ಟೇಬಲ್ ಟೆನಿಸ್: ಜಾರ್ಜಿಕ್ ಡಾರ್ಕೊ ವಿರುದ್ಧ ಜಿ. ಸಥಿಯನ್ ದೊಡ್ಡ ಗೆಲುವು
Team Udayavani, Jun 17, 2022, 10:41 PM IST
ಝಾಗ್ರೆಬ್ (ಕ್ರೊವೇಷ್ಯಾ): ಭಾರತದ ಟೇಬಲ್ ಟೆನಿಸ್ ಪಟು ಜಿ. ಸಥಿಯನ್ ತಮ್ಮ ವೃತ್ತಿಬದುಕಿನಲ್ಲಿ ಬಹು ದೊಡ್ಡ ಗೆಲುವನ್ನು ಕಂಡಿದ್ದಾರೆ.
ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್ ಕೂಟದಲ್ಲಿ ಅವರು ವಿಶ್ವದ 6ನೇ ರ್ಯಾಂಕಿಂಗ್ ಆಟಗಾರ, ಯುರೋಪಿಯನ್ ಚಾಂಪಿಯನ್ ಜಾರ್ಜಿಕ್ ಡಾರ್ಕೊ ವಿರುದ್ಧ 3-1 ಅಂತರದ ಜಯ ಸಾಧಿಸಿ 16ರ ಸುತ್ತು ಪ್ರವೇಶಿಸಿದರು.
ಸಥಿಯನ್ ಗೆಲುವಿನ ಅಂತರ 6-11, 12-10, 11-9, 12-10. ಸ್ಲೊವೇನಿಯದ ಜಾರ್ಜಿಕ್ ಡಾರ್ಕೊ 2ನೇ ಶ್ರೇಯಾಂಕ ಹೊಂದಿದ್ದಾರೆ. ಇದು ಅಗ್ರ-10 ಪಟ್ಟಿಯ ಆಟಗಾರನ ವಿರುದ್ಧ ಸಥಿಯನ್ ಸಾಧಿಸಿದ ಕೇವಲ 2ನೇ ಜಯ. ಇದಕ್ಕೂ ಮುನ್ನ 2019ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ, ವಿಶ್ವದ ನಂ.5 ಆಟಗಾರ, ಜಪಾನಿನ ಟೊಮಕಾಝೊ ಹರಿಮೊಟೊ ವಿರುದ್ಧ ಗೆಲುವು ಕಂಡಿದ್ದರು.
ಮುಂಬರುವ ಕಾಮನ್ವೆಲ್ತ್ ಗೇಮ್ಸ್ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಸಂಪಾದಿಸಿರುವ ಜಿ. ಸಥಿಯನ್ಗೆ ಈ ಗೆಲುವು ಹೊಸ ಸ್ಫೂರ್ತಿ ತುಂಬುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.