![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 17, 2022, 5:13 PM IST
ಕಾರವಾರ: ಸ್ಕೂಡ್‌ವೇಸ್ ಕಳೆದ 15 ವರ್ಷದಿಂದ ಸರ್ಕಾರದ ಸಂಚಾರಿ ಆರೋಗ್ಯ ಘಟಕದಿಂದ ಹಿಡಿದು ಒಟ್ಟು 22 ಯೋಜನೆಗಳಲ್ಲಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಸಂಸ್ಥೆಯ ಹೆಸರು ಕೆಡಿಸಲು ಕಾಣದ ಕೈಗಳು ಕೆಲಸ ಮಾಡಿದ್ದು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸ್ಕೂಡ್‌ವೇಸ್ ಕಾರ್ಯಾಧ್ಯಕ್ಷ ಡಾ| ವೆಂಕಟೇಶ ನಾಯ್ಕ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೂಡ್‌ವೇಸ್ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆ. ಇದರಲ್ಲಿ 300 ಜನ ಕೆಲಸ ಮಾಡುತ್ತಿದ್ದಾರೆ. ಐಎಸ್‌ಒ ಪ್ರಮಾಣ ಪತ್ರ ಪಡೆದಿದೆ. ಆದರೆ ಸಂಸ್ಥೆಯ ಹೆಸರು ಕೆಡಿಸಲು ಕೆಲವರು ಯತ್ನಿಸಿದ್ದು, ಈಗ ಅವರ ವಿರುದ್ಧ ದಾಖಲೆ ಸಹಿತ ಕಾನೂನು ಹೋರಾಟ ಮುಂದುವರಿಯಲಿದೆ ಎಂದೂ ಹೇಳಿದರು.
ವ್ಯಕ್ತಿಯೋರ್ವರು ಆರೋಗ್ಯ ಇಲಾಖೆಯ ಲೆಟರ್ ಹೆಡ್, ಸಹಿ ಪೂರ್ಜರಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎಂದರು. ಅಜಯ್ ಭಟ್ ಎಂಬ ವ್ಯಕ್ತಿ ನಮ್ಮ ಸಂಸ್ಥೆಯಲ್ಲಿ ಹಿಂದೆ ಕೆಲಸ ಮಾಡಿದ್ದು, ಅವರು ನಮ್ಮಲ್ಲಿ ಈಗ ಇಲ್ಲ. ಶಿರಸಿ ಇನ್ಫೋ ಎಂಬ ಜಾಲತಾಣ ನಡೆಸುತ್ತಿದ್ದು, ಶಿರಸಿ ಮಾರಿಕಾಂಬಾ ದೇವಸ್ಥಾನದ ಬಗ್ಗೆ ಪ್ರಚಾರ ನೀಡಿದ್ದರು. ನಂತರ ಪ್ರಚಾರ ಮಾಡಿದಕ್ಕೆ ಕೆಲ ಬಿಲ್ ತಂದು, ಅದನ್ನು ಪಾವತಿಸುವಂತೆ ಕೇಳಿಕೊಂಡರು. ತಮ್ಮಷ್ಟಕ್ಕೆ ತಾವೇ ಪ್ರಚಾರ ನೀಡಿ, ನಂತರ ಹಣ ಕೊಡಿ ಎಂದರೆ, ಹೇಗೆ. ದೇವಸ್ಥಾನ ಟ್ರಸ್ಟ್‌ನಿಂದ ಹಣ ಪಾವತಿಸಲು ಸಾಧ್ಯವಿಲ್ಲ ಎಂದೆವು. ನಂತರ ನನಗೆ ಕೊಲೆ ಬೆದರಿಕೆ ಬಂತು. ಮನೆ ಎದುರು ವಾಮಾಚಾರ ನೆಡಸಿದರು. ಮನೆಯ ಮೇಲೆ ಡ್ರೋಣ ಹಾರಿಸಿದರು. ಇದಾವುದಕ್ಕೂ ನಾವು ಬಗ್ಗಿಲ್ಲ. ನಮ್ಮ ಸ್ಕೂಡ್‌ವೇಸ್ ತನ್ನ ಕೆಲಸ ಮಾಡಿಕೊಂಡು ಹೊರಟಿದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ನಮಗೆ ಸಿಕ್ಕಿದೆ. ಸಿಎಸ್ ಆರ್ ಕೆಲಸ ಸಹ ಮಾಡಿದೆ ಎಂದು ವಿವರಿಸಿದರು.
ಬದನಗೋಡ ಪಂಚಾಯತನ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಎಂಬಾತ ಶಿರಸಿ ಇನ್ಫೋ ಎಂಬ ಎಫ್‌ಬಿ ಪೇಜ್‌ನಲ್ಲಿ ಸ್ಕೂಡ್‌ವೇಸ್ ಸಂಸ್ಥೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದರು.
ಕಾರವಾರ, ದಾವಣಗೆರೆ ಡಿಎಚ್‌ಒ ಅವರು ಸ್ಕೂಡ್‌ವೇಸ್ ಸಂಸ್ಥೆ ಸರಿಯಾಗಿ ಕೆಲಸ ಮಾಡಿಲ್ಲ. ಹಾಗಾಗಿ 3 ಕೋಟಿ ವಸೂಲಾತಿಗೆ ಪತ್ರ ಬರೆದಿದ್ದಾರೆ ಎಂದೂ, ಈ ಆರೋಪಗಳ ಬಗ್ಗೆ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ, ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು.
