ಡ್ರೈವಿಂಗ್ ಲೈಸೆನ್ಸ್‌ಗೆ ಪಾರದರ್ಶಕ ವ್ಯವಸ್ಥೆ ಶೀಘ್ರ
ಆರ್‌ಟಿಒ ಕಚೇರಿ ಆವರಣದಲ್ಲಿ 8.35 ಕೋಟಿ ವೆಚದಲ್ಲಿ ಸಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಾಣ
Team Udayavani, Jun 15, 2022, 4:54 PM IST
ಹಾವೇರಿ: ವಾಹನ ಚಾಲನೆ ಮಾಡಲು ಬರದಿದ್ದರೂ ಏಜೆಂಟರು ಅಥವಾ ಅಧಿಕಾರಿಗಳನ್ನು ಹಿಡಿದುಕೊಂಡು ಡ್ರೈವಿಂಗ್ ಲೈಸನ್ಸ್ ಪಡೆಯಲು ಇನ್ನು ಮುಂದೆ ಸಾಧ್ಯವಿಲ್ಲ. ಡ್ರೈವಿಂಗ್ ಲೈಸೆನ್ಸ್‌ಗಾಗಿ ನಗರದಲ್ಲಿ ಸ್ವಯಂಚಾಲಿತ ವಾಹನ ಚಾಲನಾ ಡ್ರೈವಿಂಗ್ ಪಥ ನಿರ್ಮಾಣಗೊಳ್ಳುತ್ತಿದ್ದು, ಪಾರದರ್ಶಕ ವ್ಯವಸ್ಥೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ.
ಇತ್ತೀಚಿನ ದಿನಗಳಲ್ಲಿ ಹಲವು ಇಲಾಖೆಗಳು ಗಣಕೀಕೃತಗೊಳ್ಳುತ್ತಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಜನಸಾಮಾನ್ಯರಿಗೆ ತ್ವರಿತವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಅಗತ್ಯ ದಾಖಲೆಗಳು ಸಿಗುತ್ತಿವೆ. ಅದೇ ರೀತಿ, ಪ್ರಾದೇಶಿಕ ಸಾರಿಗೆ ಇಲಾಖೆ ಕೂಡ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಸ್ವಯಂಚಾಲಿತ ಪರೀಕ್ಷಾ ಪಥ ಮಾನವನ ಹಸ್ತಕ್ಷೇಪವಿಲ್ಲದೇ ಪ್ರಾಮಾಣಿಕವಾಗಿ ನಡೆಯುವ ವ್ಯವಸ್ಥೆಯಾಗಿದ್ದು, ಅಭ್ಯರ್ಥಿ ವಾಹನ ಚಾಲನೆಯಲ್ಲಿ ಸಮರ್ಥನಾಗಿದ್ದರೆ ಮಾತ್ರ ಆತನನ್ನು ಅರ್ಹನೆಂದು ಗುರುತಿಸುತ್ತದೆ. ಚಾಲನಾ ಪರೀಕ್ಷೆಯ ಪ್ರತಿಯೊಂದು ವಿವರವೂ ಕಂಪ್ಯೂಟರ್‌ನಲ್ಲಿ ವಿಡಿಯೋ ಸಹಿತ ದಾಖಲಾಗುತ್ತದೆ. ರಾಜ್ಯದ ಮಹಾನಗರಗಳಲ್ಲಿ ಜಾರಿಗೆ ಬಂದಿರುವ ಈ ವ್ಯವಸ್ಥೆ ಇಲ್ಲಿಯೂ ಶೀಘ್ರದಲ್ಲಿ ಶುರುವಾಗಲಿದೆ. ವಾಹನ ಸವಾರರ ಚಾಲನಾ ಸಾಮರ್ಥ್ಯವನ್ನು ಹೊಸ ತಂತ್ರಜ್ಞಾನದಿಂದ ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ. ಸಣ್ಣ ಪುಟ್ಟ ದೋಷಗಳಿದ್ದರೂ, ಈ ಹಿಂದೆ ಮ್ಯಾನುವಲ್ ಪದ್ಧತಿಯಲ್ಲಿ ಅಧಿಕಾರಿಗಳ ಶಿಫಾರಸ್ಸು ಮತ್ತು ಲಂಚದ ಕಾರಣದಿಂದ ಚಾಲನಾ ಪರವಾನಗಿ ಸಿಗುತ್ತಿತ್ತು. ಇಂಥ ಅಕ್ರಮ ಚಟುವಟಿಕೆಗಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ.
