಮೌಲ್ಯ ಅಧಿಕ.
ಮುಂಬಯಿ ಬ್ಯಾಟಿಂಗ್ ಬಲಿಷ್ಠ
ಮುಂಬಯಿ ಬ್ಯಾಟಿಂಗ್ ಸರದಿ ಹೆಚ್ಚು ಬಲಿಷ್ಠ. ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್, ಸಫìರಾಜ್ ಖಾನ್, ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಸುವೇದ್ ಪಾರ್ಕರ್ ಅವರೆಲ್ಲ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅರ್ಮಾನ್ ಜಾಫರ್ ಮತ್ತೋರ್ವ ಪ್ರತಿಭಾನ್ವಿತ ಆಟಗಾರ. ಆದರೆ ಕೀಪರ್ ಆದಿತ್ಯ ತಾರೆ ಗಾಯಾಳಾಗಿ ಹೊರಬಿದ್ದಿರುವುದರಿಂದ ತಂಡಕ್ಕೆ ತುಸು ಹಿನ್ನಡೆಯಾಗಿದೆ.
ಮುಂಬಯಿಯ ಬೌಲಿಂಗ್ ಸರದಿ ಭಾರೀ ಘಾತಕವೇನಲ್ಲ. ಹಾಗೆಯೇ ಯುಪಿ ಬ್ಯಾಟಿಂಗ್ ಸರದಿ ಅಷ್ಟೇನೂ ಬಲಿಷ್ಠವಲ್ಲ. ಹೀಗಾಗಿ ಧವಳ್ ಕುಲಕರ್ಣಿ, ಶಮ್ಸ್ ಮುಲಾನಿ, ಮೋಹಿತ್ ಅವಸ್ತಿ, ತುಷಾರ್ ದೇಶ ಪಾಂಡೆ, ಯುವ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್ ಅವರೆಲ್ಲ ಸೇರಿ ಯುಪಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಬಹುದೆಂಬುದೊಂದು ನಿರೀಕ್ಷೆ.
ಯುಪಿ ನಾಯಕ ಕರಣ್ ಶರ್ಮ ಅವರ ಬ್ಯಾಟಿಂಗನ್ನು ಹೆಚ್ಚು ಅವಲಂಬಿ ಸಿದೆ. ಕರ್ನಾಟಕ ವಿರುದ್ಧದ ಚೇಸಿಂಗ್‌ನಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಪ್ರಿಯಂ ಗರ್ಗ್, ರಿಂಕು ಸಿಂಗ್ ಮತ್ತಿಬ್ಬರು ಭರವಸೆಯ ಬ್ಯಾಟರ್. ಆರ್ಯನ್ ಜುವಲ್, ಸಮರ್ಥ್ ಸಿಂಗ್, ಧ್ರುವ್ ಜೊರೆಲ್ ಅವರೆಲ್ಲ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಐಪಿಎಲ್‌ನಲ್ಲಿ ಮಿಂಚಿದ ಪೇಸ್ ಬೌಲರ್ ಮೊಹ್ಸಿನ್ ಖಾನ್ ಸೇರ್ಪಡೆಯಿಂದ ಯುಪಿ ಬೌಲಿಂಗ್ ಹೆಚ್ಚು ಬಲಿಷ್ಠಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.