ಸತತ 10 ತಾಸು ರಾಹುಲ್‌ ವಿಚಾರಣೆ: ಇ.ಡಿ. ಕ್ರಮ ಖಂಡಿಸಿ ದೇಶವ್ಯಾಪಿ ಕಾಂಗ್ರೆಸ್‌ ಪ್ರತಿಭಟನೆ

Team Udayavani, Jun 14, 2022, 1:05 AM IST

ಸತತ 10 ತಾಸು ರಾಹುಲ್‌ ವಿಚಾರಣೆ: ಇ.ಡಿ. ಕ್ರಮ ಖಂಡಿಸಿ ದೇಶವ್ಯಾಪಿ ಕಾಂಗ್ರೆಸ್‌ ಪ್ರತಿಭಟನೆ

ಹೊಸದಿಲ್ಲಿ/ಬೆಂಗಳೂರು: ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ವು ಸೋಮವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿತು. ದೇಶಾದ್ಯಂತ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಪ್ರತಿಭಟನೆ, ಹೈಡ್ರಾಮಾಗಳ ನಡುವೆಯೇ ಸುಮಾರು 10 ತಾಸುಗಳ ಕಾಲ ರಾಹುಲ್‌ ವಿಚಾರಣೆ ನಡೆಯಿತು.

ಬೆಳಗ್ಗೆ ಸುಮಾರು 11.10ರ ವೇಳೆಗೆ ಇ.ಡಿ. ಕಚೇರಿ ತಲುಪಿದ ರಾಹುಲ್‌ ಗಾಂಧಿ ಅವರನ್ನು ಅಪರಾಹ್ನ 2.10ರ ವರೆಗೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಅನಂತರ ಊಟದ ವಿರಾಮದ ವೇಳೆ ಸರ್‌ ಗಂಗಾರಾಂ ಆಸ್ಪತ್ರೆಗೆ ತೆರಳಿದ ರಾಹುಲ್‌ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಸೋನಿಯಾ ಗಾಂಧಿ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಸುಮಾರು 3.30ರ ವೇಳೆಗೆ ಮತ್ತೆ ವಿಚಾರಣೆಗೆ ಹಾಜರಾದರು. ಹಣಕಾಸು ಅವ್ಯವಹಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 50ರಡಿ ರಾಹುಲ್‌ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಸೋಮವಾರ ಇಡೀ ದಿನ ನಡೆದ ವಿಚಾರಣೆ ರಾತ್ರಿ 9ರ ವೇಳೆಗೆ ಮುಕ್ತಾಯವಾಯಿತು.

ಇದೇ ವೇಳೆ ಮಂಗಳವಾರವೂ ರಾಹುಲ್‌ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚಿ ಸಿದೆ. ಕೆಲವು ಪ್ರಶ್ನೆಗಳು ಕೇಳಲು ಬಾಕಿಯಿರುವ ಕಾರಣ ವಿಚಾರಣೆ ಮುಂದುವರಿಸಲು ನಿರ್ಧರಿಸಲಾಗಿದೆ.

ಹಿರಿಯ ನಾಯಕರು ಸಾಥ್‌
ಇದಕ್ಕೆ ಮುನ್ನ ಬೆಳಗ್ಗೆ ದಿಲ್ಲಿಯ ಅಕºರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಚೇರಿಯಿಂದ ಇ.ಡಿ. ಕಚೇರಿಯತ್ತ ಸಾಗುವಾಗ ರಾಹುಲ್‌ಗೆ ಪಕ್ಷದ ಪ್ರಮುಖ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಸಿಎಂ ಅಶೋಕ್‌ , ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಸಾಥ್‌ ನೀಡಿದರು. ಕಾಂಗ್ರೆಸ್‌ ಕಾರ್ಯಕರ್ತರು ಮುತ್ತಿಗೆ ಹಾಕದಂತೆ ನಿರ್ಬಂಧಿಸುವ ಸಲುವಾಗಿ ಇ.ಡಿ. ಕಚೇರಿಗೆ ತೆರಳುವ ಮಾರ್ಗದಲ್ಲಿ ದಿಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು, ನಿಷೇಧಾಜ್ಞೆ ಜಾರಿ ಮಾಡಿದ್ದರು. ಆರ್‌ಎಎಫ್, ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಕಾಂಗ್ರೆಸ್‌ ಶಕ್ತಿಪ್ರದರ್ಶನ
ರಾಹುಲ್‌ ಇ.ಡಿ. ಕಚೇರಿಗೆ ಹಾಜರಾಗುತ್ತಿದ್ದಂತೆ ದೇಶಾದ್ಯಂತ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದರು. ಬೆಂಗಳೂರು, ರಾಂಚಿ, ಮುಂಬಯಿ, ಶಿಮ್ಲಾ, ಇಟಾನಗರ, ರೋಹrಕ್‌, ಜೈಪುರ, ಗುವಾಹಟಿ, ಅಹ್ಮದಾಬಾದ್‌ ಸಹಿತ ದೇಶದ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲೂ ಕಾಂಗ್ರೆಸ್‌ ಶಕ್ತಿಪ್ರದರ್ಶನ ಮಾಡಿದೆ. ಹಲವೆಡೆ ಪ್ರತಿಭಟನಕಾರರನ್ನು ವಶಕ್ಕೆ ಪಡೆದು, ಅನಂತರ ಬಿಡುಗಡೆ ಮಾಡಲಾಗಿದೆ. ದಿಲ್ಲಿಯಲ್ಲಿ ಪ್ರತಿಭಟನನಿರತರಾಗಿದ್ದ ಹಿರಿಯ ನಾಯಕ ಚಿದಂಬರಂ ಅವರನ್ನು ಪೊಲೀಸರು ತಳ್ಳಿದ ಪರಿಣಾಮ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದೆ.

