ಯೋಗ ಕ್ಲಾಸ್‌ಗೆ ಹೋಗುವ ಮುನ್ನ ನೆನಪಿಡ ಬೇಕಾದ್ದೇನು?


Team Udayavani, Jun 20, 2022, 10:05 AM IST

ಯೋಗ ಕ್ಲಾಸ್‌ಗೆ ಹೋಗುವ ಮುನ್ನ ನೆನಪಿಡ ಬೇಕಾದ್ದೇನು?

ಯೋಗ ಇದೀಗ ಜನಪ್ರಿಯವಾಗಿದ್ದು, ಯೋಗಾಸನ ಕಲಿಯಲು ಉತ್ಸಾಹ ತೋರಲಾಗುತ್ತಿದೆ. ಶಾಲಾ ಕಾಲೇಜು, ವಿಶ್ವವಿದ್ಯಾಲಯ, ಸಂಘ ಸಂಸ್ಥೆಗಳಲ್ಲಿ ಯೋಗ ಕಲಿಸಲಾಗುತ್ತಿದೆ. ಪಟ್ಟಣ, ನಗರ ಪ್ರದೇಶಗಳ ಬಡಾವಣೆಗಳಲ್ಲಿ ಯೋಗ ಕೇಂದ್ರಗಳು ತಲೆ ಎತ್ತಿವೆ. ಪ್ರಾರಂಭದಲ್ಲಿ ಯೋಗ ಕಲಿಯುವವರು ಒಂದಿಷ್ಟು ಸಲಹೆ ಸೂಚನೆಗಳನ್ನು ಗಮನಿಸಿ.

ಕಲಿಕಾ ಕೇಂದ್ರಗಳ ಹಿನ್ನೆಲೆ ಗಮನಿಸಿ: ಮೊದಲು ಯೋಗ ಕೇಂದ್ರಗಳ ಇತಿಹಾಸ, ಹಿನ್ನೆಲೆಗಳನ್ನು ಗಮನಿಸಿ. ಅಲ್ಲಿ ಕಲಿಸುವವರು ತಜ್ಞ ಯೋಗ ಶಿಕ್ಷಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ದೈಹಿಕ ನ್ಯೂನತೆ ಹಾಗೂ ಕಾಯಿಲೆಗಳನ್ನು ಮರೆಮಾಚಬೇಡಿ. ಮೊದಲು ಅವುಗಳ ಬಗ್ಗೆ ಯೋಗ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ. ವೈದ್ಯರು ಹಾಗೂ ರೋಗಿಗಳು ಹೊಂದಿರುವ ರೀತಿಯಲ್ಲಿ ಯೋಗ ಶಿಕ್ಷಕರೊಂದಿಗೆ ಸೌಹಾರ್ದ ಸಂಬಂಧವಿರಲಿ. ಬಳಿಕ ಯೋಗ ಕಲಿಯಲು ಆರಂಭಿಸಿ.

ಕಾಯಿಲೆಗಳಿದ್ದರೆ ಶಿಕ್ಷಕರ ಗಮನಕ್ಕೆ ತನ್ನಿ
ಉದಾಹರಣೆಗೆ ಮಧುಮೇಹ, ರಕ್ತದೊತ್ತಡ ಜyಟಛಿrಠಿಛಿnsಜಿಟn, vಛಿrಜಜಿಜಟ, (ತಲೆ ಸುತ್ತುವುದು), ಸ್ಲಿಪ್‌ ಡಿಸ್ಕ್, ಹೃದಯ ಸಂಬಂಧಿ ಕಾಯಿಲೆ, ಬೆನ್ನುಹುರಿ, ಸೊಂಟನೋವು, ಥೈರಾಯ್ಡ್ ಗ್ರಂಥಿ ತೊಂದರೆ ಮತ್ತಿತರ ಅನಾರೋಗ್ಯ ಸೇರಿದಂತೆ ಶಸ್ತ್ರಚಿಕಿತ್ಸೆ ನಡೆದಿದ್ದರೆ ಅವುಗಳನ್ನು ಯೋಗ ಶಿಕ್ಷಕರ ಗಮನಕ್ಕೆ ತನ್ನಿ. ಪ್ರತೀ ಕಾಯಿಲೆಗಳ ನಿವಾರಣೆಗೆ ನಿರ್ದಿಷ್ಟ ಆಸನಗಳು ಇರುತ್ತವೆ. ಇವುಗಳ ಮೇಲೆ ಯೋಗ ಶಿಕ್ಷಕರು ವಿಶೇಷ ಒತ್ತು ನೀಡಲು ಸಲಹೆ ನೀಡುತ್ತಾರೆ. ಅವರು ಹೇಳುವುದನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ವಿಧಾನದಲ್ಲಿ ಕ್ರಮಬದ್ಧವಾಗಿ ಯೋಗಾಸನ ಪ್ರಾರಂಭಿಸಿ.

