ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ ಗಳಾಗಬೇಕೆ?: ಡಿಕೆ ಶಿವಕುಮಾರ್
Team Udayavani, Jun 19, 2022, 1:09 PM IST
ಬೆಂಗಳೂರು: ಇಷ್ಟು ವರ್ಷ ದೇಶವನ್ನು ಸೈನಿಕರು ಎಂಥೆಂತಹ ಸಂದರ್ಭಗಳಲ್ಲಿ ರಕ್ಷಣೆ ಮಾಡಿಲ್ವೇ. ಈಗ ಅಗ್ನಿಪಥ್ ಯೋಜನೆ ತಂದಿದ್ದಾರೆ. ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳುಹಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಸ್ ಗಳಾಗಬೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿಕೊಂಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಟ್ವೀಟ್ ಮಾತ್ರ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಹೆದರಿಕೊಳ್ಳದೆ ಧ್ವನಿ ಎತ್ತಬೇಕು. ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಂಕರಾಚಾರ್ಯ ಎಲ್ಲರ ಬಗ್ಗೆಯೂ ಪಠ್ಯದಲ್ಲಿ ಅವಮಾನವಾಗಿದೆ. ಕೆಲವು ಸ್ವಾಮೀಜಿಗಳು ಟ್ವೀಟ್ ಮಾಡಿ ದೂರು ಕೊಡುವ ಕೆಲಸ ಮಾಡಿದ್ದಾರೆ. ಆದರೆ ಇನ್ನಷ್ಟು ಸ್ವಾಮೀಜಿಗಳು ಧ್ವನಿ ಎತ್ತಬೇಕು. ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ಕೊಡುವುದು ಬೇಡ. ಸ್ವಾಮೀಜಿಗಳಿರುವುದು ಸಂಸ್ಕೃತಿ, ನ್ಯಾಯ ಉಳಿಸಲು. ಸರ್ಕಾರಕ್ಕೆ ಹೆದರಿಕೊಂಡು ಸುಮ್ಮನಿರಿವುದು ಬೇಡ. ಅವರೇ ಧ್ವನಿ ಎತ್ತದಿದ್ದರೆ ಯಾರು ಎತ್ತಬೇಕು ಎಂದು ಪ್ರಶ್ನಿಸಿದರು.
ಇದು ಒಂದು ಜಾತಿ ಧರ್ಮದ ವಿಚಾರವಲ್ಲ. ಎಲ್ಲರೂ ಕೂಡ ಒಗ್ಗಟ್ಟು ಪ್ರದರ್ಶಿಸಬೇಕು. ಸರ್ಕಾರ ಶಾಂತಿ ಭಂಗ ಮಾಡುವ ಕೆಲಸ ಮಾಡುತ್ತಿದೆ. ಅವಮಾನವಾದಾಗ ಒಕ್ಕಲಿಗರ ಸಂಘ ಯಾಕೆ ಮಾತಾಡುತ್ತಿಲ್ಲ? ಬೇರೆ ಸಂಘಟನೆಗಳು ಯಾಕೆ ಮಾತನಾಡುತ್ತಿಲ್ಲ ಎಂದರು.
ವಿದ್ಯಾರ್ಥಿಗಳು ಟೆರರಿಸ್ಟ್ ಗಳಾ?: ಮೈಸೂರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ಕೊಟ್ಟಿರುವ ವಿಚಾರಕ್ಕೆ ಕಿಡಿಕಾರಿದ ಡಿಕೆಶಿ, ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ ? ರಸ್ತೆಯಲ್ಲಿ ಏನು ಭದ್ರತೆ ಕೊಡಬೇಕೋ ಕೊಡಲಿ ರೋಡ್ ಶೋ ನಡೆಸಿ ರಾಜಕೀಯ ಮಾಡಿ ಆದರೆ ವಿದ್ಯಾರ್ಥಿಗಳನ್ನು ಯಾಕೆ ಅನುಮಾನದಿಂದ ನೋಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಹಾದು ಹೋಗುವ ಮಾರ್ಗದಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಏನು ಟೆರರಿಸ್ಟ್ ಗಳಾ? ಮೋದಿ ಬಂದು ಹೋಗಲಿ, ಬೇಡ ಎಂದವರ್ಯಾರು. ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು. ಆದರೆ, ಕಾಲೇಜುಗಳಿಗೆ ರಜೆ ಕೊಡುತ್ತಿರುವುದು ಯಾಕೆ ಎಂದು ಟೀಕೆ ಮಾಡಿದರು.
ಇದನ್ನೂ ಓದಿ:ರಬಕವಿ-ಬನಹಟ್ಟಿ: ಜಗದಾಳ ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಮೋದಿ ಬರುತ್ತಿರುವುದು ಜನಕ್ಕೆ ಅನುಕೂಲ ಮಾಡಿಕೊಡಲಲ್ಲ. ಅವರ ಪಕ್ಷದ ನಾಯಕರ ಅನುಕೂಲಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ 40% ಸರ್ಕಾರ ಎಂದಿದ್ದಕ್ಕೆ ಉತ್ತರ ಕೊಡಲಿ. ನಮ್ಮ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡಲಿ ಎಂದು ಸವಾಲೆಸೆದರು.
ಡಿಕೆಶಿ ಹಿಂದು ವಿರೋಧಿ ಎಂಬ ಬಿಜೆಪಿ ಟ್ವೀಟ್ ವಿಚಾರಕ್ಕೆ ತಿರುಗೇಟು ನೀಡಿದ ಅವರು, ನನ್ನ ಕ್ಷೇತ್ರದಲ್ಲಿ 300-400 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿಸಿದ್ದೇನೆ. ಇದನ್ನು ಬೇಕಾದರೆ ಬಂದು ನೋಡಲಿ. ನಾನು ಹಿಂದೂ ಧರ್ಮೀಯ. ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು. ಪಕ್ಷದಲ್ಲಿ ನಾವು ಯಾರಿಗೆ ಬೇಕಾದರೂ ಅಧಿಕಾರ ಕೊಡ್ತೇವೆ. ಇವರಿಗೆ ಏನಾಗಬೇಕು. ಅವರಿಗೆ ನಮ್ಮ ಯುವಕರ ಬಗ್ಗೆ ಭಯವಿದೆ. ಸಂಘಟನೆಗಳ ಬಗ್ಗೆ ಭಯವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.