ಗದುಗಿಗೆ ಕೀರ್ತಿ ತಂದ ವೀರೇಶ್ವರ ಪುಣ್ಯಾಶ್ರಮ
ವಿಕಲಚೇತನರ ಸ್ವಾಭಿಮಾನಿ ಬದುಕಿಗೆ ಪ್ರೇರಣೆ ನೀಡಿದ ಪುಣ್ಯಕ್ಷೇತ್ರ: ಶಾಸಕ ಎಚ್.ಕೆ. ಪಾಟೀಲ ಅಭಿಮತ
Team Udayavani, Jun 19, 2022, 5:15 PM IST
ಗದಗ: ಜಗತ್ತಿನಲ್ಲಿ ಮಾನವ ಹಕ್ಕುಗಳ ಕಲ್ಪನೆ ಬರುವ ಮೊದಲೇ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಿ, ವಿಕಲಚೇತನರಿಗೆ ಸಮಾಜದಲ್ಲಿ ಗೌರವ, ಉದ್ಯೋಗ ಹಾಗೂ ಸ್ವಾಭಿಮಾನಿಯಾಗಿ ಬದುಕಲು ಪ್ರೇರಣೆ, ಶಿಕ್ಷಣ ನೀಡಿದ ಯಾವುದಾದರೂ ಪುಣ್ಯಕ್ಷೇತ್ರವಿದ್ದರೆ ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದು ಶಾಸಕ ಡಾ|ಎಚ್.ಕೆ. ಪಾಟೀಲ ಹೇಳಿದರು.
ನಗರದ ಪಂ| ಪಂಚಾಕ್ಷರ ಗವಾಯಿಗಳ 78ನೇ ಹಾಗೂ ಡಾ|ಪಂ|ಪುಟ್ಟರಾಜ ಕವಿ ಗವಾಯಿಗಳ 12ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿಕಲಚೇತನರ ಅಭಿವೃದ್ಧಿ ಬಗ್ಗೆ ಚಿಂತನೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಅಂಧ-ಅನಾಥರಿಗೆ ಬದುಕಲು ಕಲಿಸಿಕೊಟ್ಟ ವೀರೇಶ್ವರ ಪುಣ್ಯಾಶ್ರಮ ಗದುಗಿಗೆ ಕೀರ್ತಿಯ ಗರಿ ಮೂಡಿಸಿದೆ. ಅಲ್ಲದೆ, ಕಲ್ಲಯ್ಯಜ್ಜನವರು ಪುಣ್ಯಾಶ್ರಮವನ್ನು ಅಭಿವೃದ್ಧಿಪಡಿಸುವತ್ತ ಐತಿಹಾಸಿಕ ದಾಖಲೆ ಮಾಡಲು ದಾಪುಗಾಲು ಹಾಕಿದ್ದಾರೆ. ಅವರಿಗೆ ಉಭಯ ಗುರುಗಳು ಶಕ್ತಿ ತುಂಬಲಿ ಎಂದು ಹೇಳಿದರು. ಬಹುತೇಕ ಮಠಗಳಿಗೆ ಜಾತಿಯ ಲೇಪನ ಇರುತ್ತದೆ. ಆದರೆ, ಈ ಮಠವನ್ನು ನಮ್ಮ ಮಠ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮಠವಾಗಿ ಬೆಳೆದಿದೆ. ಅದು ಈ ಮಠದ ಹಿರಿಮೆಯಾಗಿದೆ. ಬೇರೆ ಬೇರೆ ಧರ್ಮಗಳು ಈ ಮಠಕ್ಕೆ ನಡೆದುಕೊಳ್ಳುತ್ತಿರುವುದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿರುವುದರಿಂದ ವೀರೇಶ್ವರ ಪುಣ್ಯಾಶ್ರಮ ಮಾದರಿಯಾಗಿದೆ ಎಂದರು.
