ಯುವಕರು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲಿ: ಹಿರಿಯ ಪತ್ರಕರ್ತ ಶ್ರೀಶೈಲ ಕೆ.ಬಿರಾದಾರ
ಬರಹದ ಬೆಳಕು ಕೃತಿ ಲೋಕಾರ್ಪಣೆ ಪ್ರತಿಭೆ ಯಾರ ಸ್ವತ್ತು ಅಲ್ಲ
Team Udayavani, Jun 19, 2022, 1:39 PM IST
ಬಾಗಲಕೋಟೆ: ಯುವಕರು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀಶೈಲ ಕೆ.ಬಿರಾದಾರ ಹೇಳಿದರು.
ಅಮೀನಗಡ ಶಾದಿಮಹಲ್‌ನಲ್ಲಿ ಪತ್ರಕರ್ತ ಎಚ್.ಎಚ್.ಬೇಪಾರಿಯವರ ಬರಹದ ಬೆಳಕು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿ, ಆಧುನಿಕ ದಿನಮಾನಗಳಲ್ಲಿ ಎಲ್ಲ ಕ್ಷೇತ್ರವೂ ಉದ್ಯಮವಾಗಿವೆ. ಆದರೆ ಸಾಹಿತ್ಯ ಮಾತ್ರ ಸಾಹಿತ್ಯೋದ್ಯಮವಾಗಿಲ್ಲ. ಅದು ಸಾಹಿತ್ಯಕ್ಷೇತ್ರದ ಶಕ್ತಿ ಎಂದರು.
ಪತ್ರಕರ್ತ ಎಚ್.ಎಚ್.ಬೇಪಾರಿ ಅವರಲ್ಲಿ ಬರವಣಿಗೆಯ ಹಸಿವಿದೆ ವರದಿಗಾರರಾಗಿ ತಮ್ಮ ಭಾಗದಲ್ಲಿ ನಡೆದ ಹಲವಾರು ಘಟನೆಗಳನ್ನು ಪತ್ರಿಕೆಗಳಲ್ಲಿ ಬರೆದು ಅದರಲ್ಲಿ ವಿಶೇಷವಾಗಿರುವ ಬರಹಗಳನ್ನು ಆಯ್ದು ಸಂಗ್ರಹಿಸಿ ಕೃತಿ ರಚನೆ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು ಖುಷಿಯ ವಿಷಯ ಇಂತಹ ಕೃತಿಗಳು ನೂರಾಗಲಿ, ಸಾಹಿತ್ಯ ಲೋಕಕ್ಕೂ ಅವರ ಬರವಣಿಗೆ ವಿಸ್ತಾರಗೊಳ್ಳಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಚ್ ಡಿಸಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಪ್ರತಿಭೆ ಯಾರ ಸ್ವತ್ತು ಅಲ್ಲ. ಪ್ರತಿಭೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸಹಕಾರ ಇದೆ. ಪತ್ರಕರ್ತ ಎಚ್.ಎಚ್. ಬೇಪಾರಿ ಅವರು ಸಮಾಜಮುಖೀಯಾಗಿ ನಮ್ಮ ಪರಿಸರದಲ್ಲಿ ಆಗಿರುವ ಹಲವಾರು ಘಟನೆಗಳನ್ನು ಪತ್ರಿಕೆಯ ಮೂಲಕ ಬರೆದು ಎಚ್ಚರಗೊಳಿಸಿ ಅವುಗಳಿಗೆ ನಿಶ್ಚಿತವಾಗಿ ರೂಪಕೊಡುವಲ್ಲಿ ಯಶ್ವಸಿಯಾಗಿದ್ದಾರೆ. ವರದಿಗಾರರಾಗಿ ಕೆಲಸ ಮಾಡುವುದರ ಜತೆಗೆ ಚಿಕ್ಕ ವಯಸ್ಸಿನಲ್ಲಿ ಪತ್ರಿಕಾ ಬರಹಗಳನ್ನು ಸಂಗ್ರಹಣೆ ಮಾಡಿ ಕೃತಿ ರಚನೆ ಮಾಡಿದ್ದು, ಉತ್ತಮ ಕಾರ್ಯ ಅವರ ಕೃತಿಗಳು ಹೆಚ್ಚಾಗಲಿ ಎಂದು ಶುಭಹಾರೈಸಿದರು.
ಅದ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ, ಅಂಜುಮನ್ ಕಮಿಟಿ ಅಧ್ಯಕ್ಷ ಅಜಮೀರ ಮುಲ್ಲಾ, ಹಿರಿಯ ಲೇಖಕ ಶಿಕ್ಷಕ ಸಿದ್ದಲಿಂಗಪ್ಪ ಬೀಳಗಿ ಮಾತನಾಡಿದರು.ಸಾಹಿತಿ ಮಹಾದೇವ ಬಸರಕೋಡ ಕೃತಿಯನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಇಳಕಲ್ಲಿನ ಖ್ಯಾತ ಉದ್ಯಮಿ ರಾಜು ಬೋರಾ ಅವರಿಗೆ ಸನ್ಮಾನಿಸಲಾಯಿತು ಮತ್ತು ಕೃತಿಕಾರರಾದ ಎಚ್.ಎಚ್. ಬೇಪಾರಿ ಅವರಿಗೆ ವಿವಿಧ ಸಂಘಟನೆ, ಜನಪ್ರತಿನಿಧಿಗಳಿಂದ ಹಾಗೂ ವಿವಿಧ ಸಮಾಜದ ಮುಖಂಡರಿಂದ ಸನ್ಮಾನಿಸಲಾಯಿತು.
ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.ಪಪಂ ಸದಸ್ಯರಾದ ರಮೇಶ ಮುರಾಳ, ವಿಜಯಕುಮಾರ ಕನ್ನೂರ, ಸಂತೋಷ ಐಹೊಳ್ಳಿ, ಬಾಬು ಛಬ್ಬಿ, ಉದ್ಯಮಿ ಪೀರಾ ಖಾದ್ರಿ,ತಾಲ್ಲೂಕ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಮುಖ್ಯೋಪಾಧ್ಯಾಯ ಹಸನಬಸರಿ ಬೇಪಾರಿ, ಶ್ರೀಶೈಲ ತತ್ರಾಣಿ, ಹಿರಿಯರಾದ ಇಸ್ಮಾಯಿಲಸಾಬ ಬೇಪಾರಿ, ಮೀರಾಸಾಬ ಮುಲ್ಲಾ, ಕಾಶೀಮಸಾಬ ಬಾಗೇವಾಡಿ, ಡಿ.ಪಿ.ಅತ್ತಾರ, ಉಮರಸಾಬ ಬೇಪಾರಿ, ದಾವಲಸಾಬ ಬೇಪಾರಿ ಇದ್ದರು. ಶಿಕ್ಷಕ ಎಸ್.ಎಚ್. ಹೊಸಮನಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.