ಅಮೆರಿಕದಲ್ಲಿ ಬಡ್ಡಿ ದರ ಶೇ.0.75 ಹೆಚ್ಚಳ
Team Udayavani, Jun 17, 2022, 6:28 AM IST
ವಾಷಿಂಗ್ಟನ್: ಹಣದುಬ್ಬರದ ಹೊಡೆತದಿಂದ ತತ್ತರಿಸಿರುವ ಅಮೆರಿಕವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಯುಎಸ್ ಫೆಡರಲ್ ರಿಸರ್ವ್, 1994ರ ಬಳಿಕ ಗರಿಷ್ಠ ಮಟ್ಟದಲ್ಲಿ ಬಡ್ಡಿ ದರವನ್ನು ಏರಿಕೆ ಮಾಡಿದೆ.
ಬುಧವಾರ ತನ್ನ ಹಣಕಾಸು ಪರಾಮರ್ಶೆ ಸಭೆಯ ಬಳಿಕ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಬರೋಬ್ಬರಿ ಶೇ.0.75ರಷ್ಟು ಹೆಚ್ಚಳ ಮಾಡಿದೆ. 30 ವರ್ಷಗಳಲ್ಲೇ ಬಡ್ಡಿ ದರ ಇಷ್ಟೊಂದು ಏರಿಕೆಯಾಗಿರುವುದು ಇದೇ ಮೊದಲು.
ಹಣದುಬ್ಬರ ಪ್ರಮಾಣವನ್ನು ಮತ್ತೆ ಶೇ.2ಕ್ಕಿಳಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದೇವೆ. ಬಡ್ಡಿ ದರ ಏರಿಕೆಯು ಇನ್ನೂ ಮುಂದುವರಿಯುವ ನಿರೀಕ್ಷೆಯಿದೆ ಎಂದೂ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಹೇಳಿದೆ.
ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಹಣದುಬ್ಬರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದು ಜಾಗತಿಕ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಜೊತೆಗೆ, ಚೀನಾದಲ್ಲಿ ಕೊರೊನಾ ಸೋಂಕು ಹೆಚ್ಚಳ ಮತ್ತು ಲಾಕ್‌ಡೌನ್ ಕೂಡ ಪೂರೈಕೆ ಸರಪಳಿಗೆ ಸಮಸ್ಯೆ ಉಂಟುಮಾಡಿದೆ ಎಂದೂ ಕಮಿಟಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.