ಈಗ ಬಸವರಾಜ ನಂದಿಕೇಶ್ವರಮಠ ಹಾಗೂ ಅಜಯ್ ಭಟ್ ದೂರಿಗೆ ಲಗತ್ತಿಸಿದ ಪತ್ರ ನಕಲಿ. ಅವರು ಡಿಎಚ್‌ಒ ಕಚೇರಿ ಪತ್ರ, ಲೆಟರ್ ಹೆಡ್, ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಕಾರವಾರ, ದಾವಣಗೆರೆ ಡಿಎಚ್‌ಒ ಪತ್ರ ಬರೆದಿದ್ದಾರೆ. ಹಾಗೂ ನಂದಿಕೇಶ್ವರ ಜಿಲ್ಲಾ ನ್ಯಾಯಾಧೀಶರಿಗೆ ಬರೆದ ಪತ್ರ ಸಹ ನಕಲಿ ಎಂದಾಗಿದೆ. ಶಿರಸಿ ಮಾರಿಕಾಂಬಾ ದೇವಸ್ಥಾನ ಲೆಟರ್ ಹೆಡ್ ಸಹ ಫೋರ್ಜರಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಇವರ ಮೇಲೆ ದೂರು ದಾಖಲಿಸಿದ್ದೇವೆ. ಅಲ್ಲದೆ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎರಡು ಕ್ರಿಮಿನಲ್ ಪ್ರಕರಣ ಸಹ ದಾಖಲಿಸಿದ್ದೇವೆ ಎಂದರು.
ನಾವು ಶಿರಸಿಯ ಬ್ಲಾಕ್‌ವೆುàಲ್ ತಂಡಕ್ಕೆ ಹೆದರುವುದಿಲ್ಲ. ಕಾನೂನಾತ್ಮಕ ಹೋರಾಟ ಹಾಗೂ ಪ್ರತಿಭಟನೆ ನಡೆಸುತ್ತೇವೆ. ನಾವು ಸರ್ಕಾರಿ ಸಂಸ್ಥೆ, ಸಂಘ ಸಂಸ್ಥೆ ಹಾಗೂ ಕಾರ್ಪೂರೇಟ್ ಸಂಸ್ಥೆಗಳ ಜೊತೆ ಕೆಲಸ ಮುಂದುವರಿಸಲಿದ್ದೇವೆ. ಫೋರ್ಜರಿ ಪತ್ರ ಬರೆದು, ಸಂಸ್ಥೆಯ ಹೆಸರು ಕೆಡಿಸುವುದು ಸರಿಯಲ್ಲ. ಇದು ಮುಂದುವರಿದರೆ, ಇಂತಹ ಕಿಡಗೇಡಿಗಳಿಗೆ ತೊಂದರೆ ಆಗಲಿದೆ ಎಂದು ಹೇಳಿದರು.
ಸ್ಕೂಡ್‌ವೇಸ್ ಯೋಜನಾಧಿಕಾರಿ ರಿಯಾಜ್ ಮಾತನಾಡಿ, ಸಂಸ್ಥೆ ಸಮಾಜ ಸೇವೆಯ ಜೊತೆಗೆ ಹಲವು ಉತ್ತಮ ಕೆಲಸ ಮಾಡಿದೆ. ಸಂಸ್ಥೆಯಲ್ಲಿ 300 ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಕಾರಣವೇ ಇಲ್ಲದೆ ಸಂಸ್ಥೆ ವಿರುದ್ಧ ಪಿತೂರಿ ಮಾಡುವುದು ಸರಿಯಲ್ಲ. ಸಂಸ್ಥೆಗೆ ಕೇಡು ಬಯಸಬಾರದು ಎಂದು ವಿನಂತಿಸಿದರು.
ಯೋಜನೆಗಳ ಮ್ಯಾನೇಜರ್ ಮಾಲತಿ ಕರ್ಕಿ ಮಾತನಾಡಿ, ಸ್ಕೂಡ್‌ವೇಸ್ ದಶಕಗಳಿಗೂ ಹೆಚ್ಚು ಕಾಲದಿಂದ ಜನರ ನಡುವೆ ಇದೆ. ಸಂಸ್ಥೆಯ ಕಾರ್ಯವೈಖರಿಯನ್ನು ಜನ, ಸರ್ಕಾರ ನೋಡಿದೆ. ಸ್ಕೂಡ್‌ವೇಸ್ ಯಶಸ್ವಿಯಾಗಿ ಜಾರಿ ಮಾಡಿದ ಯೋಜನೆಯನ್ನು ಮುಖ್ಯಮಂತ್ರಿ ರಾಜ್ಯವ್ಯಾಪಿ ಘೋಷಣೆ ಮಾಡಿದ್ದಾರೆ. ಇಂಥ ಸಂಸ್ಥೆ ಮೇಲೆ ಕಾರಣವೇ ಇಲ್ಲದೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಸುಧೀರ್ ಶೆಟ್ಟಿ, ಪ್ರಜ್ಞಾ ಕುಮಾರ್ ಉಪಸ್ಥಿತರಿದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.