![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 16, 2022, 2:52 PM IST
ಅಫಜಲಪುರ: ಕಳೆದ ನಾಲ್ಕೈದು ವರ್ಷಗಳ ದಾಖಲಾತಿ ಪರಿಶೀಲಿಸಿದಾಗ ಸರ್ಕಾರಿ ಕಾಲೇಜಿನ ಬೆಳವಣಿಗೆ ಬಹಳಷ್ಟು ಖುಷಿ ತಂದಿದ್ದು, ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೌಚಾಲಯ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅದ್ಯಕ್ಷ ಟಿ.ಎಂ ವಿಜಯಭಾಸ್ಕರ್ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನ ಪರಿಸರ ಉತ್ತಮವಾಗಿದೆ, ದಾಖಲಾತಿಯಲ್ಲಿ ಗಣನೀಯ ಏರಿಕೆಯಾಗಿದೆ, ಅದರಂತೆ ಫಲಿತಾಂಶವು ಚೆನ್ನಾಗಿ ಬಂದಿದೆ. ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿ, ಗುಣಮಟ್ಟದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಪ್ರಭಾರಿ ಪ್ರಾಚಾರ್ಯ ಡಾ| ಸಂತೋಷ ಹುಗ್ಗಿ ಮಾತನಾಡಿ, ಕಾಲೇಜು ಪಟ್ಟಣದಿಂದ 1.5ಕಿ. ಮೀ ದೂರವಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಬಸ್ಸಿನ ಸೌಕರ್ಯ ಕಲ್ಪಿಸಬೇಕು. ಕಾಲೇಜಿನ ಆವರಣದಲ್ಲಿ ಕ್ಯಾಂಟಿನ್ ವ್ಯವಸ್ಥೆ ಮಾಡಬೇಕು. ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರದಿಂದ ಮಂಜೂರಾದ ಲ್ಯಾಬ್‌ಗಳ ನಿರ್ವಹಣೆಗಾಗಿ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಿದರೆ ಸರ್ಕಾರದಿಂದ ಬಂದ ಕಂಪ್ಯೂಟರ್ ಗಳು ವಿದ್ಯಾರ್ಥಿಗಳ ಕಲಿಕೆಗೆ ಉಪಯುಕ್ತವಾಗಲಿವೆ ಎಂದರು.
ಕರ್ಜಗಿ ಪದವಿ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ ಅವಟೆ ಮಾತನಾಡಿ, ತಾವು ಅಫಜಲಪುರ ಪದವಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಅವ ಧಿಯಲ್ಲಿ ಸಾಕಷ್ಟು ಗಮನಾರ್ಹ ಬದಲಾವಣೆ ಮಾಡಿದ್ದೆವು. ಲ್ಯಾಬ್, ಸಭಾ ಭವನ ಮಂಜೂರು ಮಾಡಿಸಲಾಗಿತ್ತು. ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಪರಿಣಾಮ ಈಗ ಅತಿ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯುವಂತಾಗಿದೆ. ಕೆಲ ತಿಂಗಳ ಹಿಂದಷ್ಟೆ ಕರ್ಜಗಿ ಪದವಿ ಕಾಲೇಜಿಗೆ ನನ್ನ ವರ್ಗಾವಣೆಯಾಗಿದೆ. ಅಲ್ಲಿನ ಕಾಲೇಜಿನಲ್ಲೂ ಇಂಥದ್ದೆ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದ್ದೇನೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ತಾಲೂಕು ಅದ್ಯಕ್ಷ ಹೀರು ರಾಠೊಡ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ಅನಾರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ ರಜೆ ನೀಡಬೇಕು. ಅಲ್ಲದೇ ತಿಂಗಳಿಗೊಂದು ವೇತನ ಸಹಿತ ರಜೆ ನೀಡಬೇಕು. 2009ರೊಳಗಾಗಿ ಎಂಫೀಲ್ ಪದವಿ ಪಡೆದವರನ್ನು ಪಿಎಚ್‌ಡಿ ಎಂದು ಪರಿಗಣಿಸಬೇಕೆಂದು ಮನವಿ ಮಾಡಿದರು.
ಹಿರಿಯ ಉಪನ್ಯಾಸಕಿ ರಾಜೇಶ್ವರಿ ಸ್ವಾಗತಿಸಿದರು. ಕರ್ಜಗಿ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ ಅವಟೆ, ಡಾ| ಶಾಕೀರಾ ತನ್ವೀರ, ಡಾ| ಸಾವಿತ್ರಿ ಕೃಷ್ಣ, ಡಾ| ದತ್ತಾತ್ರೇಯ ಎಚ್, ಡಾ| ಸಂಗಣ್ಣ ಸಿಂಗೆ ಆನೂರ, ಭಗವಾನಸಿಂಗ್ ರಜಪೂತ್, ಡಾ| ಶಾಂತಪ್ಪ ಮೇಲಕೇರಿ, ಡಾ| ಸುರೇಖಾ ಕರೂಟಿ, ಡಾ| ಸುಗೂರೇಶ್ವರ, ಶ್ರೀದೇವಿ ರಾಠೊಡ, ಖುತೇಜಾ ನಸ್ರೀನ್, ವೈಜನಾಥ ಭಾವಿ, ಪವನಕುಮಾರ ನಾಯ್ಕೋಡಿ, ಮಡಿವಾಳಪ್ಪ ಮುಗಳಿ, ಗೌರಿಶಂಕರ ಗುರೆ, ಸುರೇಶ ಮುಗಳಿ, ಮಮತಾ ಪಾಟೀಲ, ಸಿಬ್ಬಂದಿಗಳಾದ ಚಿದಾನಂದ, ಖಾಜಾಲಾಲ್ ಹಾಗೂ ಮತ್ತಿತರರು ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.