ಆಸನ ಮಾಡುವ ವಿಧಾನ
ಸೂರ್ಯ ನಮಸ್ಕಾರ ಮಾಡುವಾಗ 12 ಹಂತದ ಆಸನಗಳಿರುತ್ತವೆ. (ಕೆಲವು ಗುರು ಪರಂಪರೆಗಳಲ್ಲಿ 10 ಆಸನಗಳು ಇರುತ್ತವೆ) ಪ್ರತೀ ಹಂತದ ಆಸನವನ್ನು ಕ್ರಮಬದ್ಧ ಉಸಿರಾಟದೊಂದಿಗೆ ಮಾಡಿ. ಪ್ರಾರಂಭದಲ್ಲಿ ತಪ್ಪಾಗಿ ಅರ್ಥೈಸಿ ಕೊಂಡರೆ ಸರಿಯಲ್ಲದ ಕ್ರಮದಲ್ಲಿ ಆಸನ ಮಾಡಿದರೆ ಯೋಗ ಶಿಕ್ಷಕರೇ ನಿಮ್ಮ ಹತ್ತಿರ ಬಂದು ಸರಿಪಡಿಸುತ್ತಾರೆ. ಮೊದಲು ಸಾಧ್ಯವಾದಷ್ಟು ಭಂಗಿಯಲ್ಲಿ ಮಾತ್ರ ಆಸನ ಮಾಡಿ. ಗುಂಪುಗಳಲ್ಲಿ ಮಾಡುವಾಗ ಬೇರೆಯವರನ್ನು ಅನುಸರಿಸಬೇಡಿ. ನಿಮ್ಮ ಸಾಮ ರ್ಥ್ಯಕ್ಕೆ ಅನುಗುಣವಾಗಿ ಆಸನ ಪ್ರಾರಂಭಿಸಿ.

ನಾಲ್ಕು ಸ್ಥಿತಿಗಳಲ್ಲಿ ಆಸನಗಳು
ಆಸನಗಳನ್ನು ನಾಲ್ಕು ಸ್ಥಿತಿಯಲ್ಲಿ (posture) ಮಾಡಲಾಗುತ್ತದೆ. 1. ನಿಂತುಕೊಂಡಿರುವ ಸ್ಥಿತಿ (standing)
2. ಕುಳಿತು ಅಭ್ಯಸಿಸುವುದು(sitting) ,
3. ಬೋರಲಾಗಿ ಮಲಗಿರುವುದು(prone),
4. ಸಹಜವಾಗಿ ಮಲಗಿದ ದೇಹ ಸ್ಥಿತಿಯಲ್ಲಿ (supine) ಮಾಡುವ ಆಸನ. ಈ ನಾಲ್ಕು ಭಂಗಿಯಲ್ಲಿ ನಿರ್ದಿಷ್ಟವಾಗಿ ಆಸನಗಳನ್ನು ಮಾಡಬೇಕಾಗುತ್ತದೆ. ಪ್ರತೀ ಹಂತದಲ್ಲೂ ನಿಗಾವಹಿಸಿ. “ಸ್ಥಿರಂ ಸುಖಂ ಆಸನಂ’ ಎಂಬಂತೆ ಆನಂದದಿಂದ ಆಸನಗಳನ್ನು ಅನುಭವಿಸಿ. ಪ್ರತಿ ಆಸನದ ಉಪಯೋಗ ತಿಳಿದುಕೊಳ್ಳಿ. ಪ್ರತೀ ಆಸನದ ಕೊನೆಯಲ್ಲಿ ವಿಶ್ರಾಂತ ಸ್ಥಿತಿಗೆ ಬಂದು ಅದರ ಪರಿಣಾಮಗಳನ್ನು ಆನಂದದಿಂದ ಅನುಭವಿಸಿ.

ಯೋಗ ಶಿಕ್ಷಕರ ಮಾರ್ಗದರ್ಶನ ದಂತೆ ಉಚ್ಛಾಸ‌ (Inhale)ಹಾಗೂ ನಿಶ್ವಾಸ (Exhale) ಉಸಿರಾಟದೊಂದಿಗೆ ಆಸನಗಳನ್ನು ಅಭ್ಯಾಸ ಮಾಡಿ. ಇಲ್ಲದಿದ್ದರೆ ಅದು ಉಪಯೋಗ ಆಗುವುದಿಲ್ಲ. ವ್ಯಾಯಾಮ ಇಲ್ಲವೇ ಸರ್ಕಸ್‌ ಆಗುತ್ತದೆ.

