![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 14, 2022, 12:16 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ವಿವಿಧ ಸರಕಾರಿ ಶಾಲೆಗಳ ಕಟ್ಟಡಗಳ ದುರಸ್ತಿ, ಸೌಲಭ್ಯಗಳ ನೀಡುವುದು ಅಗತ್ಯವಿದ್ದು, ಇದರ ಭಾಗವಾಗಿ ಮೊದಲ ಹಂತದಲ್ಲಿ ಸುಮಾರು 16 ಸರಕಾರಿ ಶಾಲೆಗಳ ದುರಸ್ತಿ, ಅಭಿವೃದ್ಧಿಗೆ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ 74ಲಕ್ಷ ರೂ.ಗಳ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶಾಲೆಗಳು ಅನುದಾನದ ನಿರೀಕ್ಷೆಯಲ್ಲಿವೆ.
ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಅನೇಕ ಸರಕಾರಿ ಶಾಲೆಗಳ ಕಟ್ಟಡಗಳಲ್ಲಿ ವಿವಿಧ ದುರಸ್ತಿ, ಅಭಿವೃದ್ಧಿ ಕಾಮಗಾರಿ ಅಗತ್ಯವಿದೆ. ಬೇಸಿಗೆ ರಜೆಯಲ್ಲಿಯೇ ಇದನ್ನು ಕೈಗೊಳ್ಳಬೇಕಿತ್ತಾದರೂ ಇದೀಗ ಶಾಲೆ ಆರಂಭವಾದ ಮೇಲೆ ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿದೆ. ಹಳೇ ಕಟ್ಟಡ, ಮಳೆಯಿಂದಾಗಿ ಶಾಲಾ ಕಟ್ಟಡಗಳಲ್ಲಿ ಕೆಲವೊಂದು ಕೋಣೆಗಳ ಮೇಲ್ಛಾವಣಿ, ಹೊರಗೋಡೆ, ಬಣ್ಣ ಹಚ್ಚುವುದು ಇತ್ಯಾದಿ ಕಾಮಗಾರಿ ಕೈಗೊಳ್ಳಬೇಕಾಗಿದೆ.
ಶಾಲೆಗಳ ದುರಸ್ತಿ ಏನು?: ನಗರದ 16 ಶಾಲೆಗಳಲ್ಲಿ ಆನಂದ ನಗರ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ 3 ಕೊಠಡಿಗಳಲ್ಲಿ ಸಜ್ಜಾ ರಿಪೇರಿ, ಮೇಲ್ಛಾವಣಿ ಸೋರಿಕೆ, ಶೀಟ್ ಹೊದಿಸುವುದು, ಬಣ್ಣ ಹಚ್ಚುವುದು ಇದಕ್ಕಾಗಿ 3 ಲಕ್ಷ ರೂ.ಗಳು, ವಿಶ್ವೇಶ್ವರನಗರ ಸರಕಾರಿ ಪ್ರೌಢಶಾಲೆ 2 ಕೊಠಡಿಗಳಲ್ಲಿ ಮೇಲ್ಛಾವಣಿ ಸೋರಿಕೆ ಹಾಗೂ ಶಾಲಾ ಕಾಂಪೌಂಡ್ ಕುಸಿದಿರುವುದು ಕಾಮಗಾರಿಗೆ 10 ಲಕ್ಷ ರೂ.ಗಳು.
ನೇಕಾರ ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿಗಳಲ್ಲಿ ಮೇಲ್ಛಾವಣಿ ಗೋಡೆ ರಿಪೇರಿ ಹಾಗೂ ಕಾಂಪೌಂಡ್ ದುರಸ್ತಿ ಕಾಮಗಾರಿಗೆ 6 ಲಕ್ಷ ರೂ.ಗಳು, ಗಾಂಧಿ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ ಹಾಗೂ ಕಾಂಪೌಂಡ್ ದುರಸ್ತಿ ಕಾಮಗಾರಿಗೆ 5 ಲಕ್ಷ ರೂ.ಗಳು, ರಾಜಧಾನಿ ಕಾಲೋನಿ ಕೆಎಸ್‌ಆರ್‌ಟಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ, ಗೋಡೆ ಒಳಾಂಗಣ ಹಾಗೂ ಹೊರಾಂಗಣದಲ್ಲಿ ನೀರು ಸೋರುವಿಕೆ ಆಗುತ್ತಿರುವುದು ಅದಕ್ಕಾಗಿ 8ಲಕ್ಷ ರೂ. ಗಳು.
ಹಳೇಹುಬ್ಬಳ್ಳಿ ಚೆನ್ನಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ನಂ.20ರಲ್ಲಿ 3 ಕೊಠಡಿಗಳಲ್ಲಿ ಮೇಲ್ಛಾವಣಿ ಗೋಡೆ ರಿಪೇರಿ ಹಾಗೂ ನೆಲಹಾಸು ದುರಸ್ತಿ ಕಾರ್ಯಕ್ಕೆ 4 ಲಕ್ಷ ರೂ.ಗಳು, ವೀರಾಪುರ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-4ರ 6 ಕೊಠಡಿಗಳಿಗೆ ಮೇಲ್ಛಾವಣಿ ಗೋಡೆ ರಿಪೇರಿ ಶೀಟ್ ಹೊದಿಸುವುದು ಕಾಮಗಾರಿಗೆ 4 ಲಕ್ಷ ರೂ.ಗಳು, ಅಕ್ಕಿಹೊಂಡ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ ನಂ-3ರ 2 ಕೊಠಡಿಗಳಲ್ಲಿ ಮೇಲ್ಛಾವಣಿ ರಿಪೇರಿ ಕಾಮಗಾರಿಗೆ 4 ಲಕ್ಷ ರೂ.ಗಳು, ಯಲ್ಲಾಪುರ ಓಣಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ-3ರ 4 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ, ಶೀಟ್ ಹೊದಿಸುವುದು, ಬಾಗಿಲು, ಕಿಟಕಿ ಕಾಮಗಾರಿಗೆ 6 ಲಕ್ಷ ರೂ.ಗಳು.