8.35 ಕೋಟಿ ರೂ. ವೆಚ್ಚ: ನಗರದ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ)ಆವರಣದಲ್ಲಿ 5. 26ಎಕರೆ ಜಾಗದಲ್ಲಿ 8.35 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ವಾಹನ ಚಾಲನಾ ಪಥದ ಕಾಮಗಾರಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. 3.11 ಎಕರೆಯಲ್ಲಿ ದ್ವಿಚಕ್ರ ವಾಹನ ಮತ್ತು ಲಘು ವಾಹನ ಚಾಲನಾ ಪಥ ನಿರ್ಮಾಣವಾಗುತ್ತಿದ್ದು, 2.15 ಎಕರೆಯಲ್ಲಿ ಭಾರೀ ವಾಹನ ಚಾಲನಾ ಪಥ ನಿರ್ಮಾಣಗೊಳ್ಳುತ್ತಿದೆ. ಚಾಲನಾ ಪಥಗಳ ನಿರ್ಮಾಣ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. 8 ಅಂಕಿಯ ಆಕಾರದಲ್ಲಿ ಪರೀûಾ ಪಥ ನಿರ್ಮಾಣವಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ. ಆ ಗಡುವಿನೊಳಗಾಗಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಭರದಿಂದ ಸಾಗಿದೆ.
ಸರಿಯಾಗಿ ವಾಹನ ಚಲಾಯಿಸಿದರೆ ಲೈಸೆನ್ಸ್: ಡಿಎಲ್ ಪಡೆಯಬೇಕಾದವರು ಇನ್ನು ಮುಂದೆ ಈ ಪರೀಕ್ಷಾ ಪಥದಲ್ಲಿ ವಾಹನ ಚಲಾಯಿಸಬೇಕು. ನಿಗದಿತ ಸಮಯದಲ್ಲಿ ಅಂಕು ಡೊಂಕು, ಏರು, ತಗ್ಗು ಇರುವ ಪರೀಕ್ಷಾ ಪಥದಲ್ಲಿ ವಾಹನಗಳನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಸಮರ್ಪಕವಾಗಿ ಓಡಿಸಬೇಕು. ಜತೆಗೆ ಸೂಚಿಸಿದ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಏರಿನಲ್ಲಿ ವಾಹನ ಬಂದ್ ಆಗದಂತೆ ಚಲಾಯಿಸಬೇಕು.
ಪಥದಲ್ಲಿರುವ ಪೋಲ್‌ಗಳನ್ನು ಅಭ್ಯರ್ಥಿಗಳು ಹೆಚ್ಚು ಬೀಳಿಸಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಸಾಧ್ಯತೆ ಇರುತ್ತದೆ. ಈ ಮೊದಲೆಲ್ಲ ಡಿಎಲ್ ಬೇಕಿದ್ದವರು ವಾಹನ ತರಬೇತಿ ಶಾಲೆಗೆ ಸೇರಿ ನಾಲ್ಕಾರು ದಿನ ವಾಹನ ಓಡಿಸಿ ನಂತರ ಏಜೆಂಟರ ನೆರವಿನಲ್ಲಿ ಪರವಾನಗಿ ಪಡೆಯುತ್ತಿದ್ದರು. ಇನ್ನು ಮುಂದೆ ಸರಿಯಾಗಿ ವಾಹನ ಓಡಿಸಿದರೆ ಮಾತ್ರ ಲೈಸನ್ಸ್ ಸಿಗಲಿದೆ. ಇದು ಅಪಘಾತ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಅಲ್ಲದೇ, ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ.
ಸಾರಿಗೆ ಇಲಾಖೆಯಲ್ಲಿ ಈಗಾಗಲೇ ಹಲವು ಸೇವೆಗಳನ್ನು ಆನ್‌ಲೈನ್ ಮಾಡಲಾಗಿದೆ. ಆನ್‌ಲೈನ್ ಮೂಲಕವೇ ಎಲ್‌ಎಲ್‌ಆರ್ ಪಡೆಯಬಹುದು. ಇನ್ನು ಮುಂದೆ ಸ್ವಯಂಚಾಲಿತ ಪರೀಕ್ಷಾ ವ್ಯವಸ್ಥೆ ಆರಂಭವಾಗಲಿದೆ. ಚಾಲನೆಯಲ್ಲಿ ಪರಿಪೂರ್ಣತೆ ಇದ್ದರೆ ಮಾತ್ರ ಡಿಎಲ್ ಸಿಗಲಿದೆ. ಡಿಸೆಂಬರ್ ವೇಳೆಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ. ವಸೀಂಬಾಬಾ ಮುದ್ದೇಬಿಹಾಳ, ಆರ್‌ಟಿಒ, ಹಾವೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.