ದಿನದ ಬೆಳವಣಿಗೆ
01 ಬೆಳಗ್ಗೆ ದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಗೆ ರಾಹುಲ್‌ ಆಗಮನ
02 ಪಕ್ಷದ ಹಿರಿಯ ನಾಯಕರೊಂದಿಗೆ ಇ.ಡಿ. ಕಚೇರಿ ಕಡೆಗೆ ಪಯಣ
0311.10ರ ವೇಳೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರು
04 ಅಪರಾಹ್ನ 2.10ರ ವರೆಗೆ ಇ.ಡಿ. ಅಧಿಕಾರಿಗಳಿಂದ ವಿಚಾರಣೆ
05 ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ; ಹಲವರು ಪೊಲೀಸರ ವಶಕ್ಕೆ
06ಊಟದ ವಿರಾಮದ ವೇಳೆ ಸೋನಿಯಾ ಆರೋಗ್ಯ ವಿಚಾರಿಸಿದ ರಾಹುಲ್‌
07 ಅಪರಾಹ್ನ 3.30ರಿಂದ ರಾತ್ರಿ 9ರ ವರೆಗೆ ಮತ್ತೆ ವಿಚಾರಣೆಗೆ ಹಾಜರು

ಏನೇನು ಪ್ರಶ್ನೆ?
ಪ್ರಕರಣದ ತನಿಖಾಧಿಕಾರಿಯಾದ ಇ.ಡಿ.ಯ ಸಹಾಯಕ ನಿರ್ದೇಶಕ ಮಟ್ಟದ ಅಧಿಕಾರಿಯು ರಾಹುಲ್‌ಗೆ ನ್ಯಾಶನಲ್‌ ಹೆರಾಲ್ಡ್‌ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಹಾಕಿರುವ ಸಾಧ್ಯತೆಯಿದೆ. ಯಂಗ್‌ ಇಂಡಿಯನ್‌ ಕಂಪೆನಿಯ ಸ್ಥಾಪನೆ, ನ್ಯಾಶನಲ್‌ ಹೆರಾಲ್ಡ್‌ ಕಾರ್ಯಾಚರಣೆ, ಅಸೋಸಿಯೇಟೆಡ್‌ ಜರ್ನಲ್ಸ್‌ ಲಿ. (ಎಜೆಎಲ್‌)ಗೆ
ಕಾಂಗ್ರೆಸ್‌ ಪಕ್ಷ ಕೊಟ್ಟಿರುವ ಸಾಲದ ಮೊತ್ತ, ಸುದ್ದಿ ಮಾಧ್ಯಮದೊಳಗಿನ ಹಣಕಾಸು ವರ್ಗಾವಣೆ ಸೇರಿದಂತೆ ಸರಣಿ ಪ್ರಶ್ನೆಗಳನ್ನು ಕೇಳಿರಬಹುದು ಎಂದು ಮೂಲಗಳು ತಿಳಿಸಿವೆ. ಜೂ. 23ರಂದು ಜಾರಿ ನಿರ್ದೇಶನಾಲಯವು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ವಿಚಾರಣೆಗೆ ಒಳಪಡಿಸಲಿದೆ.

ಟಾಪ್ ನ್ಯೂಸ್

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

koo

Koo: ದಿನಂಪ್ರತಿ ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು, ಸಾಮಾಜಿಕ ಮಾಧ್ಯಮ ಕೂ ಆ್ಯಪ್ ಸ್ಥಗಿತ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

10

ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ

1-PTI

Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

1-a-baaba

Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 121ಕ್ಕೆ

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

1-sadsad

Italy; ಕೈ ತುಂಡಾದ ಭಾರತೀಯ ಕಾರ್ಮಿಕನನ್ನು ರಸ್ತೆಗೆ ಎಸೆದ ಮಾಲಕ ಅರೆಸ್ಟ್

koo

Koo: ದಿನಂಪ್ರತಿ ‘ಕೂ’ ಹೇಳುತ್ತಿದ್ದ ಹಕ್ಕಿ ಮೌನವಾಯಿತು, ಸಾಮಾಜಿಕ ಮಾಧ್ಯಮ ಕೂ ಆ್ಯಪ್ ಸ್ಥಗಿತ

1-mofdd

NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

SSMB29:‌ ರಾಜಮೌಳಿ – ಮಹೇಶ್‌ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್

1-mangaluru

Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.