ಸಹಕಾರಿ ಸಂಘಗಳು ರೈತರ ಜೀವನಾಡಿ: ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ


Team Udayavani, Jun 17, 2022, 6:58 PM IST

1-dsff

ಪಿರಿಯಾಪಟ್ಟಣ: ಸಹಕಾರಿ ಸಂಘಗಳು ರೈತರಿಗೆ ಕಷ್ಟಕರ ಸಮಸ್ಯೆಗಳು ಎದುರಾದಾಗ ಅವರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಜೀವನಾಡಿಗಳಾಗಿದ್ದು,ಇವುಗಳ ಪ್ರಗತಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡ ತಿಳಿಸಿದರು.

ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಗೋಡನ್ ಮತ್ತು ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನತೆಗೆ ಸಹಕಾರ ಸಂಘಗಳು ಕಾಲಕಾಲಕ್ಕೆಅಗತ್ಯ ಸಾಲಸೌಲಭ್ಯಗಳನ್ನು ನೀಡುವ ಮೂಲಕ ರೈತರ ಪಾಲಿನ ಸಂಜೀವಿನಿಯಾಗಿದ್ದು, ಇವುಗಳಿಂದ ಸಾಲ ಪಡೆದುಕೊಂಡು ರೈತರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿ ಆರ್ಥಿಕವಾಗಿ ಸಬಲರಾಗಬೇಕು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 275 ಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು ಇವುಗಳಲ್ಲಿ ಕೇವಲ 10 ರಿಂದ 20 ಮಾತ್ರ ವಿಶೇಷ ಗುಣಮಟ್ಟದ ಕಟ್ಟಡಗಳನ್ನು ಹೊಂದಿವೆ ಅವುಗಳಲ್ಲಿ ಹಿಟ್ನೆಹೆಬ್ಬಾಗಿಲು ಸಹಕಾರವು ಒಂದು ಕೂಡ ಒಂದು. ಸಹಕಾರ ಸಂಘಗಳನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ರೈತರು ಸಹಕಾರ ನೀಡಬೇಕು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ರೈತರಿಗೆ ಅಗತ್ಯವಾದ ರಸಗೊಬ್ಬರ, ಬಿತ್ತನೆಬೀಜ, ಸಾಲಸೌಲಭ್ಯಗಳನ್ನು ನೀಡುತ್ತಿವೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 26 ಸಹಕಾರ ಸಂಘಗಳಿದ್ದು, ತಾಲ್ಲೂಕಿನ ಕಸಬಾ, ಹಿಟ್ನೆಹೆಬ್ಬಾಗಿಲು, ಹಲಗನಹಳ್ಳಿ, ದೊಡ್ಡಬ್ಯಾಲಾಳು ಸೇರಿದಂತೆ 6 ಸಹಕಾರ ಸಂಘಗಳ ಕಟ್ಟಡಕ್ಕಾಗಿ 2.9 ಕೋಟಿ ಹಣ ಬಿಡುಗಡೆ ಮಾಡಲಾಗಿ ಹಿಟ್ನೆಹೆಬ್ಬಾಗಿಲು ಸಹಕಾರ ಸಂಘದ ವತಿಯಿಂದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ 16 ಲಕ್ಷ ಸಾಲ ನೀಡಲಾಗಿದೆ. ಇದಾದ ನಂತರ ತಾಲ್ಲೂಕಿನ ಕಸಬಾ ಸಹಕಾರ, ದೊಡ್ಡಬ್ಯಾಲಾಳು ಸಹಕಾರ ಸಂಘ, ಸೇರಿದಂತೆ 5 ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ನೀಡಲಾಗಿದೆ. ತಾಲೂಕಿನ ಇತರೆ ಸಂಘಗಳಿಗೆ ಅನುದಾನ ನೀಡುತ್ತೇವೆ. ಹಿಟ್ನೆಹೆಬ್ಬಾಗಿಲು ಸಹಕಾರ ಸಂಘದಲ್ಲಿ ರೈತರಿಗೆ 738.92 ಲಕ್ಷ ಕೆಸಿಸಿ ಸಾಲ, 39.45 ಲಕ್ಷ ಸೌದೆ ಸಾಲ, 158.99 ಮಧ್ಯಮಾವಧಿ ಸಾಲ, 25.67 ಲಕ್ಷ ಲಿಂಕೇಜ್ ಸಾಲ, 85.74 ಲಕ್ಷ ಸ್ವಂತ ಬಂಡವಾಳ ಸಾಲ, 2021-22 ನೇ ಸಾಲಿನಲ್ಲಿ ಹುಸ ಸದಸ್ಯರಿಗೆ 11.27 ಲಕ್ಷ ಕೆಸಿಸಿ ಸಾಲ, 2022- 23 ನೇ ಸಾಲಿನಲ್ಲಿ 441.91 ಲಕ್ಷ ಸಾಲವನ್ನು ವಿತರಣೆ ಮಾಡಲಾಗಿದೆ ಎಂದರು.

