ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Jun 17, 2022, 7:13 AM IST
ಮೇಷ:
ಮಾತೃಸಮಾನರಿಂದ, ಸ್ತ್ರೀಯರಿಂದ ಸುಖ. ಗೃಹೋಪಕರಣಗಳಲ್ಲಿ ವೃದ್ಧಿ. ದೂರದ ಮಿತ್ರರ ಸಮಾಗಮ. ಆಹಾರ ಸೇವನೆಯಲ್ಲಿ ಮಿತವಿರಲಿ. ಹಿಂದೆ ಮಾಡಿದ ಸತ್ಕಾರ್ಯದಿಂದ ಶ್ಲಾಘನೆ. ದೇವತಾ ಸನ್ನಿಧಾನ ದರ್ಶನದಿಂದ ತೃಪ್ತಿ.
ವೃಷಭ:
ಕಾರ್ಯಕ್ಷೇತ್ರದಲ್ಲಿ ಅತೀ ಶ್ರಮ ವಹಿಸಿ ಗುರಿ ಸಾಧನೆ. ಮಾನಸಿಕ ಗೊಂದಲವಿದ್ದರೂ ಕಿರಿಯರಿಂದ ಸಹಾಯ ಒದಗುವುದು. ಆತುರದ ನಿರ್ಣಯ ಬೇಡ. ಸಣ್ಣ ಪ್ರಯಾಣದಿಂದ ಲಾಭ.
ಮಿಥುನ:
ಧನಾಗಮ ವೃದ್ಧಿ. ಸಮಯಕ್ಕೆ ಸರಿಯಾಗಿ ಸಹಾಯ ಒದಗುವುದು. ಉತ್ತಮ ವ್ಯಕ್ತಿಗಳ ಒಡನಾಟ. ಪರಊರ ಕಾರ್ಯದಲ್ಲಿ ಜಯ. ಉತ್ತಮ ಬದಲಾವಣೆ. ಲಾಭದ ವಿಚಾರದಲ್ಲಿ ತೃಪ್ತಿ ಇರಲಿ.
ಕರ್ಕ:
ಸಾಹಸದಿಂದ ದಿನ ಆರಂಭ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಉತ್ತಮ ಆಲೋಚನೆ, ಮಿತ್ರರ ಸಹಾಯದಿಂದ ಜಯ. ಹಿಂದೆ ಶತ್ರುಗಳಾದವರಿಂದ ಸಂಧಾನ ಪ್ರಸ್ತಾಪ. ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ.
ಸಿಂಹ:
ಉನ್ನತ ಸ್ಥಾನಮಾನ ಕಾರ್ಯ ಸಾಧನೆಗೆ ಆರ್ಥಿಕ ವ್ಯಯ. ಮಾತಿನಲ್ಲಿ ಸಹನೆ ಅಗತ್ಯ. ನಿರೀಕ್ಷಿತ ಸಹಾಯ ಲಭಿಸದು. ವಿರೋಧಿಗಳಿಗೆ ಅವಕಾಶ ನೀಡಬೇಡಿ. ನಿಮ್ಮ ಆಲೋಚನೆಯೊಂದಿಗೆ ನಡೆಯಿರಿ. ಅನ್ಯರ ಸಹಾಯ ಬೇಡ.
ಕನ್ಯಾ:
ಅನಿರೀಕ್ಷಿತ ಸ್ಥಾನಮಾನ ಗೌರವ ಸಿಗುವ ದಿನ. ಉದ್ಯೋಗದಲ್ಲಿ ತೃಪ್ತಿ. ಧನಲಾಭವಿದ್ದರೂ ಖರ್ಚಿನ ಹಿಡಿತವಿರಲಿ. ನೂತನ ವ್ಯವಹಾರದಲ್ಲಿ ಪ್ರಾಮಾಣಿಕತೆ ಪಾರದರ್ಶಕ ಇರಲಿ. ಹಿರಿಯರ ಆಶೀರ್ವಾದದಿಂದ ಅಭಿವೃದ್ಧಿ.
ತುಲಾ:
ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲವೆಂದು ಬೇಸರ ಬೇಡ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟವಾಗುವ ಸಾಧ್ಯತೆ. ದೂರ ಪ್ರದೇಶದ ಕೆಲಸಕಾರ್ಯಗಳಲ್ಲಿ ತೃಪ್ತಿ, ಸಮಾಧಾನ.
ವೃಶ್ಚಿಕ:
ದೇವತಾ ಸ್ಥಳ ಸಂದರ್ಶನ. ದೂರ ಪ್ರಯಾಣ, ಗುರುಹಿರಿಯರ ಆಶೀರ್ವಾದ, ನೂತನ ಮಿತ್ರರ ಭೇಟಿ, ಮನೆಯಲ್ಲಿ ಸಂತಸದ ವಾತಾವರಣ.
ಧನು:
ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಕಾರ್ಯಗಳಲ್ಲಿ ಪ್ರಗತಿ. ವಿಘ್ನ ಪರಿಹಾರ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಹಿಡಿತವಿರಲಿ. ದಾಂಪತ್ಯ ಸುಖ ಪರಸ್ಪರ ಪ್ರೋತ್ಸಾಹ. ಮಿತ್ರರಿಂದ ಲಾಭ.
ಮಕರ:
ಹಿರಿಯರ ಮನಸ್ಸನ್ನು ನೋಯಿಸದಿರಿ. ಕೆಲಸ ಕಾರ್ಯಗಳಲ್ಲಿ ಪಾಲುದಾರಿಕಾ ವ್ಯವಹಾರದಲ್ಲಿ ಲಾಭ. ಸಣ್ಣ ಪ್ರಯಾಣದಿಂದ ಲಾಭ. ಆರೋಗ್ಯ ಸುಧಾರಣೆ.
ಕುಂಭ:
ಶೀತ ಕಫ ಬಾಧೆ ಇದ್ದರೂ ಆರೋಗ್ಯ ಸುಧಾರಿಸುವುದು. ಧನಲಾಭದ ಕೊರತೆ ಇರದು. ಅನ್ಯರ ಸಂಪರ್ಕ ಸಹಾಯದ ನಿರೀಕ್ಷೆ ಸಲ್ಲದು. ಮನೆಯಲ್ಲಿ ಶಾಂತಿ, ಸಮಾಧಾನಕ್ಕೆ ಆದ್ಯತೆ ನೀಡಿ. ಕಾರ್ಯಕ್ಷೇತ್ರದಲ್ಲಿ ಏಕಾಗ್ರತೆ ಅಗತ್ಯ.
ಮೀನ:
ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ಗೌಪ್ಯತೆಯಿಂದ ಲಾಭ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶಿಸಿ. ದೂರದ ವ್ಯವಹಾರದಲ್ಲಿ ಲಾಭ. ದಾಂಪತ್ಯ ಸುಖ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.