ಶಿವಶಂಕರ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿ ನೆಲಹಾಸು ಕುಸಿಯುತ್ತಿರುವುದರ ಕಾಮಗಾರಿಗೆ 2 ಲಕ್ಷ ರೂ.ಗಳು, ಶಿರಡಿ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಮೇಲ್ಛಾವಣಿ ದುರಸ್ತಿ, ಶೌಚಾಲಯ ದುರಸ್ತಿ ಕಾಮಗಾರಿಗೆ 4ಲಕ್ಷ ರೂ.ಗಳು, ಛಬ್ಬಿ ಪ್ಲಾಟ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ 3 ಕೊಠಡಿಗಳ ವರಾಂಡ ಮತ್ತು ಕೊಠಡಿ ಮೇಲ್ಛಾವಣಿ, ಕಿಟಕಿ ಬಾಗಿಲು ಕಾಮಗಾರಿಗೆ 3ಲಕ್ಷ ರೂ. ಗಳು, ಆನಂದನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ ಶೌಚಾಲಯ ದುರಸ್ತಿ ಹಾಗೂ ಬಣ್ಣ ಹಚ್ಚುವುದು ಅದಕ್ಕಾಗಿ 5 ಲಕ್ಷ ರೂ.ಗಳು.
ಯಲ್ಲಾಪುರ ಓಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-18ರಲ್ಲಿ 3 ಕೊಠಡಿಗಳ ಮೇಲ್ಛಾವಣಿ ಗೋಡೆ ದುರಸ್ತಿ ಕಾಮಗಾರಿಗೆ 3 ಲಕ್ಷ ರೂ.ಗಳು, ಸದಾಶಿವ ನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿಗೆ 2 ಲಕ್ಷ ರೂ., ಎಸ್ ಆರ್‌ಪಿ ಕೇಂದ್ರ 3 ಕೊಠಡಿಗಳ ಮೇಲ್ಛಾವಣಿ ಗೋಡೆ ರಿಪೇರಿ ಕಾಮಗಾರಿಗೆ 5 ಲಕ್ಷ ರೂ.ಗಳು ಹೀಗೆ ಒಟ್ಟು 74 ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡುವಂತೆ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಬೇಡಿಕೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ನಂತರ ಕಾಮಗಾರಿ ಆರಂಭಿಸಲು ಇಲಾಖೆ ಸಿದ್ಧತೆ ನಡೆಸಿದೆ. ನಗರದಲ್ಲಿ ಹಲವು ಶಾಲೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಸಬೇಕಿದ್ದು, ಹಂತ ಹಂತವಾಗಿ ಕೈಗೆತ್ತಿಕೊಳ್ಳಬೇಕಿದೆ. ಅದಕ್ಕಾಗಿ ಮೊದಲನೇ ಹಂತದಲ್ಲಿ 16 ಶಾಲೆಗಳನ್ನು ಗುರುತಿಸಲಾಗಿದ್ದು, ಸರಕಾರದಿಂದ ಅನುದಾನ ಬಿಡುಗಡೆ ನಂತರ ಕಾಮಗಾರಿ ಆರಂಭಗೊಳ್ಳಬೇಕಿದ್ದು, ಅದಕ್ಕಾಗಿ ಕ್ಷೇತ್ರ ಶಿಕ್ಷಣ ಕಾರ್ಯಾಲಯ ಕಾಯುತ್ತಿದೆ.
ಮೊದಲ ಹಂತದಲ್ಲಿ ಸುಮಾರು 16 ಶಾಲೆಗಳನ್ನು ಗುರುತಿಸಲಾಗಿದ್ದು, ಆದ್ಯತೆ ಮೇರೆಗೆ 2ನೇ ಹಂತದಲ್ಲಿ ಇನ್ನುಳಿದ ಶಾಲೆಗಳ ಕಾಮಗಾರಿಗೆ ಬೇಡಿಕೆ ಸಲ್ಲಿಸಲಾಗುವುದು. ಸದ್ಯ 16 ಶಾಲೆಗಳಿಗಾಗಿ 74 ಲಕ್ಷ ರೂ. ಗಳ ಅನುದಾನ ಬಿಡುಗಡೆಗೆ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದು, ಇಲಾಖೆ ಅನುದಾನ ಬಿಡುಗಡೆ ಮಾಡಿದ ನಂತರ ಕಾಮಗಾರಿ ಆರಂಭಿಸಲಾಗುವುದು. –ಎಂ.ಎಸ್.ಶಿವಳ್ಳಿಮಠ, ಪ್ರಭಾರ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ
ಬಸವರಾಜ ಹೂಗಾರ
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.