ಡಾ|ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕಣ್ಣಿದ್ದ ಹಾನಗಲ್ ಗುರು ಕುಮಾರ ಶ್ರೀಗಳು ಕಣ್ಣಿಲ್ಲದ ಪಂಚಾಕ್ಷರ ಗವಾಯಿಗಳವರಿಗೆ ಗುರುಕೃಪೆ ನೀಡಿ ಗಾನಯೋಗಿಗಳನ್ನಾಗಿಸಿದರು. ಕಷ್ಟಗಳು ಗುರುವಿನ ಕೃಪೆಯಿಂದ ಕರಗುತ್ತವೆ. ಗುರುವಿನ ಕೃಪೆಯಿಂದ ಪಂ. ಪಂಚಾಕ್ಷರ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ-ಅನಾಥ ಮಕ್ಕಳ ಬಾಳಿಗೆ ಬೆಳಕಾದರು. ಬಸವಾದಿ ಶರಣರು ಬಿಟ್ಟುಹೋದ ಮೌಲ್ಯಗಳನ್ನು ಉಭಯ ಶ್ರೀಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೇರು ಪರ್ವತಗಳಂತಾಗಿದ್ದಾರೆ. ನಿಜವಾದ ಭಕ್ತ ಎಂದರೆ ಗುರುಗಳ ಪಾದಕ್ಕೆ ಅಡ್ಡ ಬೀಳುವುದಲ್ಲ. ಆಸೆ ಆಮಿಷಗಳನ್ನು ಬಿಟ್ಟು ಸತ್ಯ ಶುದ್ಧವಾದ ಕಾಯಕ ಮಾಡುವವನೇ ನಿಜವಾದ ಭಕ್ತ ಎಂದು ಹೇಳಿದರು.
ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಯಲಬುರ್ಗಾ ಬಸವಲಿಂಗೇಶ್ವರ ಶಿವಾಚಾರ್ಯರು, ಗುಳೇದಗುಡ್ಡ ಒಪ್ಪತ್ತೇಶ್ವರ ಸಂಸ್ಥಾನಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಅಟ್ನೂರ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು, ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು, ಶಿವಾನಂದ ಮಠದ ಸದಾಶಿವಾನಂದ ಶ್ರೀಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪಿ.ಸಿ. ಹಿರೇಮಠ, ರಾಜು ರೇವಣಕರ, ಪರಶುರಾಮ ಕಟ್ಟಿಮನಿ, ಫಿರಸಾಬ್ ಕೌತಾಳ, ಪರಶುರಾಮ ಬೆಕ್ಕಿನಕಣ್ಣವರ, ಬಿ.ಜಿ. ಅಮ್ಮಿನಭಾವಿ, ಎ.ಎಸ್. ಮೃತ್ಯುಂಜಯ ಅಜ್ಜಂಪುರಶೆಟ್ರಾ ಭಾಗವಹಿಸಿದ್ದರು. ಇದೇ ವೇಲೆ ಆಶ್ರಮಕ್ಕೆ ಸಹಾಯ ಸಹಕಾರ ಸಲ್ಲಿಸಿದ ಭಕ್ತಾಧಿಗಳನ್ನು ಸನ್ಮಾನಿಸಲಾಯಿತು.
ನೀಲಮ್ಮ ಸೋಮಪ್ಪ ಉಡಮಕಲ್ಲ ಅವರಿಂದ ಪೂಜ್ಯರಿಗೆ ತುಲಭಾರ ಸೇವೆ ಜರುಗಿತು. ದಿಯಾ ಕೌತಾಳ ಪ್ರಾರ್ಥಿಸಿ, ಸಿದ್ಧೇಶ್ವರಶಾಸ್ತ್ರಿ ಬೂದಿಹಾಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: 2019ರಲ್ಲೇ ಗದಗ ಹಾಲಕೆರೆ ಮಠದ 11.19 ಎಕರೆ ವಕ್ಫ್‌ಗೆ!
ಗದಗ: ಭೀಷ್ಮ ಕೆರೆಗೆ ಸಚಿವ ಎಚ್.ಕೆ. ಪಾಟೀಲ ಬಾಗಿನ ಅರ್ಪಣೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.