ಒಗ್ಗಟ್ಟಿನ ಬಲದಿಂದ ಸ್ವಾಭಿಮಾನಿ ಬದುಕು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Team Udayavani, Jun 16, 2022, 3:03 PM IST
ಶಿರಸಿ: ಎಲ್ಲರೂ ಸಂಘಟನೆಗೊಂಡಾಗ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ಸಮಾಜದಲ್ಲಿ ಸ್ವಾಭಿಮಾನ ಜೀವನ ನಡೆಸಲು ನೆರವಾಗುತ್ತದೆ. ಒಗ್ಗಟ್ಟೇ ಬಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಗುರುವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮನುವಿಕಾಸ ಮತ್ತು ಈಡಲ್ ಗೀವ್ ಫೌಂಡೇಶನ್ ಹಮ್ಮಿಕೊಂಡ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಹಠದಿಂದ ಸಂಕಲ್ಪ ಶಕ್ತಿ ಮಾಡಬೇಕು. ಇದರಿಂದ ಕೀರ್ತಿ ತರುವ ಕಾರ್ಯ ಮಾಡಲು ಸಾಧ್ಯ ಎಂದರು.
ಸ್ವಾರ್ಥದ ಸಂಘಟನೆಗಳು ಇವೆ. ಆದರೆ, ಮನುವಿಕಾಸ ರಾಷ್ಟ್ರಕ್ಕೆ ಮುಖ ಮಾಡಿ ಬೆಳೆಸುತ್ತಿದೆ ಎಂದ ಅವರು, ಮನು ವಿಕಾಸ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಸ್ವಯಂ ಸೇವಾ ಸಂಸ್ಥೆ ಹೇಗಿರಬೇಕು ಎಂಬುದಕ್ಕೆ ಮನು ವಿಕಾಸ ಮಾದರಿ ಎಂದು ಬಣ್ಣಿಸಿದರು.
ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣಾ ಕಾರ್ಯ ಮಾಡುತ್ತಿದೆ ಎಂದ ಅವರು,ಸ್ವಸಹಾಯ ಸಂಘ ಹಾಗೂ ಅದರ ಮೂಲಕ ಮಹಿಳೆಯರನ್ನು ಸ್ವಾವಲಂಭಿ ಮಾಡುವ ಕಾರ್ಯ ಮಾಡುತ್ತಿದೆ. ಮನು ವಿಕಾಸದಿಂದ ಸಾಧಕ ಮಹಿಳೆಯರಿಗೂ, ಅವರಿಂದ ಸಂಸ್ಥೆಗೂ ಹೆಸರು ಎಂದರು.
ಮನುವಿಕಾಸದ ಗಣಪತಿ ಭಟ್ಟ ಮಾತನಾಡಿ, ಮಹಿಳಾ ನೇತಾರರು ಬೇಕು. ತನಗೋಸ್ಕರ ಮಾತ್ರವಲ್ಲ, ಸಮಾಜಕ್ಕೆ ಕೆಲಸ ಮಾಡುವವರನ್ನು ಸಮಾಜ ಬೆಂಬಲಿಸುತ್ತದೆ. ಮಹಿಳೆ ಸ್ವತಂತ್ರವಾಗಿ ನಿಂತರೆ ಏನಾದರೂ ಮಾಡಬಹುದು ಎಂದ ಅವರು, ಒಂದು ಸಾವಿರ ಸಿದ್ದಿ ಕುಟುಂಬ ಮುಖ್ಯ ವಾಹಿನಿಗೆ ತರಲಾಗುತ್ತದೆ ಎಂದರು.
ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗವತ, ಶಿಶು ಅಭಿವೃದ್ದಿ ಇಲಾಖೆ ದತ್ತಾತ್ರಯ ಭಟ್ಟ, ಪತ್ರಕರ್ತ ಜಿ.ಸುಬ್ರಾಯ ಭಟ್ಟ ಬಕ್ಕಳ, ಸಾಧನಾ ಸಂಸ್ಥೆಯ ಡಾ. ಇಸೆಬೆಲ್ಲ ದಾಸ್, ಎಂ.ಜಿ.ಹೆಗಡೆ ಇತರರು ಇದ್ದರು.
ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ನಿರ್ದೇಶಕ ಬಿ.ಕೆ.ಕೆಂಪರಾಜು ವಹಿಸಿದ್ದರು. ಕದಂಬ ಕಲಾ ವೇದಿಕೆಯಿಂದ ಪ್ರಾರ್ಥಿಸಲಾಯಿತು. ಅಶ್ವತ್ಥ ನಾಯ್ಕ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ವಂದಿಸಿದರು. ಶೇಖರ ನಾಯ್ಕ ನಿರ್ವಹಿಸಿದರು. ಇದೇ ವೇಳೆ ಮಹಾದೇವಿ ಅರೇರ, ಶೋಭಾ ಅರೇರ, ಕಾಳಿಕಾ ಭವಾನಿ ಸಂಸ್ಥೆ, ಕಮಲಾ ನಾಯ್ಕ, ಹುಲಿಮನೆ ಸಂಘ, ಲಕ್ಷ್ಮೀ ಎಸಳೆ, ಶ್ಯಾಮಲಾ ನಾಯ್ಕ, ಮಾರಿಕಾಂಬಾ ಸಂಘ,ಶೋಭಾ ನಾಯ್ಕ, ಚೈತನ್ಯ ಸಂಘವನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.