ಪ್ರಾಣಾಯಾಮ ಮಾಡುವಾಗ ಎಚ್ಚರ
ಪ್ರಾಣಾಯಾಮ ಎಂದರೆ ಉಸಿರಾಟದ ಮೂಲಕ ಪ್ರಾಣಶಕ್ತಿಯನ್ನು ವೃದ್ಧಿಸಿಕೊಳ್ಳುವ ಕ್ರಿಯೆ. ಉಸಿರಾಟದ ವೇಗವನ್ನು ತಗ್ಗಿಸಲು ಪ್ರಾಣಾಯಾಮ ಸಹಾಯವಾಗುತ್ತದೆ. ಈ ಅಭ್ಯಾಸದಿಂದ ಉಸಿರಾಟ ಆಳವಾಗಿ, ಗಾಢವಾಗಿ ನಿಧಾನ ಆಗುತ್ತಿದ್ದಂತೆ ಮನಸ್ಸಿನ ಕ್ಷೋಭೆಗಳು ತೊಡೆದು ಹೋಗಿ ಮನಸ್ಸು ಪುನರ್ರಚಿತಗೊಂಡು ಪ್ರಶಾಂತವಾಗುತ್ತದೆ. ಸರಿಯಾದ ಮಾರ್ಗದರ್ಶನದಲ್ಲಿ ಕ್ರಮಬದ್ಧವಾಗಿ ಪ್ರಾಣಾಯಾಮ ಕಲಿಯಬೇಕು. ತಪ್ಪಾಗಿ ಮಾಡುವ ವಿಧಾನದಿಂದ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಇತಿಮಿತಿಗಳನ್ನು ಅರಿತು ಅಭ್ಯಸಿಸಬೇಕು. ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಪದ್ಮಾಸನ, ಸಿದ್ಧಾಸನ, ಸುಖಾಸನ ಹಾಗೂ ವಜ್ರಾಸನದ ಸ್ಥಿತಿಯಲ್ಲಿ ಮುದ್ರೆಗಳೊಂದಿಗೆ ಕ್ರಮಬದ್ಧ ಸ್ಥಿತಿಯಲ್ಲಿ ಇರಬೇಕು. ಅವಸರ ಪಡಬಾರದು. ಸಮಚಿತ್ತದಿಂದ ಆರಾಮವಾಗಿ ಅಭ್ಯಾಸ ಮಾಡಿ. ಇದರಿಂದ ಉಸಿರಾಟ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಕೆಲವರಿಗೆ ಬಹಳ ಕಾಲ ಧ್ಯಾನದ ಸ್ಥಿತಿಯಲ್ಲಿ ಇರಲು ಕಷ್ಟವಾಗುತ್ತದೆ. ಏಕೆಂದರೆ ಕಾಲು ಮಡಚಿ ಕುಳಿತುಕೊಳ್ಳುವ ಅಭ್ಯಾಸ ಇರುವುದಿಲ್ಲ. ಆಗ ಪ್ರಾಣಾಯಾಮ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಪ್ರತೀ ಬಾರಿ ಪ್ರಾಣಾಯಾಮ ಅಭ್ಯಾಸ ಮಾಡಿದ ಬಳಿಕ ಅದರ ಪ್ರಯೋಜನವನ್ನು ಆನಂದಿಸಿ. ಅದರ ಅನುಕೂಲತೆಗಳೇನು ಎಂಬುದನ್ನು ಅರಿತುಕೊಳ್ಳಬೇಕು. ಯೋಗ ಎನ್ನುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರುತ್ತಾರೆ. ಹೊಟ್ಟೆ ಕರಗಿಸಲು ಹಾಗೂ ದೇಹದ ತೂಕ ಉಳಿಸಿಕೊಳ್ಳಲು ಮಾಡುವ ವ್ಯಾಯಾಮ ಎಂದು ಭಾವಿಸಿರುತ್ತಾರೆ. ಇದು ತಪ್ಪು ಕಲ್ಪನೆ. ನಿರಂತರ ಯೋಗ ಅಭ್ಯಾಸದಿಂದ ಸ್ನಾಯುಗಳು ಬಲಗೊಳ್ಳುವುದರ ಜತೆಗೆ ಬುದ್ಧಿಶಕ್ತಿ, ಜ್ಞಾನ ಶಕ್ತಿ, ಮನೋಸಂಕಲ್ಪ ಏಕಾಗ್ರತೆ ವೃದ್ಧಿಸುತ್ತದೆ.

 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.