ಶಾಸಕ ಕೆ.ಮಹದೇವ್ ಮಾತನಾಡಿ, ಹಿಂದೆ ತಾಲ್ಲೂಕಿನಲ್ಲಿ ಸಹಕಾರ ಸಂಘಗಗಳು ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿ ಅಭಿವೃದ್ದಿ ಕಾಣದೆ ಭ್ರಷ್ಟಚಾರದ ಕೂಪವಾಗಿದ್ದವು, ಕಳೆದ 4 ವರ್ಷಗಳಿಂದ ಹೊಸದಾಗಿ ಆಯ್ಕೆಯಾಗಿ ಬಂದವರು ಉತ್ತಮವಾಗಿ ಕೆಲಸ ಮಾಡುವ ಮೂಲಕ ಜನರ ಕಷ್ಟಕಾರ್ಪಣ್ಯಗಳನ್ನು ಅರಿತು ಕೆಲಸ ಮಾಡುತ್ತಿದೆ. ಪ್ರತಿ ಸಹಕಾರಿ ಸಂಘಗಳು ರೈತರ ಕಷ್ಟಗಳನ್ನು ಅರಿತು ಅವರಿಗೆ ಸೂಕ್ತ ಕಾಲದಲ್ಲಿ ಸಾಲಗಳನ್ನು ವಿತರಿಸಬೇಕು. ಸಾಲ ಸೌಲಭ್ಯಗಳನ್ನು ಪಡೆದ ರೈತರು ಸಹ ಸಕಾಲಕ್ಕೆ ಸಾಲವನ್ನು ಮರು ಪಾವತಿ ಮಾಡಬೇಕು. ಆ ಮೂಲಕ ಕೃಷಿ ಪತ್ತಿನ ಸಂಘಗಳು ಜನರ ಆಶೊತ್ತರಗಳಿಗೆ ಪೂರವಕಾಗಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಂ.ಡಿಸಿಸಿ ಬ್ಯಾಂಕ್ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಜನಾರ್ದನ್, ಉಪಾಧ್ಯಕ್ಷ ಸುನೀಲ್, ಸಂಘದ ಅಧ್ಯಕ್ಷ ಶಂಕರ್, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ಎಂ.ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿ.ಎನ್.ರವಿ, ನಿರ್ದೆಶಕ ಅನಿಲ್ ಕುಮಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಸಿಇಒ ಜಯರಾಂ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಪಿಕೆ.ಕೆ.ಹರೀಶ್, ಮುತ್ತೇಗೌಡ, ವಿನೋದ್ ಕುಮಾರ್, ರವಿ, ಗಾಯತ್ರಮ್ಮ, ಮಹದೇವ್, ನಾಗೇಂದ್ರ, ರಾಮನಾಯ್ಕ, ಜಗದೀಶ್, ಸಿಬ್ಬಂದಿಗಳಾದಹೆಚ್.ಕೆ.ನಟರಾಜ್, ಸಂತೋಷ್, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

Dali-dhanajaya

Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.