ರೈತರಿಗೆ ತೊಗರಿ ಬೀಜದ ಮಿನಿ ಕಿಟ್ ವಿತರಣೆ
Team Udayavani, Jun 17, 2022, 6:12 PM IST
ಮುದ್ದೇಬಿಹಾಳ: ಹುಲ್ಲೂರ ತಾಂಡಾದ ಶ್ರೀ ಮಾರುತೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಫಲಾನುಭವಿ ರೈತರಿಗೆ ಗ್ರಾಮ ವ್ಯಾಪ್ತಿಯ ಢವಳಗಿ ಹೋಬಳಿ ರೈತ ಸಂಪರ್ಕ ಕೇಂದ್ರದಿಂದ 2022-23ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಆರ್‌ಜಿ-811 ತಳಿಯ ತೊಗರಿ ಬೀಜದ ಮಿನಿ ಕಿಟ್‌ಗಳನ್ನು ಗುರುವಾರ ವಿತರಿಸಲಾಯಿತು.
ಹುಲ್ಲೂರ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಮಾತನಾಡಿ, ರೈತರು ಸರ್ಕಾರದ ಯೋಜನೆ, ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.
ಕೃಷಿ ಅಧಿಕಾರಿ ಪ್ರಭುಗೌಡ ಕಿರದಳ್ಳಿ ಜಿಆರ್‌ಜಿ-811 ತಳಿಯ ಬೀಜದ ಮಹತ್ವ, ಬಳಕೆ ಮತ್ತು ಸಾಗುವಳಿ ಬಗ್ಗೆ ತಿಳಿಸಿ ಬಿತ್ತುವಿಕೆಗೆ ಜೂನ್-ಜುಲೈ ಸೂಕ್ತ ಕಾಲವಾಗಿದ್ದು, ಸಾಲಿನಿಂದ ಸಾಲಿಗೆ 5-6 ಅಡಿ ಅಂತರ ಕಾಯ್ದುಕೊಂಡರೆ ಪ್ರತಿ ಎಕರೆಗೆ 6-7 ಕ್ವಿಂಟಲ್ ಇಳುವರಿ ಲಭ್ಯವಾಗುತ್ತದೆ. ಈ ತಳಿ ನೆಟೆರೋಗ ನಿರೋಧಕ ಶಕ್ತಿ ಹೊಂದಿದ್ದು ಈ ಬೀಜ ಬಿತ್ತನೆಗೆ ನೀರಾವರಿ ಭೂಮಿ ಯೋಗ್ಯವಾಗಿದೆ. ಬಿತ್ತುವಿಕೆ ಪೂರ್ಣಗೊಂಡ ನಂತರ ಇಳುವರಿ ಬರುವವರೆಗೂ 3 ಹಂತದಲ್ಲಿ ಬೆಳೆಯ ಜಿಪಿಎಸ್ ಸಮೀಕ್ಷೆ ನಡೆಸುವುದಾಗಿ ತಿಳಿ ಹೇಳಿದರು.
ಆತ್ಮಾ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಸಜ್ಜನ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ ಫಲಾನುಭವಿ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.